Site icon Vistara News

ಅರ್ಧ ಗಂಟೆ ಅಕ್ರಮ ಸೆರೆಯಾಗಿದ್ದ ವ್ಯಕ್ತಿಗೆ ಪೊಲೀಸರಿಂದಲೇ 50 ಸಾವಿರ ರೂ. ಪರಿಹಾರ ಒದಗಿಸಿದ ದಿಲ್ಲಿ ಹೈಕೋರ್ಟ್!

Delhi High Court

Delhi High Court

ನವದೆಹಲಿ: ಪೊಲೀಸ್ ಅಧಿಕಾರಿಗಳಿಬ್ಬರು (Delhi Police) ವ್ಯಕ್ತಿಯೊಬ್ಬನನ್ನು ಅರ್ಧ ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿದ್ದಕ್ಕಾಗಿ(illegally detained), ಆತನಿಗೆ 50 ಸಾವಿರ ರೂಪಾಯಿ ಪರಿಹಾರ (compensation) ನೀಡುವಂತೆ ದೆಹಲಿ ಹೈಕೋರ್ಟ್ (Delhi High Court) ಶುಕ್ರವಾರ ಆದೇಶಿಸಿದೆ. ಪರಿಹಾರ ಹಣವನ್ನು ಆ ಇಬ್ಬರು ಪೊಲೀಸ್ ಅಧಿಕಾರಿಗಳ ಸಂಬಳದಿಂದಲೇ ನೀಡಬೇಕು ಎಂದು ಹೇಳಿದೆ! ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಇಂಥದ್ದೇ ಪ್ರಕರಣದಲ್ಲಿ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿತ್ತು.

ಈ ಕೃತ್ಯಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಾಮೂಹಿಕವಾಗಿ ಹೊಣೆಗಾರರನ್ನಾಗಿಸಿರುವ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರ ಪೀಠವು, ಪೊಲೀಸರ ವೇತನದಿಂದ ಪರಿಹಾರವನ್ನು ವಸೂಲಿ ಮಾಡುವಂತೆ ಸೂಚಿಸಿದೆ. ಈ ಮೂಲಕ, ಪೊಲೀಸ್ ಅಧಿಕಾರಿಗಳು ತಮಗೆ ತಾವೇ ಕಾನೂನಾಗಲು ಸಾಧ್ಯವಿಲ್ಲ ಎಂಬ ಅರ್ಥಪೂರ್ಣ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಬೇಕಿದೆ ಎಂದು ಪೀಠ ಹೇಳಿತು.

ಈ ಸುದ್ದಿಯನ್ನೂ ಓದಿ: Gujarat High Court: 3 ವರ್ಷದೊಳಗಿನ ಮಕ್ಕಳನ್ನು ಪ್ರಿಸ್ಕೂಲ್‌ಗೆ ಸೇರಿಸುವುದು ಕಾನೂನುಬಾಹಿರ ಕೃತ್ಯ; ಗುಜರಾತ್ ಹೈಕೋರ್ಟ್

ನ್ಯಾಯಾಲಯದ ಕಳವಳ ಎಂದರೆ, ಅರ್ಜಿದಾರರನ್ನು (ಪಂಕಜ್ ಕುಮಾರ್ ಶರ್ಮಾ) ಬಂಧಿಸದೇ ಅವರನ್ನು ಠಾಣೆಯಲ್ಲಿ ಇಟ್ಟುಳ್ಳಲಾಗಿದೆ. ಅರ್ಜಿದಾರರಿಗೆ ಯಾವುದೇ ಕಾರಣ ನೀಡಿದೆ ಅವರನ್ನು ಎತ್ತಾಕೊಂಡು ಬಂದು ಠಾಣೆಯ ಲಾಕಪ್ಪಿನಲ್ಲಿಡಲಾಗಿದೆ. ನಾಗರಿಕರ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ಗಾಳಿಗೆ ತೂರಿ ಪೊಲೀಸ್ ಅಧಿಕಾರಿಗಳು ನಡೆದುಕೊಂಡಿರುವ ರೀತಿಯು ದಿಗಿಲು ಹುಟ್ಟಿಸುತ್ತದೆ. ಅರ್ಜಿದಾರರು ಲಾಕ್-ಅಪ್‌ನಲ್ಲಿ ಕಳೆದ ಸಮಯ, ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನವನ್ನು ಅನುಸರಿಸದೆ ಅರ್ಜಿದಾರರ ಸ್ವಾತಂತ್ರ್ಯವನ್ನು ಕಸಿದುಕೊಂಡ ಪೊಲೀಸ್ ಅಧಿಕಾರಿಗಳನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

2022ರ ಸೆಪ್ಟೆಂಬರ್‌ನಲ್ಲಿ ಪೊಲೀಸರು ತಮ್ಮನ್ನು ಅನಗತ್ಯವಾಗಿ ಬದರಪುರ್ ಠಾಣೆಯಲ್ಲಿ ಲಾಕಪ್ಪಿನಲ್ಲಿರಿಸಿಕೊಂಡಿದ್ದಕ್ಕಾಗಿ ಪರಿಹಾರವನ್ನು ಒದಗಿಸುವಂತೆ ಅರ್ಜಿದಾರರು ಶರ್ಮಾ ಅವರು ದಿಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅರ್ಜಿದಾರರು ಪೊಲೀಸರಿಗೆ ಕರೆ ಮಾಡಿ, ತಮ್ಮ ಅಂಗಡಿಗೆ ಗಾಯಗೊಂಡ ಮಹಿಳೆಯೊಬ್ಬರು ಬಂದಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸುವ ಬದಲು, ಮಾಹಿತಿ ನೀಡಿದ್ದ ಶರ್ಮಾ ಅವರನ್ನೇ ಸ್ಥಳದಿಂದ ಎತ್ತಾಕ್ಕೊಂಡು ಬಂದು, ಎಫ್ಐಆರ್ ಕೂಡ ದಾಖಲಿಸದೇ ಲಾಕಪ್ಪಿನಲ್ಲಿ ಹಾಕಿದ್ದರು. ಇದನ್ನು ಪ್ರಶ್ನಿಸಿ ಶರ್ಮಾ ಅವರು ದಿಲ್ಲಿ ಹೈಕೋರ್ಟ್‌ಗೆ ಹೋಗಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version