ಮುಂಬೈ: ಇದು ಭಯೋತ್ಪಾದನೆಯ ವಿರುದ್ಧದ ಹೋರಾಟ. ಆತನ ವಿರುದ್ಧ ಹೋರಾಡಲು ಒಂದು ವಿಶಿಷ್ಟ ಮಾರ್ಗವನ್ನು ರೂಪಿಸಿಕೊಂಡಿದ್ದೇನೆ. ನಾನು ದಾವೂದ್ ನನ್ನು ಸೋಲಿಸಲು ಬಯಸುತ್ತೇನೆ. ಹೀಗೆಂದು ಹೇಳಿರುವುದು ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಆಸ್ತಿಯನ್ನು ಹಲವು ಪಟ್ಟು ಹೆಚ್ಚು ಬೆಲೆಗೆ ಖರೀದಿಸಿದ ದೆಹಲಿ ಮೂಲದ ವಕೀಲ ಅಜಯ್ ಶ್ರೀವಾಸ್ತವ. ಎಲ್ಲರೂ ದಾವೂದ್ ಆಸ್ತಿಯ ಸಮೀಪಕ್ಕೆ ಹೋಗಲು ಹೆದರುತ್ತಿರುವ ನಡುವೆ ಅಜಯ್ ಮುಲಾಜಿಲ್ಲದ ಹಲವು ಪಟ್ಟು ಹೆಚ್ಚು ಬೆಲೆ ಕೊಟ್ಟು ಅದನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಸಾಹಸದ ಬಗ್ಗೆ ಮಾತನಾಡಿರುವ ಅವರು ಇದು ದೇಶ ಭಕ್ತಿ ಹಾಗೂ ಹಿಂದೂ ಸಮಾಜದ ಏಳಿಗೆಯ ಯೋಜನೆ ಎಂದು ಹೇಳಿದ್ದಾರೆ.
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳನ್ನು ಇತ್ತೀಚೆಗೆ ಹರಾಜು ಮೂಲಕ ಪಡೆದುಕೊಂಡ ಬಳಿಕ ಶ್ರೀವಾಸ್ತವ ಅವರು ಎಲ್ಲ ಗಮನ ಸೆಳೆದಿದ್ದಾರೆ. ಕೇವಲ 15,000 ರೂಪಾಯಿ ಮೀಸಲು ಬೆಲೆಯನ್ನು ಹೊಂದಿದ್ದ ಅತ್ಯಂತ ಚಿಕ್ಕ ಭೂಮಿಯನ್ನು ಅವರು 2 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಬುದು ಇನ್ನೂ ಅಚ್ಚರಿಯ ಸಂಗತಿ. ನಾನು ದಾವೂದ್ಗೆ ಸೇರಿದ್ದ ಸುತ್ತಮುತ್ತಲಿನ ಎಲ್ಲಾ ಭೂಮಿಯನ್ನು ಖರೀದಿಸಿದ್ದೇನೆ. ಈ ಸಣ್ಣ ತುಂಡು ಭೂಮಿ ಮಾತ್ರ ಉಳಿದಿತ್ತು. ಆದ್ದರಿಂದ ಎಲ್ಲರಿಗಿಂತ ಹೆಚ್ಚು ಅದನ್ನು ಬಿಡ್ ಮಾಡಬೇಕಾಯಿತು” ಎಂದು ಶ್ರೀವಾಸ್ತವ ವಿಶೇಷ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇದೇ ಮೊದಲಲ್ಲ
ಅಂದ ಹಾಗೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಆಸ್ತಿಯನ್ನು ಅವರು ಖರೀದಿಸುತ್ತಿರುವುದು ಇದೇ ಮೊದಲಲ್ಲ. ಅವರು ಇದನ್ನು ವರ್ಷಗಳಿಂದ ಮಾಡುತ್ತಿದ್ದಾರೆ. ಕರಾಚಿಯಲ್ಲಿ ಅಡಗಿದ್ದಾನೆಂದು ನಂಬಲಾದ ಭೂಗತ ಪಾತಕಿಯ ಎರಡು ಆಸ್ತಿಗಳನ್ನು 2001 ರಲ್ಲಿ ಮೊದಲ ಬಾರಿಗೆ ಖರೀದಿ ಮಾಡಿದ್ದರು. 2001ರಲ್ಲಿ ದಾವೂದ್ನ ಭೂಮಿಯನ್ನು ಆದಾಯ ತೆರಿಗೆ ಇಲಾಖೆ ಹರಾಜು ಹಾಕುತ್ತಿದೆ ಎಂದು ನಾನು ಪತ್ರಿಕೆಯಲ್ಲಿ ಓದಿದೆ. ಆದರೆ ಜನರು ಬಿಡ್ ಮಾಡಲು ಮುಂದೆ ಬರಲಿಲ್ಲ. ಅವರೆಲ್ಲರೂ ಭಯಭೀತರಾಗಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ಆತನನ್ನು ಸೋಲಿಸುವ ಉದ್ದೇಶದಿಂದ ಹರಾಜು ಮಾಡಿ ಪಡೆದೆ ಎಂಬುದಾಗಿ ಅವರು ಹೇಳಿದ್ದಾರೆ.
ಮುಂಬೈನ ನಾಗಪಾಡಾದಲ್ಲಿ ಭಯೋತ್ಪಾದಕನ ಒಡೆತನದ ಎರಡು ಅಂಗಡಿಗಳನ್ನು ವಕೀಲರು ಖರೀದಿಸಿದ್ದರು. ಆಗ ಅವರು ಒಬ್ಬರೇ ಬಿಡ್ದಾರರಾಗಿದ್ದರು. 2011ರಲ್ಲಿ ರಲ್ಲಿ ಮುಂಬೈ ನ್ಯಾಯಾಲಯವು ಅಜಯ್ ಪರವಾಗಿ ತೀರ್ಪು ನೀಡಿದ್ದರೂ ಅವರು ಅಂಗಡಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಇನ್ನೂ ಹೋರಾಡುತ್ತಿದ್ದಾರೆ. ಈ ಆದೇಶವನ್ನು ಬಾಂಬೆ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ದಾವೂದ್ ಸಹೋದರಿ ಹಸೀನಾ ಪಾರ್ಕರ್ ಅವರ ಮಕ್ಕಳು ಈ ಪ್ರಕರಣದ ವಿರುದ್ಧ ಹೋರಾಡುತ್ತಿದ್ದಾರೆ.
ನಾನು ಭಯೋತ್ಪಾದಕರ ವಿರುದ್ಧ ಹೋರಾಡಬೇಕು ಎಂದು ಬಯಸಿದೆ. ಅದರಲ್ಲಿ ಯಶಸ್ವಿಯಾದೆ. ಒಂದು ಬಾರಿ ನಾನು ಮುಂದೆ ಬಂದ ಬಳಿಕ ಈಗ ಹೆಚ್ಚಿನ ಜನರು ಬರಲು ಆರಂಭಿಸಿದ್ದಾರೆ ಎಂದು ಅಜಯ್ ಹೇಳಿದ್ದಾರೆ.
ಬೆದರಿಕೆ ಎದುರಿಸಿದ್ದ ಅಜಯ್
ಆಸ್ತಿಯನ್ನು ಖರೀದಿಸಿದ ನಂತರ ತಮಗೆ ಬೆದರಿಕೆಗಳು ಬಂದಿವೆ ಎಂದು ಅಜಯ್ ಹೇಳಿದ್ದಾರೆ. ಅದರ ನಂತರ, ನನಗೆ 11 ವರ್ಷಗಳ ಕಾಲ ಝಡ್ + ಭದ್ರತೆ ಸಿಕ್ಕಿತು ಎಂದು ವಕೀಲರು ಹೇಳಿಕೊಂಡಿದ್ದಾರೆ.
ದಾವೂದ್ ನನ್ನು ಸೋಲಿಸುವ ನನ್ನ ಉತ್ಸಾಹ ದೊಡ್ಡದು. ಭೂಗತ ಪಾತಕಿಯ ವಕೀಲರು ಕರೆ ಮಾಡಿದರೂ ನನ್ನನ್ನು ತಡೆಯಲು ಯಾರಿಗೂ ಆಗಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ದಾವೂದ್ ಇಬ್ರಾಹಿಂ ಆಸ್ತಿ 2 ಕೋಟಿ ರೂ.ಗೆ ಹರಾಜು; ಖರೀದಿಸಿದ ಧೈರ್ಯವಂತ ಯಾರು?
ಮೂರ್ನಾಲ್ಕು ವರ್ಷಗಳ ಹಿಂದೆ ದಾವೂದ್ ಕುಟುಂಬ ತನ್ನ ವಕೀಲರ ಮೂಲಕ ನನ್ನನ್ನು ಸಂಪರ್ಕಿಸಿ, ‘ನೀವು ಈ ಆಸ್ತಿಯನ್ನು ನನಗೆ ಮಾರಾಟ ಮಾಡಿ ನಿಮಗೆ ಎಷ್ಟು ಹಣ ಬೇಕು ಎಂದು ಕೇಳಿದ್ದರು. ಆದರೆ ನಾನು ಮಾರಲು ನಿರಾಕರಿಸಿದೆ ನನ್ನ ಗುರಿ ಹಣ ಸಂಪಾದಿಸುವುದು ಅಲ್ಲ” ಎಂದು ಅವರು ಹೇಳಿಕೊಂಡಿದ್ದಾರೆ.
ಬಂಗಲೆ ಖರೀದಿ ಮಾಡಿದ್ದ ಅಜಯ್
2020ರಲ್ಲಿ ದಾವೂದ್ನ ಪೂರ್ವಜರ ಬಂಗಲೆಯನ್ನು ಸಹ ಖರೀದಿಸಿದ್ದಾರೆ ಅಜಯ್. ದಾವೂದ್ ಹುಟ್ಟಿದ್ದು ಅಲ್ಲಿಯೇ. ಮದರಸಾಗಳು ಹೇಗೆ ಕಾರ್ಯನಿರ್ವಹಿಸುತ್ತವೆಯೋ ಹಾಗೆಯೇ ಅಲ್ಲಿ ಹಿಂದೂ ಶಾಲೆಯನ್ನು ನಿರ್ಮಿಸಲು ನಾನು ಬಯಸುತ್ತೇನೆ. ಈ ಉದ್ದೇಶಕ್ಕಾಗಿ ನಾನು ಸನಾತನ ಧರ್ಮ ಪಾಠಶಾಲಾ ಟ್ರಸ್ಟ್ ಅನ್ನು ಸ್ಥಾಪಿಸಿದ್ದೇನೆ ಎಂದು ಶ್ರೀವಾಸ್ತವ ಹೇಳಿಕೊಂಡಿದ್ದಾರೆ.
ವಕೀಲರು ಇನ್ನೂ ಬಂಗಲೆಯ ಸ್ವಾಧೀನ ಪಡೆದಿಲ್ಲ. ಈ ವರ್ಷ ಮಂಜೂರು ಆಗಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನಾನು ನಿನ್ನೆ ಖರೀದಿಸಿದ ಭೂಮಿ ಅವರ ಬಂಗಲೆಗೆ ಹತ್ತಿರದಲ್ಲಿದೆ. ನಾನು ಸುತ್ತಮುತ್ತಲಿನ ಎಲ್ಲಾ ಭೂಮಿಯನ್ನು ಖರೀದಿಸಿದ್ದೇನೆ. ಈ ತುಂಡು ಮಾತ್ರ ಉಳಿದಿತ್ತು. ಈ ಭೂಮಿ ಬೇರೊಬ್ಬರಿಗೆ ಹೋಗಿದ್ದರೆ ಸುತ್ತಮುತ್ತಲಿನ ಪ್ರದೇಶಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದವು” ಎಂದು ಅವರು ಹೇಳಿದರು. “ನಾನು ಇದನ್ನು ದೇಶಭಕ್ತಿ ಎಂದು ಪರಿಗಣಿಸುತ್ತೇನೆ” ಎಂದು ಅವರು ಹೇಳಿದರು.