ಈಗೊಂದು ಐದಾರು ವರ್ಷದಿಂಚೇಗೆ ಆನ್ಲೈನ್ ಶಾಪಿಂಗ್ (Online Shopping)ಎಂಬುದು ಭರ್ಜರಿ ಟ್ರೆಂಡ್ ಆಗಿದೆ. ಅದಕ್ಕಾಗಿಯೇ ಅಮೇಜಾನ್, ಫ್ಲಿಪ್ಕಾರ್ಟ್ನಂಥ ಹತ್ತುಹಲವು ಆನಲೈನ್ ವಾಣಿಜ್ಯ ಮಾರುಕಟ್ಟೆಗಳು ಸಿದ್ಧವಾಗಿವೆ. ಮನೆಯಲ್ಲಿ ಕುಳಿತು, ಬಹುತೇಕ ಎಲ್ಲ ವಸ್ತುಗಳನ್ನೂ ನೀವು ನಿಮಗೆ ಬೇಕಾದ ಇ -ಕಾಮರ್ಸ್ ಮಾರ್ಕೆಟ್ (E Commerce Market)ನಿಂದ ಆರ್ಡರ್ ಮಾಡಬಹುದು. ಅದು ನಿಮ್ಮನ್ನು ತಲುಪುವ ದಿನವೂ ಕೂಡ ಅಲ್ಲೇ ಗೊತ್ತಾಗಿಬಿಡುತ್ತದೆ. ಆದರೂ ಕೆಲವೊಮ್ಮ ಹೇಳಿದ ದಿನಾಂಕಕ್ಕಿಂತ ತಡವಾಗಿ ಡೆಲಿವರ್ ಆಗೋದು ಇದ್ದೇ ಇರುತ್ತದೆ. ಹಾಗೊಮ್ಮೆ ತಡವಾದರೆ ಎಷ್ಟು ತಡವಾಗಬಹುದು? ಒಂದೆರಡು ದಿನವೋ, ಬೇಡ, ಒಂದು ವಾರ ಲೇಟ್ ಆಗಬಹುದು. ಆದರೆ ದೆಹಲಿಯಲ್ಲಿ ಒಬ್ಬರು ತಾವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಬರೋಬ್ಬರಿ ನಾಲ್ಕು ವರ್ಷಗಳ ನಂತರ ಪಡೆದಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಇಂಥ ಅನುಭವ ಆಗಿರುವುದು ದೆಹಲಿ ಮೂಲದ ಟೆಕ್ಕಿ ನಿತಿನ್ ಅಗರ್ವಾಲ್ ಎಂಬುವರಿಗೆ. 2019ರಲ್ಲಿ ಅವರು ಚೀನಾದ ಇ ಕಾಮರ್ಸ್ ವೆಬ್ಸೈಟ್ ಅಲಿ ಎಕ್ಸ್ಪ್ರೆಸ್ನಲ್ಲಿ ಏನೋ ತಮಗೆ ಅಗತ್ಯ ಇರುವ ವಸ್ತುವನ್ನು ಆರ್ಡರ್ ಹಾಕಿದ್ದರು. ಆದರೆ ಅದೇ ವರ್ಷ ಮೇ ತಿಂಗಳಲ್ಲಿ ಭಾರತದಲ್ಲಿ ಅಲಿ ಎಕ್ಸ್ಪ್ರೆಸ್ ನಿಷೇಧಗೊಂಡಿತು. ಏನೇ ಆದರೂ ಅದಾಗಲೇ ಆರ್ಡರ್ ಮಾಡಿದ್ದ ವಸ್ತುಗಳನ್ನು ಅವರು ತಲುಪಿಸಬಹುದು ಎಂದು ನಿತಿನ್ ಅಗರ್ವಾಲ್ ಭಾವಿಸಿದ್ದರು. ಆದರೆ 2019ರಲ್ಲಿ ನಿತಿನ್ ಮಾಡಿದ್ದ ಆರ್ಡರ್ ಬಂದಿರಲೇ ಇಲ್ಲ. ಅದಿನ್ನು ಬರುವುದೇ ಇಲ್ಲ ಎಂದುಕೊಂಡಿದ್ದರು. ಆದರೀಗ ನಾಲ್ಕು ವರ್ಷಗಳ ಬಳಿಕ ಅಲಿ ಎಕ್ಸ್ಪ್ರೆಸ್ನಿಂದ ಆರ್ಡರ್ ಬಂದು, ನಿತಿನ್ ಅಗರ್ವಾಲ್ ಮನೆ ಬಾಗಿಲು ತಲುಪಿಕೊಂಡಿದೆ. ಅದರ ಫೋಟೋ ಶೇರ್ ಮಾಡಿಕೊಂಡ ನಿತಿನ್ ಅಗರ್ವಾಲ್ ‘ಎಂದಿಗೂ ಹೋಪ್ ಕಳೆದುಕೊಳ್ಳಬೇಡಿ’ ಎಂದು ಹೇಳಿದ್ದಾರೆ. ಇನ್ನು ನಿತಿನ್ ಆರ್ಡರ್ ಪ್ಯಾಕ್ ಮೇಲೆ 2019ರ ವರ್ಷ ಉಲ್ಲೇಖ ಆಗಿದೆ. ಅಂದರೆ ಭಾರತದಲ್ಲಿ ಅಲಿ ಎಕ್ಸ್ಪ್ರೆಸ್ ಬ್ಯಾನ್ ಆಗುವುದಕ್ಕೂ ಮೊದಲೇ ಇದು ಪ್ಯಾಕ್ ಆಗಿತ್ತು. ಆದರೆ ಈಗ 2023ರಲ್ಲಿ ತಲುಪಿದೆ.
ಇದನ್ನೂ ಓದಿ: Aadhaar Update: ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಅಪ್‌ಡೇಟ್‌ಗೆ ಒಂದೇ ದಿನ ಬಾಕಿ! ನೀವು ಮಾಡಿದ್ರಾ?
ನಿತಿನ್ ಅಗರ್ವಾಲ್ ಸೋಷಿಯಲ್ ಮೀಡಿಯಾ ಪೋಸ್ಟ್ ನೋಡುತ್ತಿದ್ದಂತೆ ಅನೇಕರು ತಮಗೆ ಆದ ಅನುಭವ ಹಂಚಿಕೊಂಡಿದ್ದಾರೆ. ಇನ್ನೊಂದಷ್ಟು ದಿನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ತಾನೂ ಅಲಿ ಎಕ್ಸ್ಪ್ರೆಸ್ನಲ್ಲಿ 2019ರಲ್ಲಿ ಆರ್ಡರ್ ಹಾಕಿದ್ದೆ. ಅದು ಎಂಟು ತಿಂಗಳ ಬಳಿಕ ಬಂದಿದೆ’ ಎಂದಿದ್ದಾರೆ. ಇದು ಎಕ್ಸ್ಪ್ರೆಸ್ನ ವೇಗ ಎಂದು ಕಿಚಾಯಿಸಿದ್ದಾರೆ. ಅಲಿ ಎಕ್ಸ್ಪ್ರೆಸ್ ಆ್ಯಪ್, ವೆಬ್ಸೈಟ್ಗಳು ಖರೀದಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ, ಸರಳವಾಗಿರಲಿಲ್ಲ. ಭದ್ರತೆ ನಿಯಮಗಳ ಕಾರಣಕ್ಕಾಗಿ ಅಲಿ ಎಕ್ಸ್ಪ್ರೆಸ್ನ್ನು ನಿಷೇಧಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ.
Never lose hope! So, I ordered this from Ali Express (now banned in India) back in 2019 and the parcel was delivered today. pic.twitter.com/xRa5JADonK
— Tech Bharat (Nitin Agarwal) (@techbharatco) June 21, 2023