Site icon Vistara News

Mani Shankar Aiyar : ನರಸಿಂಹ ರಾವ್‌ ಬಿಜೆಪಿಯ ಮೊದಲ ಪ್ರಧಾನಿ ಎಂದ ಮಣಿಶಂಕರ್‌ ಅಯ್ಯರ್‌!

Mani Shankar Aiyar and pv narasimha rao

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿ ಶಂಕರ್‌ ಅಯ್ಯರ್‌ (Mani Shankar Aiyar) ಅವರ ಆತ್ಮಕಥೆ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಣಿ ಶಂಕರ್‌ ಅವರು ಕಾಂಗ್ರೆಸ್‌ನಿಂದ ದೇಶದ ಪ್ರಧಾನಿಯಾಗಿದ್ದ ನರಸಿಂಹ ರಾವ್‌ ಅವರನ್ನು “ಬಿಜೆಪಿಯ ಪ್ರಧಾನಿʼ ಎಂದು ವ್ಯಾಖ್ಯಾನಿಸಿದ್ದಾರೆ.

ದೇಶದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಮಣಿ ಶಂಕರ್‌ ಅಯ್ಯರ್‌ ಅವರು, ರಾಜೀವ್‌ ಅವರೊಂದಿಗೆ ತಮಗಿದ್ದ ಸ್ನೇಹದ ಕುರಿತಾಗಿಯೂ ಪುಸ್ತಕದಲ್ಲಿ ಬರೆದಿದ್ದಾರೆ. ಅವರ ಬಾಲ್ಯದಿಂದ ಹಿಡಿದು, ಸರ್ಕಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ದಿನಗಳವರೆಗೆ ಎಲ್ಲ ಮಾಹಿತಿಯನ್ನು ಪುಸ್ತಕದಲ್ಲಿ ಕಾಣಬಹುದಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನರಸಿಂಹ ರಾವ್‌ ಅವರ ಕುರಿತಾಗಿಯೂ ಮಾತನಾಡಿದ್ದಾರೆ. ಹಾಗೆಯೇ ಬಾಬ್ರಿ ಮಸೀದಿ ಪ್ರಕರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
“ರಾಜೀವ್‌ ಗಾಂಧಿ ಅವರು ಮಾಡಿದ ದೊಡ್ಡ ತಪ್ಪು ಅಂದರೆ ಪ್ರಧಾನಿ ಕಚೇರಿಗೆ ಆರ್.ಕೆ.ಧವನ್‌ ಅವರನ್ನು ಕರೆತಂದಿದ್ದು. ಅವರಿಂದಾಗಿ ಪ್ರಧಾನಿ ಕಚೇರಿ ರಾಜಕೀಯ ಕಚೇರಿ ಆಗುವಂತಾಯಿತು. ನಾಲ್ಕು ವರ್ಷಗಳಿಂದ ತಾಂತ್ರಿಕ ಕಚೇರಿಯಾಗಿದ್ದ ಅದು ಇದ್ದಕ್ಕಿದ್ದಂತೆ ರಾಜಕೀಯ ರೂಪ ಪಡೆದುಕೊಂಡಿತು. ಅದರಿಂದಾಗಿ ಮುಂದೆ ಬಾಬ್ರಿ ಮಸೀದಿ ಘಟನೆ ನಡೆಯುವಂತಾಯಿತು” ಎಂದು ಮಣಿ ಶಂಕರ್‌ ಅವರು ಹೇಳಿದ್ದಾರೆ.

ಹಾಗೆಯೇ ಪಿ ವಿ ನರಸಿಂಹ ರಾವ್‌ ಅವರ ಬಗ್ಗೆ ಮಾತನಾಡಿದ ಅವರು, “ಆಗ ನಾನು ರಾಮ್‌ ರಹೀಮ್‌ ಯಾತ್ರೆ ನಡೆಸುತ್ತಿದ್ದೆ. ಆ ವೇಳೆ ಅವರು ನನ್ನೊಂದಿಗೆ ಮಾತನಾಡಿದರು. ಯಾತ್ರೆ ಬಗ್ಗೆ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದ ಅವರು, ನನ್ನ ಜಾತ್ಯತೀತತೆಯ ವ್ಯಾಖ್ಯಾನವನ್ನು ಒಪ್ಪುವುದಿಲ್ಲವೆಂದು ತಿಳಿಸಿದರು. ನನ್ನ ಜಾತ್ಯತೀತತೆಯ ವ್ಯಾಖ್ಯಾನದಲ್ಲಿ ಏನು ತಪ್ಪಿದೆ ಎಂದು ನಾನು ಕೇಳಿದೆ. ಅದಕ್ಕೆ ಅವರು ʼಮಣಿ, ನಿನಗೆ ಭಾರತ ಹಿಂದೂ ದೇಶ ಎನ್ನುವುದು ಇನ್ನೂ ಅರ್ಥವಾಗಿಲ್ಲʼ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದಿಂದ ಪ್ರಧಾನಿ ಕುರ್ಚಿಯಲ್ಲಿ ಕುಳಿತ ಅವರು ಬಿಜೆಪಿ ಮಾತನ್ನೇ ಹೇಳಿದರು” ಎಂದು ಅಯ್ಯರ್‌ ಬರೆದಿದ್ದಾರೆ.

ಇದನ್ನೂ ಓದಿ: Alia Bhatt: ಯಶ್‌ ಬಳಿಕ ಆಲಿಯಾ ಭಟ್‌ ಕೂಡ ʻರಾಮಾಯಣʼ ಸಿನಿಮಾದಿಂದ ಹೊರಕ್ಕೆ!
ಹಾಗೆಯೇ ನಮ್ಮಲ್ಲಿ ಮೊದಲ ಬಿಜೆಪಿ ಪ್ರಧಾನಿ ಎಂದು ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಕರೆಯಲಾಗುತ್ತದೆ. ಆದರೆ ನಿಜಕ್ಕೂ ಅವರಲ್ಲ, ನರಸಿಂಹ ರಾವ್‌ ಅವರೇ ಮೊದಲ ಬಿಜೆಪಿ ಪ್ರಧಾನಿ ಎಂದು ಅಯ್ಯರ್‌ ಮಾರ್ಮಿಕವಾಗಿ ಹೇಳಿದ್ದಾರೆ.
ಪಿ ವಿ ನರಸಿಂಹ ರಾವ್‌ ಅವರು 1991ರಿಂದ 1996ರವರೆಗೆ ಭಾರತದ 9ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಕಾಂಗ್ರೆಸ್‌ ಪಕ್ಷದಿಂದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಅವರ ಅವಧಿಯಲ್ಲೇ ರಾಮ ಮಂದಿರ ಆಂದೋಲನ ತೀವ್ರಗೊಂಡು, ಬಾಬರಿ ಕಟ್ಟಡವನ್ನು ಉರುಳಿಸಲಾಗಿತ್ತು.

Exit mobile version