Site icon Vistara News

Manipur Violence: ಮಹಿಳೆಯರ ಬೆತ್ತಲೆ ಮೆರವಣಿಗೆ ಬೆನ್ನಲ್ಲೇ, ಕುಕಿ ವ್ಯಕ್ತಿಯ ಕತ್ತರಿಸಿದ ತಲೆ ಇರುವ ವಿಡಿಯೋ ವೈರಲ್

Manipur Violence

ನವದೆಹಲಿ: ಮಣಿಪುರದಲ್ಲಿ (Manipur Violence) ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ (Woman Naked Parade) ಬೆತ್ತಲೆ ಮೆರವಣಿಗೆ ಮಾಡಿ, ಗ್ಯಾಂಗ್ ರೇಪ್ ಮಾಡಿದ ವಿಡಿಯೋ (Viral Video) ಬಹಿರಂಗವಾಗಿ ಇಡೀ ದೇಶವು ನಾಚಿಕೆಯಿಂದ ತಲೆ ತಗ್ಗಿಸಿದ ಘಟನೆ ನಡೆದ ಬೆನ್ನಲ್ಲೇ ಮತ್ತೊಂದು ಭಯಾನಕ ವಿಡಿಯೋ ವೈರಲ್ ಆಗುತ್ತಿದೆ. ತಲೆ ಕತ್ತರಿಸಿದ (chopped head) ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿದೆ.

ಡೇವಿಡ್ ಥೀಕ್ ಎಂದು ಗುರುತಿಸಲಾದ ಕುಕಿ ಸಮುದಾಯದ ವ್ಯಕ್ತಿಯ ಕತ್ತರಿಸಿದ ತಲೆಯನ್ನು ಬಿಷ್ಣುಪುರ ಜಿಲ್ಲೆಯ ವಸತಿ ಪ್ರದೇಶದಲ್ಲಿ ಬಿದಿರಿನ ಕಡ್ಡಿಗಳಿಂದ ಮಾಡಿದ ಬೇಲಿಯ ಮೇಲೆ ಇರಿಸಿರುವ ದೃಶ್ಯಗಳು ವೈರಲ್ ಆಗಿವೆ ವಿಡಿಯೋದಲ್ಲಿವೆ. ಜುಲೈ 2ರಂದು ಮಧ್ಯಾಹ್ನ 12 ಗಂಟೆಗೆ ನಡೆದ ಹಿಂಸಾಚಾರದ ವೇಲೆ ಥೀಕ್ ಅವರನ್ನು ಕೊಲೆ ಮಾಡಲಾಗಿದೆ. ಈ ಘಟನೆಯಲ್ಲಿ ಒಟ್ಟು ಮೂವರು ಮೃತಪಟ್ಟಿದ್ದರು.

ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಮಣಿಪುರದಲ್ಲಿ ಶುಕ್ರವಾರ ಕೂಡ ಹಿಂಸಾಚಾರ ಸಂಭವಿಸಿದೆ. ಈ ವೇಳೆ, ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನಾ ದಿನ ಗುರುವಾರ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆದಿತ್ತು.

ಈ ಸುದ್ದಿಯನ್ನೂ ಓದಿ: Manipur Video: 4 ಮಕ್ಕಳ ತಾಯಿ ಕಣ್ರೋ, ಬಿಡ್ರೋ ಎಂದರೂ ಕೇಳಲಿಲ್ಲ; ಇದು ಮಣಿಪುರ ಸಂತ್ರಸ್ತೆಯ ಆರ್ತನಾದ

ಕಳೆದ ಮೇ ತಿಂಗಳಿನಿಂದಲೂ ಮಣಿಪುರ ಹೊತ್ತಿ ಉರಿಯುತ್ತಿದೆ. ಬಹುಸಂಖ್ಯಾದ ಮೈತೈ ಮತ್ತು ಕುಕಿ ಸಮುದಾಯದ ನಡುವೆ ಸಂಘರ್ಷ ಏರ್ಪಟ್ಟಿದೆ. ಮೈತೈ ಸಮುದಾಯ ಇಂಫಾಲ್ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಗುಡ್ಡಗಾಡು ಪ್ರದೇಶದಲ್ಲಿ ಕುಕಿ ಸಮುದಾಯದವರಿದ್ದಾರೆ. ಈವರೆಗೆ ಸಂಭವಿಸಿದ ಹಿಂಸಾಚಾರದಲ್ಲಿ 160ಕ್ಕ ಹೆಚ್ಚು ಜನರು ಮೃತಪಟ್ಟಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version