ನವದೆಹಲಿ: ಪ್ರಸ್ತುತ ಕೇಂದ್ರ ಸಂವಹನ ದಳದ(Central Bureau of Communications – CBC) ಮುಖ್ಯಸ್ಥರಾಗಿದ್ದ ಮನೀಶ್ ದೇಸಾಯಿ (Manish Desai) ಅವರನ್ನು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪತ್ರಿಕಾ ಮಾಹಿತಿ ಬ್ಯೂರೋ – PIB) ಮುಖ್ಯಸ್ಥರನ್ನಾಗಿ ಶುಕ್ರವಾರ ನೇಮಕ ಮಾಡಲಾಗಿದೆ (Director General of PIB) ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ(ministry of information and broadcasting). ಹಿರಿಯ ಭಾರತೀಯ ಸಂವಹನ ಸೇವಾ ಅಧಿಕಾರಿಯಾಗಿರುವ ಮನೀಶ್ ದೇಸಾಯಿ ಅವರು ಪಿಐಬಿಯ ಮಹಾನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.
1989ರ ಐಐಎಸ್ ಅಧಿಕಾರಿಯಾಗಿರುವ ದೇಸಾಯಿ ಅವರು ಸಿಬಿಸಿ ಮುಖ್ಯಸ್ಥರಾಗಿ ಕಳೆದ ವರ್ಷ ಅಧಿಕಾರ ಸ್ವೀಕರಿಸಿದ್ದರು. ಅವರೀಗ, ಪಿಐಬಿ ಮುಖ್ಯಸ್ಥರಾಗಿದ್ದ ರಾಜೇಶ್ ಮುಲ್ಹೋತ್ರಾ ಅವರಿದ್ದ ಜಾಗಕ್ಕೆ ನೇಮಕಕೊಂಡಿದ್ದಾರೆ. 2022ರಿಂದ ಪಿಐಬಿ ಮುಖ್ಯಸ್ಥರಾಗಿ ರಾಜೇಶ್ ಮಲ್ಹೋತ್ರಾ ಕಾರ್ಯನಿರ್ವಹಿಸುತ್ತಿದ್ದರು. ಸಿಬಿಸಿಯ ಜಾಹೀರಾತು ಮತ್ತು ಸಾರ್ವಜನಿಕ ಮಾಹಿತಿಯ ವಿಭಾಗದ ಸಿಇಒ ಆಗಿಯೂ ದೇಸಾಯಿ ಕೆಲಸ ಮಾಡಿದ್ದಾರೆ. 2019ರಿಂದ 2020ರವರೆಗೆ ದೇಸಾಯಿ ಅವರು ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಆಫ್ ಇಂಡಿಯಾ ಮಹಾ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
2012ರಿಂದ 2018ರವರೆಗೆ 6 ವರ್ಷಗಳ ಕಾಲ ಮನೀಶ್ ದೇಸಾಯಿ ಅವರ ಪಿಐಬಿನ ಹೆಚ್ಚು ಮಹಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮುಂಬೈನಲ್ಲಿ ಪಿಐಬಿ ಪಶ್ಚಿಮ ವಿಭಾಗದ ಮಹಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು 30 ವರ್ಷ ಸುದೀರ್ಘ ವೃತ್ತಿಯಲ್ಲಿಆಲ್ ಇಂಡಿಯಾ ರೇಡಿಯೊ ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Fact Check: ನೀವು ಗೆಳತಿಗೆ ಮಾಡುವ ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಕೇಂದ್ರ ಸರ್ಕಾರ ನೋಡುತ್ತದೆಯೇ?
ಇದೇ ವೇಳೆ, ಸಚಿವಾಲಯವು ಕೋಲ್ಕೊತಾದ ಪಿಐಬಿಯ ಮಾಜಿ ಪ್ರಧಾನ ಮಹಾನಿರ್ದೇಶಕ ಭೂಪೇಂದ್ರ ಕೈಂತೋಲಾ ಅವರನ್ನು ಪತ್ರಿಕಾ ರಿಜಿಸ್ಟ್ರಾರ್ ಆಗಿ ನೇಮಿಸಿದೆ. ಆ ಜಾಗದಲ್ಲಿದ್ದ ಧೀರೇಂದ್ರ ಓಜಾ ಅವರನ್ನು ದೇಸಿಯಾ ಜಾಗಕ್ಕೆ ವರ್ಗ ಮಾಡಲಾಗಿದೆ.