ನವದೆಹಲಿ: “ಇ ಸಂಜೀವಿನಿ ಆ್ಯಪ್ ಹಾಗೂ ಏಕೀಕೃತ ಪಾವತಿ ವ್ಯವಸ್ಥೆಯು (UPI) ದೇಶದ ಡಿಜಿಟಲ್ ಶಕ್ತಿಯ ದ್ಯೋತಕ” ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ (Mann Ki Baat) ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ಕೊರೊನಾ ಸಂದರ್ಭದಲ್ಲಿ ಇ ಸಂಜೀವಿನಿ ಆ್ಯಪ್ ಪ್ರಮುಖ ಪಾತ್ರ ನಿರ್ವಹಿಸಿದೆ. ಹಾಗೆಯೇ, ದೇಶದ ಯುಪಿಐ ಈಗ ಸಾಗರದಾಚೆ ತಲುಪುತ್ತಿದೆ” ಎಂದರು.
“ಇ ಸಂಜೀವಿನಿ ಆ್ಯಪ್ ಒಂದು ಇಂಟರ್‌ನೆಟ್ ಆಧಾರಿತ ಟೆಲಿಮೆಡಿಸಿನ್ ವೇದಿಕೆಯಾಗಿದೆ. ಇದುವರೆಗೆ ೧೦ ಕೋಟಿ ಕನ್ಸಲ್ಟೇಷನ್ ಕೈಗೊಳ್ಳಲಾಗಿದೆ. ಡಿಜಿಟಲ್ ಇಂಡಿಯಾದ ಶಕ್ತಿಯು ಎಲ್ಲೆಡೆ ಪಸರಿಸುತ್ತಿದೆ. ವೈದ್ಯರ ಜತೆ ಟೆಲಿಕನ್ಸಲ್ಟೇಷನ್ ಮಾಡಲು ಆ್ಯಪ್ ಸಹಕಾರಿಯಾಗಿದೆ. ಆ್ಯಪ್ ಉಪಯೋಗಿಸುತ್ತಿರುವುದಕ್ಕೆ ವೈದ್ಯರು ಹಾಗೂ ಜನರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: Mann Ki Baat: ಮೈಲುಗಲ್ಲಿನತ್ತ ಮನ್ ಕಿ ಬಾತ್, 100ನೇ ಸಂಚಿಕೆಗೆ ಲೋಗೊ ರಚಿಸಿ, 1 ಲಕ್ಷ ರೂ. ಗೆಲ್ಲಿ
ಡಿಜಿಟಲ್ ಪಾವತಿ ವ್ಯವಸ್ಥೆಗಾಗಿ ನಾವು ಜಾರಿಗೆ ತಂದ ಯುಪಿಐ ಈಗ ಸಾಗರದಾಚೆ ಪಸರಿಸಿದೆ. ಸಿಂಗಾಪುರದಲ್ಲೂ ಯುಪಿಐ ಇದೆ. ಉಭಯ ದೇಶಗಳ ಜನರು ಶುಲ್ಕವಿಲ್ಲದೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೂಡ ಡಿಜಿಟಲ್ ಇಂಡಿಯಾದ ಸಾಮರ್ಥ್ಯ” ಎಂದು ಮೋದಿ ಬಣ್ಣಿಸಿದರು.