ಶಿಲ್ಲಾಂಗ್: ಮೇಘಾಲಯ ಹಾಗೂ ನಾಗಾಲ್ಯಾಂಡ್ನಲ್ಲಿ ವಿಧಾನಸಭೆ ಚುನಾವಣೆಯು ಕೊನೆಯ ಹಂತಕ್ಕೆ ಬಂದಿದೆ. ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ಮಾಡಲಾಗಿದೆ. ಇದರ ಬೆನ್ನಲ್ಲೇ, ಮೇಘಾಲಯ ಮತದಾರರ ಪಟ್ಟಿಯಲ್ಲಿರುವ (Meghalaya Election 2023) ಹೆಸರುಗಳು ಅಚ್ಚರಿ ಮೂಡಿಸಿವೆ. ಫುಟ್ಬಾಲ್ ದಂತಕತೆಗಳಾದ ಮರಡೋನಾ, ಪೀಲೆ ಸೇರಿ ಹಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿವೆ.
ಕಾಶ್ಮೀರ, ಟಿಬೆಡ್, ಸ್ವೀಡನ್, ಥೈಲ್ಯಾಂಡ್ ಸೇರಿ ಹಲವು ದೇಶಗಳು, ಪ್ರದೇಶಗಳ ಹೆಸರುಗಳು ಕೂಡ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈಶಾನ್ಯ ರಾಜ್ಯದಲ್ಲಿ ತುಂಬ ಜನರ ಹೆಸರುಗಳು ಇಂಗ್ಲಿಷ್ನಲ್ಲಿಯೂ ಇರುತ್ತವೆ. ಇನ್ನೂ ಕೆಲವು ಹೆಸರುಗಳು ಪ್ರಮಾದದಿಂದಾಗಿ ಸೇರಿಕೊಂಡಿವೆ ಎನ್ನಲಾಗುತ್ತಿದೆ.
ಥರ್ಸ್ಡೇ, ಸಂಡೇ ಎಂಬ ವಾರಗಳ ಹೆಸರುಗಳು, ಸಿಟಿ, ವಿಲೇಜ್, ಅಜೆಂಡಾ, ಬೇಬಿಲ್ಯಾಂಡ್ ಎಂಬ ಹೆಸರುಗಳೂ ಮತದಾರರ ಪಟ್ಟಿಯಲ್ಲಿವೆ. ಗ್ರಾಮವೊಂದರಲ್ಲಿ ‘ಸ್ವೆಟರ್’ ಎಂಬ ಮಹಿಳೆಯು ತಮ್ಮ ಮಗಳಿಗೆ “ಐ ಹ್ಯಾವ್ ಬೀನ್ ಡೆಲಿವರ್ಡ್” (I Have Been Delivered) ಎಂಬ ಹೆಸರಿಟ್ಟು, ಮತದಾರರ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Nagaland Meghalaya Election: ಸೋಮವಾರ ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆ, ಬಲಾಬಲ ಹೇಗಿದೆ?