Site icon Vistara News

Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ

singer Mary Millben touches PM Modi feet

#image_title

ಪ್ರಧಾನಿ ಮೋದಿ (PM Narendra Modi) ಅವರ ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ (PM Modi US Visit), ಅಲ್ಲಿ ಭಾರತವೇ ಮೇಳೈಸಿತು. ಅದ್ಧೂರಿ ಸ್ವಾಗತ ಪಡೆದ ನರೇಂದ್ರ ಮೋದಿ (PM Modi) ಯವರು ಇಂದು ಅಲ್ಲಿಂದ ಹೊರಟಾಗ ಅಷ್ಟೇ ಪ್ರೀತಿಪೂರ್ವಕ ಬೀಳ್ಕೊಡುಗೆಯೂ ಸಿಕ್ಕಿದೆ. ಒಂದು ಚಿಕ್ಕ ಭಾಷಣವನ್ನು ಅವರು ಮಾಡಿ ಈ ಮೂಲಕ ವಿದಾಯ ಹೇಳಿದರು. ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್​ (Singer Mary Millben)​​ ಅವರು ಅದ್ಭುತವಾಗಿ ಭಾರತದ ರಾಷ್ಟ್ರಗೀತೆಯನ್ನು ಹಾಡಿದರು. ಹೀಗೆ ಹಾಡಿದ ಬಳಿಕ ಗಾಯಕಿ, ಪ್ರಧಾನಿ ಮೋದಿಯವರಿಗೆ ತೋರಿದ ಗೌರವ ಈಗ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೊಗಳು ವೈರಲ್ ಆಗಿದೆ (Video Viral).

ಭಾರತದ ರಾಷ್ಟ್ರಗೀತೆ ಹಾಡಿದ ಗಾಯಕಿ ಮೇರಿ ಮಿಲ್​​ಬೆನ್​ ​ ಅವರನ್ನು ಅಭಿನಂದಿಸಲು ಪ್ರಧಾನಿ ಮೋದಿ ವೇದಿಕೆಗೆ ಬಂದಿದ್ದಾರೆ. ಚಪ್ಪಾಳೆ ತಟ್ಟುತ್ತ ಬಂದ ಪ್ರಧಾನಿ ಮೋದಿ ಪಾದವನ್ನು ಸ್ಪರ್ಶಿಸಿ ಗಾಯಕಿ ಮೇರಿ ಮಿಲ್​​ಬೆನ್​ ​​ನಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಧಾನಿಯವರೂ ಗೌರವವದಿಂದ ಬಾಗಿದ್ದಾರೆ. ಈ ವಿಡಿಯೊವನ್ನು ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಶೇರ್ ಮಾಡಿಕೊಂಡು ‘ಅಮೆರಿಕದ ಗಾಯಕಿ ಮೇರಿ ಮಿಲ್​​ಬೆನ್​ ​​ ಅವರು ಭಾರತದ ರಾಷ್ಟ್ರಗೀತೆ ಹಾಡಿದ ಬಳಿಕ ಪ್ರಧಾನಿ ಮೋದಿ ಕಾಲಿಗೆ ನಮಸ್ಕಾರ ಮಾಡಿದರು. ಪ್ರಧಾನಿ ಮೋದಿಯವರೂ ಕೂಡ ತಮ್ಮ ತಲೆ ಬಾಗಿ ಗಾಯಕಿಗೆ ಗೌರವ ಸಲ್ಲಿಸಿದರು. ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ಇರುವ ದೃಢವಾದ ಅಧ್ಯಾತ್ಮಿಕ ಸೆಳವಿಗೆ ಇಡೀ ವಿಶ್ವ ತಲೆಬಾಗುತ್ತಿದೆ’ ಎಂದು ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯಕಿ ಮಿಲ್​​ಬೆನ್​ ‘ಪ್ರಧಾನಿ ಮೋದಿಯವರ ವಿಧೇಯತೆ ನೋಡಿ ತುಂಬ ಖುಷಿಯಾಯಿತು. ನಾನಿಲ್ಲಿ ನನ್ನ ಗಾಯನ ಪ್ರದರ್ಶನ ಮಾಡಿದ್ದೇ ನನಗೆ ಹೆಮ್ಮೆಯ ಸಂಗತಿ. ಪ್ರಧಾನಿ ಮೋದಿಯವರ ಅಧಿಕೃತ ಅಮೆರಿಕ ಪ್ರವಾಸದಲ್ಲಿ ನಾನೂ ಒಂದು ಭಾಗವಾಗಿದ್ದೆ ಎಂಬುದು ಖುಷಿಕೊಟ್ಟಿದೆ. ಭಾರತದ ರಾಷ್ಟ್ರಗೀತೆ ಹಾಡಿದಾಗ, ಇಲ್ಲಿನ ಭಾರತೀಯ ಮೂಲದವರು ಉತ್ತೇಜಿಸಿದ ಪರಿಗೆ ಅಚ್ಚರಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಇನ್ನು ಗಾಯಕಿ ಮಿಲ್​ಬೆನ್​ ಅವರು ಚಿನ್ನದ ಒಡವೆ ಧರಿಸಿ, ‘ಜನ ಗಣ ಮನ’ ಹಾಡಿದರು. ಅಮೆರಿಕ ಗಾಯಕಿಯಾದರೂ ಉಚ್ಛಾರದಲ್ಲಿ ಸ್ಪಷ್ಟತೆ ಇತ್ತು. ಪ್ರಧಾನಿ ಮೋದಿಯಾದಿಯಾಗಿ, ಅಲ್ಲಿದ್ದ ಎಲ್ಲರೂ ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದಾರೆ.

Exit mobile version