ನವದೆಹಲಿ: ಚೀನಾ, ಅಮೆರಿಕ, ಫ್ರಾನ್ಸ್ ಸೇರಿ ಹಲವು ದೇಶಗಳಲ್ಲಿ ಕೊರೊನಾ ಸೋಂಕಿತರ (Coronavirus) ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಭಾರತದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲೂ, ಚೀನಾದಲ್ಲಿ ಮತ್ತೊಂದು ಅಲೆಗೆ ಕಾರಣವಾಗಿರುವ ಓಮಿಕ್ರಾನ್ ಉಪ ತಳಿ ಬಿಎಫ್.7 ಸೋಂಕಿತರು ಭಾರತದಲ್ಲೂ ಪತ್ತೆಯಾದ ಕಾರಣ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಸದಸ್ಯರು ಗುರುವಾರ ಮಾಸ್ಕ್ ಧರಿಸುವ ಮೂಲಕ ಮಾದರಿ ಎನಿಸಿದರು. ಹಾಗೆಯೇ, ಕೊರೊನಾ ಕುರಿತು ಜನರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದರು.
ನರೇಂದ್ರ ಮೋದಿ, ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿ ಹಲವು ಸದಸ್ಯರು ಮಾಸ್ಕ್ ಧರಿಸಿದ್ದರು. ಹಾಗೆಯೇ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಯೊಬ್ಬರೂ ಸಂಸತ್‌ನಲ್ಲಿ ಮಾಸ್ಕ್ ಧರಿಸಿ ಎಂದು ಕರೆ ನೀಡಿದರು. ಈಗಾಗಲೇ ಜನಸಂದಣಿ ಪ್ರದೇಶಗಳಲ್ಲಿ ಜನ ಮಾಸ್ಕ್ ಧರಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಚೀನಾದಲ್ಲಿ ಆತಂಕ ಮೂಡಿಸಿರುವ ಬಿಎಫ್.7 ಉಪ ತಳಿಯ ನಾಲ್ಕು ಕೇಸ್‌ಗಳು ಭಾರತದಲ್ಲಿ ಪತ್ತೆಯಾಗಿವೆ. ಹಾಗಾಗಿಯೇ, ಮೋದಿ ಅವರು ಉನ್ನತಮಟ್ಟದ ಸಭೆ ಕೂಡ ನಡೆಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಿಗೆ ರ‍್ಯಾಂಡಮ್ ಟೆಸ್ಟ್ ಕೂಡ ಮಾಡಲಾಗುತ್ತಿದೆ.
ಇದನ್ನೂ ಓದಿ | Coronavirus | ಕೊರೊನಾ ವಿಷಯದಲ್ಲೂ ರಾಜಕೀಯ, ಕಾಂಗ್ರೆಸ್‌ಗೆ ಸಚಿವ ಮಂಡಾವಿಯ ತಿರುಗೇಟು