Site icon Vistara News

Bomb Blast In UK: ಬ್ರಿಟನ್‌ನಲ್ಲಿ 2ನೇ ಮಹಾಯುದ್ಧದ ಕಾಲದ ಬಾಂಬ್‌ ಸ್ಫೋಟ, ಇಲ್ಲಿದೆ ವಿಡಿಯೊ

Bomb Blast In UK

#image_title

ಲಂಡನ್‌: ಬ್ರಿಟನ್‌ನ ಪಟ್ಟಣವೊಂದರಲ್ಲಿ ದ್ವಿತೀಯ ಮಹಾಯುದ್ಧದ (Bomb Blast In UK) ಕಾಲದ ಬಾಂಬ್‌ ನಿಷ್ಕ್ರಿಯಗೊಳಿಸುವಾಗ ಅದು ಸ್ಫೋಟಗೊಂಡಿದ್ದು, ಇದರ ಭೀಕರ ವಿಡಿಯೊ ಈಗ ವೈರಲ್‌ ಆಗಿದೆ. ಬ್ರಿಟನ್‌ನ ಗ್ರೇಟ್‌ ಯಾರ್ಮೌತ್‌ ಪಟ್ಟಣದಲ್ಲಿ ಬಾಂಬ್‌ ನಿಷ್ಕ್ರಿಯ ಪ್ರಕ್ರಿಯೆ ಆರಂಭಿಸುತ್ತಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಆಗಸದ ತುಂಬೆಲ್ಲ ಹೊಗೆ ಆವರಿಸಿತ್ತು.

“ಸೇತುವೆ ನಿರ್ಮಾಣದ ವೇಳೆ ಎರಡನೇ ಮಹಾಯುದ್ಧದ ಕಾಲದ ಬಾಂಬ್‌ ಪತ್ತೆಯಾಗಿತ್ತು. ಅದು ಮೂರು ಅಡಿ ಉದ್ದ ಇತ್ತು. ಗ್ರೇಟ್‌ ಯಾರ್ಮೌತ್‌ ಪಟ್ಟಣದಲ್ಲಿ ಅದನ್ನು ನಿಷ್ಕ್ರಿಯಗೊಳಿಸಲು ಸಕಲ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಜನರನ್ನು ಬೇರೆಡೆ ಕಳುಹಿಸಲಾಗಿತ್ತು. ಆದರೆ, ನಿಷ್ಕ್ರಿಯಗೊಳಿಸುವ ವೇಳೆ ಅದು ಸ್ಫೋಟಗೊಂಡಿದೆ” ಎಂದು ಪೊಲೀಸರು ಮಾಹಿತಿ ನೀಡಿದರು.

ಬಾಂಬ್‌ ಸ್ಫೋಟದಿಂದ ದಟ್ಟವಾದ ಹೊಗೆ ಆವರಿಸಿದ್ದು ಬಿಟ್ಟರೆ ಯಾರಿಗೂ ತೊಂದರೆ ಆಗಿಲ್ಲ. ಸ್ಫೋಟದ ಕೆಲ ಹೊತ್ತಿನ ಬಳಿಕ ಸುತ್ತಮುತ್ತಲಿನ ನಿವಾಸಿಗಳು ತಮ್ಮ ಮನೆಗೆ ಆಗಮಿಸಿದ್ದಾರೆ. ಡ್ರೋನ್‌ ಕ್ಯಾಮೆರಾದಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: Quetta Blast: ಕ್ರಿಕೆಟ್​ ಸ್ಟೇಡಿಯಂ ಬಳಿ ಬಾಂಬ್​ ಸ್ಫೋಟ; ಪಾಕ್ ನಾಯಕ ಬಾಬರ್​ ಅಜಂ ಬಚಾವ್​! ​

Exit mobile version