ಶ್ರೀನಗರ: ಜಮ್ಮು-ಕಾಶ್ಮೀರದ ದ್ರಾಸ್‌ನಲ್ಲಿರುವ ಬಹುಕಾಲದ ಮಸೀದಿಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ (Kashmir Masjid Fire) ಸಂಭವಿಸಿದೆ. ಬುಧವಾರ ರಾತ್ರಿ ಏಕಾಏಕಿ ಜಾಮಿಯಾ ಮಸೀದಿ ಹೊತ್ತಿ ಉರಿದಿದ್ದು, ಬಹುತೇಕ ಭಾಗ ಅಗ್ನಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಮಸೀದಿ ಹೊತ್ತಿ ಉರಿಯಲು ಕಾರಣವೇನು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಯ ಕೆನ್ನಾಲಗೆ ಚಾಚಿಕೊಳ್ಳುತ್ತಿರುವ ಸುದ್ದಿ ತಿಳಿದ ಸೇನೆ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಘಟನೆ ಕುರಿತು ಮಸೀದಿ ಆಡಳಿತ ಮಂಡಳಿ ಬೇಸರ ವ್ಯಕ್ತಪಡಿಸಿದೆ.
ಇದನ್ನೂ ಓದಿ | Fire Accident | ರಿಚ್ಮಂಡ್ ಟೌನ್ ಫ್ಯಾಮಿಲಿ ಸೂಪರ್ ಮಾರ್ಟ್‌ನಲ್ಲಿ ಅಗ್ನಿ ಅವಘಡ : ಪೀಠೋಪಕರಣ ಭಸ್ಮ