Site icon Vistara News

Supreme Court: ಉದ್ಯೋಗಿಯ ಗುತ್ತಿಗೆ ಅವಧಿ ಮುಗಿದ್ರೂ ಹೆರಿಗೆ ರಜೆ ಸೌಲಭ್ಯ ಅನ್ವಯ ಎಂದ ಸುಪ್ರೀಂ ಕೋರ್ಟ್

Supreme Court verdict on Article 370 and Know about this article

ನವದೆಹಲಿ: ಒಂದು ವೇಳೆ ಗುತ್ತಿಗೆ ಉದ್ಯೋಗಿಯ (Contractual Employment) ಅವಧಿ ಮುಗಿದಿದ್ದರೂ ಹೆರಿಗೆ ರಜೆ ಸೌಲಭ್ಯಗಳನ್ನು ನೀಡಲೇಬೇಕಾಗುತ್ತದೆ (Maternity Benefits) ಎಂದು ಸುಪ್ರೀಂ ಕೋರ್ಟ್ (Supreme Court)ಮಹತ್ವದ ತೀರ್ಪು ನೀಡಿದೆ. ಉದ್ಯೋಗಿಯ ಹೆರಿಗೆ ರಜೆ ಸೌಲಭ್ಯಗಳು ಯಾವುದೇ ಉದ್ಯೋಗ ಗುತ್ತಿಗೆ ಒಪ್ಪಂದವನ್ನು ಮೀರಿದ್ದಾಗಿದೆ. 1961ರ ಹೆರಿಗೆ ರಜೆ ಸೌಲಭ್ಯ ಕಾಯ್ದೆಯ (Maternity Benefits Act, 1961) ಸೆಕ್ಷನ್ 5 ಮತ್ತ 8ರ ಅಡ್ಡಿಯಲ್ಲಿ ಗುತ್ತಿಗೆ ಆಧಾರದ ಉದ್ಯೋಗಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕು ಮತ್ತು ಮೂರು ತಿಂಗಳೊಳಗೆ ಹಣ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಉದ್ಯೋಗದಾತ ಕಂಪನಿಗೆ ತಿಳಿಸಿದೆ.

ಎಂಸಿಡಿ ವರ್ಸಸ್ ಮಹಿಳಾ ಉದ್ಯೋಗಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು ಹೆರಿಗೆ ರಜೆ ಸೌಲಭ್ಯಗಳನ್ನು ದಯಾಪಾಲಿಸಿತ್ತು. ಪ್ರಸಕ್ತ ದೀಪಿಕಾ ಸಿಂಗ್ ವರ್ಸಸ್ ಸಿಎಟಿ ಪ್ರಕರಣದಲ್ಲೂ ಈ ಮೇಲಿನ ಪ್ರಕರಣವನ್ನು ಗಮನಿಸಲಾಗಿದೆ.

ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಸಂಜಯ್ ಕುಮಾರ್, ಜಸ್ಟೀಸ್ ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠವು, ರಜೆ ಸೌಲಭ್ಯ ನಿರಾಕರಣೆ ಸಂಬಂಧ ಹೈಕೋರ್ಟ್ ಆದೇಶದ ವಿರುದ್ಧ ದಾಖಲಾದ ಮೇಲ್ಮನವಿ ವಿಚಾರಣೆ ನಡೆಸಿದೆ. ಮಹಿಳಾ ಉದ್ಯೋಗಿಯ ಗುತ್ತಿಗೆ ಒಪ್ಪಂದದ ಅವಧಿ ಮಗಿದಿದೆ ಎಂಬ ಕಾರಣಕ್ಕೆ, ರಜೆ ಸೌಲಭ್ಯವನ್ನು ಕೇವಲ 11 ದಿನಕ್ಕೆ ಮಿತಿಗೊಳಿಸಿ, ಹೈಕೋರ್ಟ್ ನೀಡಿದ್ದ ಆದೇಶ ಕುರಿತು ವಿಚಾರಣೆ ನಡೆಯಿತು.

ಏನಿದು ಪ್ರಕರಣ?

ದಿಲ್ಲಿಯ ಎನ್‌ಸಿಟಿಯ ಜಾನಕಿಪುರಿ ಹಾಸ್ಪಿಟಲ್‌ನಲ್ಲಿ ರೋಗಶಾಸ್ತ್ರಜ್ಞೆಯಾಗಿ ಅರ್ಜಿದಾರಳು ಕೆಲಸ ಮಾಡುತ್ತಿದ್ದರು. ಗರಿಷ್ಠ ಮೂರು ವರ್ಷದಂತೆ ಪ್ರತಿ ವರ್ಷ ಅವರ ಗುತ್ತಿಗೆ ಒಪ್ಪಂದವನ್ನು ನವೀಕರಿಸಲಾಗುತ್ತಿತ್ತು. ಮೇ 24ರಂದು ಅರ್ಜಿದಾರ ವೈದ್ಯೆ, 2017ರ ಜೂನ್ 1ರಿಂದ ಹೆರಿಗೆ ರಜೆ ಸೌಲಭ್ಯಕ್ಕೆ ಅರ್ಜಿ ಹಾಕಿದ್ದರು. ಆದರೆ, ಮೂರು ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ ಎಂಬ ಕಾರಣಕ್ಕೆ ಕಂಪನಿಯು ಕೇವಲ ಜೂನ್ 11ರವರೆಗಿನ ಹೆರಿಗೆ ಸೌಲಭ್ಯಗಳನ್ನು ಮುಂಜೂರು ಮಾಡಿತ್ತು. ಈ ಕುರಿತು ಸಿಎಟಿ ಮತ್ತು ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿದಾರರಿಗೆ ಸೋಲಾಗಿತ್ತು. ಅವರು ಈ ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಈ ಸುದ್ದಿಯನ್ನೂ ಓದಿ: Maternity Leave: ಖಾಸಗಿ, ಸರ್ಕಾರಿ ಉದ್ಯೋಗಿಗಳಿಗೆ 9 ತಿಂಗಳವರೆಗೆ ಹೆರಿಗೆ ರಜೆ ಅಗತ್ಯ ಎಂದ ನೀತಿ ಆಯೋಗ ಸದಸ್ಯ

ಸುಪ್ರೀಂ ಕೋರ್ಟ್‌ನ ಮೂರು ನ್ಯಾಯಮೂರ್ತಿಗಳು ಈ ಕುರಿತು ವಿಚಾರಣೆ ನಡೆಸಿ, 1961ರ ಹೆರಿಗೆ ಸೌಲಭ್ಯ ರಜೆ ಕಾಯ್ದೆಯ ಪ್ರಕಾರ, ಗುತ್ತಿಗೆ ಉದ್ಯೋಗಿಯ ಅವಧಿ ಮುಕ್ತಾಯದ ಬಳಿಕವೂ ಸೌಲಭ್ಯಗಳು ಮುಂದುವರಿಯುತ್ತವೆ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ, ಇನ್ನು ಮುಂದೆ, ಗುತ್ತಿಗೆ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ಸೌಲಭ್ಯವನ್ನು ನಿರಾಕರಿಸುವಂತಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version