Site icon Vistara News

Mathura Krishna Janmabhoomi: ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ; ಮುಸ್ಲಿಂ ಪರ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Krishna Janmabhoomi

Krishna Janmabhoomi case: Court agrees to hear Hindu side suits seeking mosque removal

ಅಲಹಾಬಾದ್‌: ಮಥುರಾ ಕೃಷ್ಣ ಜನ್ಮಭೂಮಿ(Mathura Krishna Janmabhoomi) ಮತ್ತು ಶಾಹಿ ಈದ್ಗಾ ಮಸೀದಿ(Shahi Eidgah mosque) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಬಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ ಹೊರ ಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತೀರ್ಪು ಕಾಯ್ದಿರಿಸಿದ್ದ ನ್ಯಾ. ಮಯಾಂಕ್‌ ಕುಮಾರ್‌ ಜೈನ್‌ ಇಂದು ಮುಸ್ಲಿಂ ಪರ ಅರ್ಜಿಯನ್ನು ವಜಾಗೊಳಿಸಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಹಿಂದೂ ಪರ ವಕೀಲ ವಿಷ್ಣು ಶಂಕರ್‌ ಜೈನ್‌, ಪ್ರತಿವಾದಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಇಚ್ಛಿಸಿದ್ದಲ್ಲಿ ಅದನ್ನು ಎದುರಿಸಲೂ ನಾವು ಸಿದ್ಧ ಎಂದಿದ್ದಾರೆ.

ಇಂದು ಅಲಹಾಬಾದ್ ಹೈಕೋರ್ಟ್ ಶಾಹಿ ಈದ್ಗಾ ಮಸೀದಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಮಸೀದಿ ತೆರವು ಕೋರಿ ಹಿಂದೂ ಪರ ದಾವೆಗಳ ವಿಚಾರಣೆಗೆ ಕೋರ್ಟ್ ಒಪ್ಪಿಗೆ ನೀಡಿದೆ. ವಿಚಾರಣೆಯನ್ನು ದಿನಾಂಕ ಆಗಸ್ಟ್ 12ಕ್ಕೆ ಮುಂದೂಡಲಾಗಿದೆ. ನಾವು ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸುತ್ತೇವೆ ಮತ್ತು ಶಾಹಿ ಈದ್ಗಾ ಮಸೀದಿ ಸುಪ್ರೀಂಕೋರ್ಟ್‌ ಅನ್ನು ಸಂಪರ್ಕಿಸಿದರೆ, ನಾವು ಅಲ್ಲಿ ಹಾಜರಾಗುತ್ತೇವೆ ಎಂದಿದ್ದಾರೆ.

ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇಗುಲದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಅಡ್ವೊಕೇಟ್ ಕಮಿಷನರ್ ನೇಮಕ ಮಾಡಿರುವ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಜನವರಿಯಲ್ಲಿ ತಡೆಯಾಜ್ಞೆ ನೀಡಿತ್ತು. ಸ್ಥಳೀಯ ಆಯುಕ್ತರ ನೇಮಕವನ್ನು ಕೋರಿ ಸಲ್ಲಿಸಲಾದ ಅರ್ಜಿಯು ಅಸ್ಪಷ್ಟವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಆದರೂ, ಮೊಕದ್ದಮೆಗಳ ವಿಚಾರಣೆಯನ್ನು ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.

“ಸಮೀಕ್ಷೆಗೆ ಕಮಿಷನರ್‌ ನೇಮಿಸಲು ಕೋರಿದ ಅರ್ಜಿಯು ತುಂಬಾ ಅಸ್ಪಷ್ಟವಾಗಿದೆ. ಇದು ನಿರ್ದಿಷ್ಟವಾಗಿರಬೇಕು. ನಿಮಗೆ ಕಮಿಷನರ್ ಯಾವುದಕ್ಕಾಗಿ ಬೇಕು ಎಂದು ನೀವು ಸ್ಪಷ್ಟವಾಗಿ ಹೇಳಬೇಕು. ಆದರೆ ನೀವು ಅದನ್ನು ನ್ಯಾಯಾಲಯಕ್ಕೆ ಬಿಡುತ್ತೀರಿ. ಇದು ಗೊಂದಲಕರ ಅರ್ಜಿಯಾಗಿದೆ” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿತ್ತು.

ಮಸೀದಿಯ ಸಮೀಕ್ಷೆಯ ಮೇಲ್ವಿಚಾರಣೆಗೆ ವಕೀಲ- ಕಮಿಷನರ್ ನೇಮಕಕ್ಕೆ ಡಿಸೆಂಬರ್ 14ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕೆ ತಡೆ ನೀಡಿದ ಸುಪ್ರೀಂ ಪೀಠ, ಹಿಂದೂ ವಾದಿಗಳ ಮನವಿಯ ಹಿಂದಿನ ತಾರ್ಕಿಕತೆಯನ್ನು ನಿರ್ದಿಷ್ಟಪಡಿಸಿಲ್ಲ ಎಂದು ಒತ್ತಿ ಹೇಳಿತ್ತು. “ಕಮಿಷನರ್ ಅನ್ನು ನೇಮಿಸಿ ಎಂದು ನೀವು ಕೇಳುವ ಮುನ್ನ ನೀವು ನಿಖರವಾಗಿ ಏನನ್ನು ಕೇಳುತ್ತಿದ್ದೀರಿ ಎಂಬುದು ಸ್ಪಷ್ಟವಾಗಬೇಕು. ಈ ರೀತಿ ಅರ್ಜಿ ಸಲ್ಲಿಸಲಾಗದು. ಅರ್ಜಿಯನ್ನು ನಾವು ಕಾಯ್ದಿರಿಸಿದ್ದೇವೆ. ಇದು ತುಂಬಾ ಅಸ್ಪಷ್ಟವಾಗಿದೆ” ಎಂದು ಪೀಠವು ಪ್ರಕರಣದಲ್ಲಿ ಹಿಂದೂ ಫಿರ್ಯಾದಿಗಳ ಪರ ಹಾಜರಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರಿಗೆ ತಿಳಿಸಿತ್ತು.

ಇದನ್ನೂ ಓದಿ: Holi 2024: ಮಥುರಾದಲ್ಲಿ ಪುರುಷರಿಗೆ ಬಿತ್ತು ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ; ಹೋಳಿಯ ಸ್ವೀಟ್‌ ಜತೆಗೆ ʼಖಾರʼ !

Exit mobile version