Site icon Vistara News

ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮಾಯಾವತಿ ಬೆಂಬಲ ಘೋಷಣೆ

Mayawati and Droupadi Murmu

ಲಖನೌ: ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (BSP)ದ ಮುಖ್ಯಸ್ಥೆ ಮಾಯಾವತಿಯವರು ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಬೆಂಬಲ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಎಂದು ಘೋಷಣೆ ಮಾಡಿದ್ದಾರೆ. “ಬಿಜೆಪಿಯನ್ನು ಅಥವಾ ಎನ್‌ಡಿಎಯನ್ನು ಬೆಂಬಲಿಸಲಾಗಲಿ, ಪ್ರತಿಪಕ್ಷಗಳನ್ನು ವಿರೋಧಿಸಲಾಗಲೀ ನಾವು ದ್ರೌಪದಿ ಮುರ್ಮುರನ್ನು ಬೆಂಬಲಿಸುತ್ತಿಲ್ಲ. ನಮ್ಮ ಪಕ್ಷ ಮತ್ತು ರಾಜಕೀಯದಲ್ಲಿ ನಮ್ಮ ನಡೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ” ಎಂದು ಮಾಯಾವತಿ ಹೇಳಿಕೊಂಡಿದ್ದಾರೆ. ಬಿಎಸ್‌ಪಿಯಲ್ಲಿ ಒಬ್ಬ ಶಾಸಕ ಮತ್ತು ೧೦ಮಂದಿ ಸಂಸದರು ಇದ್ದು, ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಇವರೆಲ್ಲರ ಮತ ದ್ರೌಪದಿ ಮುರ್ಮು ಪಾಲಾಗಲಿದೆ.

ಈ ಸಲ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರೇ ಎನ್‌ಡಿಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ. ಹಾಗಾಗಿ ಅವರು ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂಬ ವದಂತಿ ದೊಡ್ಡಮಟ್ಟದಲ್ಲಿಯೇ ಹಬ್ಬಿತ್ತು. ಆದರೆ ಅದನ್ನು ಮಾಯಾವತಿ ನಿರಾಕರಿಸಿದ್ದರು. ಇಂಥ ಸುದ್ದಿಗಳನ್ನು ಹಬ್ಬಿಸಿದ್ದು ಮಾಧ್ಯಮಗಳು ಎಂದು ಕಿಡಿಕಾರಿದ್ದರು ಮತ್ತು ನಾನು ರಾಷ್ಟ್ರಪತಿ ಚುನಾವಣೆಗೆ ಯಾವ ಕಾರಣಕ್ಕೂ ಅಭ್ಯರ್ಥಿಯಾಗಲಾರೆ. ನನಗೆ ನನ್ನ ಪಕ್ಷದ ಸಂಘಟನೆ, ಅಸ್ತಿತ್ವ ಮುಖ್ಯ ಎಂದಿದ್ದರು.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಪಕ್ಷಗಳು ಜಂಟಿಯಾಗಿ ಟಿಎಂಸಿ ಹಿರಿಯ ನಾಯಕ ಯಶವಂತ್‌ ಸಿನ್ಹಾರನ್ನು ಕಣಕ್ಕಿಳಿಸಿವೆ. ಎನ್‌ಡಿಎ ಒಕ್ಕೂಟದಲ್ಲಿರುವ ಶಾಸಕ-ಸಂಸದರ ಬಲವನ್ನು ನೋಡಿದರೆ, ಮುಂದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಎಂಬುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ದ್ರೌಪದಿ ಮುರ್ಮು ಅವಹೇಳನ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್

Exit mobile version