Site icon Vistara News

Loka Sabha Election | 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಮಾಯಾವತಿ ನಿರ್ಧಾರ; ಬಿಜೆಪಿಯೇತರ ಮೈತ್ರಿಕೂಟಕ್ಕೆ ಹಿನ್ನಡೆ

mayavati

ಲಖನೌ : ಮುಂಬರುವ ವಿಧಾನಸಭಾ ಚುನಾವಣೆಗಳು ಹಾಗೂ 2024ರ ಲೋಕ ಸಭಾ ಚುನಾವಣೆಯಲ್ಲಿ (Loka Sabha Election) ಯಾವುದೇ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿ ಸ್ಪರ್ಧೆಗೆ ಸಿದ್ಧಳಾಗಿದ್ದೇನೆ ಎಂಬುದಾಗಿ ಬಹುಜನ ಸಮಾಜ್​ ಪಾರ್ಟಿ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಭಾನುವಾರ (ಜನವರಿ 15) ಹೇಳಿದ್ದಾರೆ. ಅವರ ನಿರ್ಧಾರದಿಂದಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ಸಂಘಟಿಸುವ ಪ್ರತಿಪಕ್ಷಗಳ ಯೋಜನೆಗೆ ಹಿನ್ನಡೆ ಉಂಟಾಗಿದೆ.

ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ, ಚತ್ತೀಸ್​ಗಢ, ತೆಲಂಗಾಣ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಅಲ್ಲದೆ, 2024ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡನೇ ಅವಧಿಯ ಆಡಳಿತ ಮುಕ್ತಾಯಗೊಳ್ಳಲಿದ್ದು ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣಾ ಕಣಗಳಲ್ಲಿ ತಮ್ಮದು ಏಕಾಂಗಿ ಸ್ಪರ್ಧೆ ಎಂಬುದಾಗಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ತಮ್ಮ 67ನೇ ಜನುಮದಿನದ ಆಚರಣೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದಿನ ಎಲ್ಲ ಚುನಾವಣೆಗಳಲ್ಲಿ ನಾವು ಬೇರೆ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಸ್ವಂತ ಬಲದಿಂದ ಸ್ಪರ್ಧೆ ನಡೆಸುತ್ತೇವೆ, ಎಂಬುದಾಗಿ ನುಡಿದಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳ ಜತೆಗಿನ ಮೈತ್ರಿಯಿಂದ ನಮಗೆ ಹಿನ್ನಡೆಯಾಗಿದೆ. ಉಳಿದ ಪಕ್ಷಗಳ ಪಿತೂರಿಗೆ ನಾವು ಬಲಿಯಾಗಿದ್ದೇವೆ. ಈ ಹಾನಿಯನ್ನು ತಡೆಯುವ ಉದ್ದೇಶದಿಂದ ಮೈತ್ರಿಯ ಯೋಚನೆ ಕೈಬಿಟ್ಟಿದ್ದೇವೆ ಎಂದು ಅವರು ತಮ್ಮ ನಿರ್ಧಾರಕ್ಕೆ ಕಾರಣ ಕೊಟ್ಟಿದ್ದಾರೆ.

2019ರ ಚುನಾವಣೆಯಲ್ಲಿ ಬಿಎಸ್​ಪಿ ಹಾಗೂ ಸಮಾಜವಾದಿ ಪಾರ್ಟಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಅದರಲ್ಲಿ ಬಿಎಸ್​ಪಿ 10 ಸೀಟ್​ಗಳನ್ನು ಗೆಲ್ಲುವ ಮೂಲಕ ಲಾಭ ಮಾಡಿಕೊಂಡಿತ್ತು. ಎಸ್​ಪಿಗೆ ಕೇವಲ ಐದು ಸ್ಥಾನಗಳು ದೊರಕಿದ್ದವು.

ಇದನ್ನೂ ಓದಿ | ಉಪರಾಷ್ಟ್ರಪತಿ ಚುನಾವಣೆ: ಮತ್ತೆ ಎನ್‌​ಡಿಎ ಒಕ್ಕೂಟದ ಅಭ್ಯರ್ಥಿಗೇ ಮಣೆ ಹಾಕಿದ ಮಾಯಾವತಿ!

Exit mobile version