Site icon Vistara News

Meghalaya CM Office: ಮೇಘಾಲಯ ಸಿಎಂ ಕಚೇರಿಗೆ ಮುತ್ತಿಗೆ! ಕಲ್ಲು ತೂರಾಟದಲ್ಲಿ ಐವರು ಸಿಬ್ಬಂದಿಗೆ ಗಾಯ

Meghalaya CM offered help injured person

ತುರಾ, ಮೇಘಾಲಯ: ಈಶಾನ್ಯ ಭಾರತದ ಮಣಿಪುರ (Manipur Violence) ಹೊತ್ತಿ ಉರಿಯುತ್ತಿರುವ ಮಧ್ಯೆಯೇ ಮತ್ತೊಂದು ರಾಜ್ಯವಾದ ಮೇಘಾಲಯದಲ್ಲೂ ಹಿಂಸಾಚಾರ (Meghalaya) ಭುಗಿಲೆದ್ದಿದೆ. ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಕಚೇರಿಗೆ (Meghalaya CM Office) ಜನರು ಮುತ್ತಿಗೆ ಹಾಕಿದ ಘಟನೆ ತುರಾದಲ್ಲಿ ಸೋಮವಾರ ರಾತ್ರಿ ನಡೆದಿದೆ. ಸಿಎಂ ಕಾನ್ರಾಡ್ (CM Conrad Sangma) ಅವರು ತುರಾದಲ್ಲಿರುವ ಸಿಎಂ ಕಚೇರಿಗೆ ಆಗಮಿಸಿದ್ದರು. ಈ ವಿಷಯ ಅರಿತ ಗರೋ ಹಿಲ್ಸ್ ಮೂಲದ ನಾಗರಿಕ ಗುಂಪುಗಳ ಸದಸ್ಯರು ಮುತ್ತಿಗೆ ಹಾಕಿದರು. ಆಗ ಇದ್ದಕ್ಕಿಂತ ಕಲ್ಲು ತೂರಾಟ (Stone Pelting) ನಡೆದಿದೆ. ಐವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸಿಎಂ ಸಂಗ್ಮಾ ಅವರು ಅಪಾಯದಿಂದ ಪಾರಾಗಿದ್ದಾರೆ. ತುರಾ ನಗರವನ್ನು(Tura) ಚಳಿಗಾಲದ ರಾಜಧಾನಿಯಾಗಿ ಘೋಷಿಸುವಂತೆ ಈ ಗುಂಪುಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿವೆ.

ಮೇಘಾಲಯ ಸಿಎಂ ಕಚೇರಿಗೆ ಕಲ್ಲು ತೂರಿದ ಪ್ರತಿಭಟನಾಕಾರರು

ಸೋಮವಾರ ಸಂಜೆ ಮುಖ್ಯಮಂತ್ರಿಗಳ ಕಚೇರಿಗೆ ನೂರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಈ ವೇಳೆ, ಕೆಲವರು ಕಲ್ಲು ತೂರಾಟ ನಡೆಸಿದರು. ಆಗ ಮುತ್ತಿಗೆಯು ಹಿಂಸಾಚಾರವಾಗಿ ಬದಲಾಯಿತು. ಕಲ್ಲು ತೂರಾಟದಲ್ಲಿ ಐವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕೂಡಲೇ ಸಂಗ್ಮಾ ಅವರ ಕಚೇರಿಯೊಳಗೇ ಕರೆದೊಯ್ಯಲಾಯಿತು. ಏತನ್ಮಧ್ಯೆ, ಸಂಗ್ಮಾ ಅವರು ಇನ್ನೂ ಕಚೇರಿಯೊಳಗೇ ಇದ್ದಾರೆ ಎಂದು ತಿಳಿದು ಬಂದಿದೆ.

ಹಿಂಸಾಚಾರದ ವಿಡಿಯೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿವೆ. ಗಾಯಗೊಂಡ ಭದ್ರತಾ ಸಿಬ್ಬಂದಿಗಳು ಕಚೇರಿಯ ನೆಲದ ಮೇಲೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಂಗ್ಮಾ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಪ್ರತಿಭಟನಾಕಾರರು ಇಡೀ ಕಚೇರಿಯನ್ನು ಸುತ್ತುವರಿದಿದ್ದರಿಂದ ಅವರಿಗೆ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: ಮಣಿಪುರ ಹಿಂಸಾಚಾರ; ಶಸ್ತ್ರಾಸ್ತ್ರ ಲೂಟಿ ಮಾಡಲು ಯತ್ನಿಸಿದ ಗಲಭೆಕೋರರನ್ನು ಓಡಿಸಿದ ಸೇನೆ, ಒಬ್ಬನ ಹತ್ಯೆ

ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲೂದ್ದರೂ, ಉದ್ವಿಗ್ನತೆಯಿಂದ ಕೂಡಿದೆ ಎಂದು ಮೇಘಾಲಯ ಮುಖ್ಯಮಂತ್ರಿಗಳ ಕಾರ್ಯಾಲಯವು ತಿಳಿಸಿದೆ. ಪ್ರತಿಭಟನಾಕಾರರು ಕಚೇರಿಗೆ ಮುತ್ತಿಗೆ ಹಾಕಿದ್ದ ವೇಳೆ ಅವರೊಂದಿಗೆ ಸಿಎ ಕಾನ್ರಾಡ್ ಅವರು ಮಾತುಕತೆ ನಡೆಸುತ್ತಿದ್ದರು. ಈ ವೇಳೆ, ಕೆಲವರು ಅವರತ್ತ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿಯು ಬಿಗಡಾಯಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version