Site icon Vistara News

Meghalaya Election Result: ಎನ್‌ಪಿಪಿ ನಾಯಕ ಸಂಗ್ಮಾಗೆ 45 ಶಾಸಕರ ಬೆಂಬಲ, ನೂತನ ಎಂಎಲ್‌ಎಗಳಿಂದ ಅಧಿಕಾರ ಸ್ವೀಕಾರ

Meghalaya Election Result, Conrad K Sangma led alliance has 45 mlas support

ಶಿಲ್ಲಾಂಗ್, ಮೇಘಾಲಯ: ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ(UDP) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್(PDF) ತಮ್ಮ ಬೆಂಬಲವನ್ನು ಎನ್‌ಪಿಪಿ ನೇತೃತ್ವದ ಮೈತ್ರಿಕೂಟಕ್ಕೆ ನೀಡಿವೆ. ಈ ಮೊದಲು ಈ ಪಕ್ಷಗಳು ಎನ್‌ಪಿಪಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದವು. ಏತನ್ಮಧ್ಯೆ, ಸೋಮವಾರ ನೂತನ ಚುನಾಯಿತ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದೆ. ಯುಡಿಪಿ ಮತ್ತು ಪಿಡಿಎಫ್ ಬೆಂಬಲದೊಂದಿಗೆ ಕಾನ್ರಾಡ್ ಕೆ ಸಂಗ್ಮಾ ಅವರಿಗೆ ಈಗ ಒಟ್ಟು 45 ಶಾಸಕರ ಬೆಂಬಲ ದೊರೆತಂತಾಗಿದೆ(Meghalaya Election Result).

ತಲಾ ಎರಡು ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತು ಎಚ್‌ಎಸ್‌ಡಿಪಿ, ಇಬ್ಬರು ಸ್ವತಂತ್ರ ಶಾಸಕರು ಈಗಾಗಲೇ ಎನ್‌ಪಿಪಿಗೆ ಬೆಂಬಲ ಪತ್ರವನ್ನು ನೀಡಿವೆ. ಫೆಬ್ರವರಿ 27ರಂದು ನಡೆದ ಚುನಾವಣೆಯಲ್ಲಿ ಎನ್‌ಪಿಪಿ ಒಟ್ಟು 27 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: North East Election Results: ಬಿಜೆಪಿ ಬೆಂಬಲಿಸಿದ ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ ಜನರಿಗೆ ಮೋದಿ ಧನ್ಯವಾದ

59 ಸದಸ್ಯರನ್ನು ಹೊಂದಿರುವ ಹೊಸ ಸದನವು ಸೋಮವಾರ ಮೊದಲ ಅಧಿವೇಶನವನ್ನು ನಡೆಸಲಿದ್ದು, ಹಂಗಾಮಿ ಸ್ಪೀಕರ್ ಅವರು ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಧಾನಸಭೆಯ ಸ್ಪೀಕರ್, ಆಯುಕ್ತರು ಮತ್ತು ಕಾರ್ಯದರ್ಶಿಗಳ ಆಯ್ಕೆಗಾಗಿ ಮಾರ್ಚ್ 9 ರಂದು ಸದನ ಮತ್ತೆ ಸಭೆ ಸೇರಲಿದೆ.

Exit mobile version