ನವದೆಹಲಿ: ಮೆಟಾ ಇಂಡಿಯಾ (ಮೊದಲಿನ ಫೇಸ್‌ಬುಕ್) ಮುಖ್ಯಸ್ಥನ ಸ್ಥಾನಕ್ಕೆ ಅಜಿತ್ ಮೋಹನ್ (Ajit Mohan) ಅವರು ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಟ್ವಿಟರ್ ಸಿಇಒ ಆಗಿದ್ದ, ಭಾರತ ಮೂಲದ ಪರಾಗ್ ಅಗ್ರವಾಲ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಭಾರತದ ಮತ್ತೊಬ್ಬರು ಉನ್ನತ ಸ್ಥಾನ ತೊರೆದಿದ್ದಾರೆ. ತತ್‌ಕ್ಷಣದಿಂದಲೇ ಅನ್ವಯವಾಗುವಂತೆ, ಅಂದರೆ ನವೆಂಬರ್ 3ರಂದೇ ಅವರು ಹುದ್ದೆ ತೊರೆದಿದ್ದಾರೆ.
ಆದರೆ, ಮತ್ತೊಂದು ಮಹತ್ವದ ಬದಲಾವಣೆಯಲ್ಲಿ ಸಾಮಾಜಿಕ ಜಾಲತಾಣವಾದ ಸ್ನ್ಯಾಪ್ ಚಾಟ್ (Snap Chat) ಎಪಿಎಸಿ ಬ್ಯುಸಿನೆಸ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. “ಅಜಿತ್ ಮೋಹನ್ ಅವರು ಮೆಟಾ ಇಂಡಿಯಾ ಮುಖ್ಯಸ್ಥ ಸ್ಥಾನ ತೊರೆಯಲು ತೀರ್ಮಾನಿಸಿದ್ದಾರೆ. ಕಂಪನಿಯ ಹೊರಗೆ ಅವರಿಗೆ ಮತ್ತೊಂದು ಅವಕಾಶ ಸಿಕ್ಕ ಕಾರಣ ರಾಜೀನಾಮೆ ನೀಡಿದ್ದಾರೆ” ಎಂದು ಮೆಟಾ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ ಉಪಾಧ್ಯಕ್ಷ ನಿಕೋಲಾ ಮಂಡೇಲ್‌ಸೋನ್ ತಿಳಿಸಿದ್ದಾರೆ.
“ಕಳೆದ ನಾಲ್ಕು ವರ್ಷಗಳಿಂದ ಅಜಿತ್ ಮೋಹನ್ ಅವರು ಮೆಟಾದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದಾರೆ. ಭಾರತದ ಕೋಟ್ಯಂತರ ಜನರನ್ನು ಮೆಟಾ ತಲುಪಲು ಸಾಧ್ಯವಾಗಿದೆ. ಸಂಸ್ಥೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳಿತಾಗಲಿ” ಎಂದು ಹಾರೈಸಿದ್ದಾರೆ.
ಇದನ್ನೂ ಓದಿ | Parag Agrawal | ಪರಾಗ್ ಅಗ್ರವಾಲ್‌ಗೆ 344 ಕೋಟಿ ರೂ. ಪರಿಹಾರ ಪ್ಯಾಕೇಜ್ ನಿರೀಕ್ಷೆ