Site icon Vistara News

Mid-Air Collision: ಸ್ವಲ್ಪದರಲ್ಲೇ ತಪ್ಪಿದ ಎರಡು ವಿಮಾನಗಳ ಪತನ!

Mid-Air Collision of two planes that were almost missed

ನವದೆಹಲಿ: 2023 ನವೆಂಬರ್ 17ರಂದು ನವದೆಹಲಿಯಿಂದ (Delhi Airport) ರಾಯಪುರ್ (Raipur) ಮತ್ತು ಹೈದ್ರಾಬಾದ್‌ಗೆ (Hyderabad) ಹೊರಟಿದ್ದ ಎರಡು ಇಂಡಿಗೋ ಎ321ನಿಯೋ ವಿಮಾನಗಳು (IndiGo Flights) ಆಕಾಶದಲ್ಲೇ (Mid-Air Collision) ಡಿಕ್ಕಿಯಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿತು ಎಂಬ ಮಾಹಿತಿಯು ಈಗ ಬಹಿರಂಗವಾಗಿದೆ. ಈ ಕುರಿತು ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಸಂಸ್ಧೆ(ಎಎಐಬಿ) ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿದೆ.

ಒಂದು ಹಂತದಲ್ಲಿ ಈ ಎರಡೂ ವಿಮಾನಗಳು ವಿಮಾನಗಳು ಲಂಬವಾಗಿ ಕೇವಲ 400 ಅಡಿ ಅಂತರದಲ್ಲಿ ಮತ್ತು ಪಾರ್ಶ್ವವಾಗಿ 1.2 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದವು. ಎಎಐಬಿಯ ಪ್ರಾಥಮಿಕ ವರದಿಯ ಪ್ರಕಾರ, ಈ ವಿಮಾನಗಳು 800 ಅಡಿಗಳಷ್ಟು ಲಂಬ ಅಂತರದಲ್ಲಿ ಬೇರ್ಪಟ್ಟ ಬಳಿಕ, ಪಾರ್ಶ್ವವಾಗಿ 0.2 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದವು. ಸ್ವಲ್ಪವೇ ಯಾಮಾರಿದೂರ ಬಹುದೊಡ್ಡ ಅನಾಹುತ ಸಂಭವಿಸುತ್ತಿತ್ತು.

2023ರ ನವೆಂಬರ್ 17ರಂದು ಎರಡು ಇಂಡಿಗೋ ವಿಮಾನಗಳು, VT-IUO (A321) ಮತ್ತು VT-ISO (A320), ಕ್ರಮವಾಗಿ ದೆಹಲಿಯಿಂದ ಹೈದರಾಬಾದ್‌ಗೆ IGO 2113 ಮತ್ತು ದೆಹಲಿಯಿಂದ ರಾಯ್‌ಪುರಕ್ಕೆ IGO 2206 ವಿಮಾನಗಳನ್ನು ನಡೆಸಲು ನಿರ್ಧರಿಸಲಾಗಿತ್ತು. IGO 2113 ರನ್‌ವೇ 27 ರಿಂದ 6.30ಕ್ಕೆ ನಿರ್ಗಮನದ ಅನುಮತಿಯನ್ನು ಪಡೆದುಕೊಂಡಿತು ಮತ್ತು 7.01ಕ್ಕೆ ಟೇಕ್ ಆಫ್ ಆಗಿತ್ತು. ಆದಾಗ್ಯೂ, ಅದು ಬೇರೆ ರನ್‌ವೇಯ ಟೇಕ್‌ಆಫ್ ಹಾದಿಯ ಕಡೆಗೆ ತಿರುಗಿತು.

ಏತನ್ಮಧ್ಯೆ, IGO 2206 ಅದೇ ರನ್ ವೇಯಿಂದ 4000 ಅಡಿಗಳಿಗೆ ಏರಿತು. ಎರಡು ವಿಮಾನಗಳ ನಡುವೆ ಪ್ರತ್ಯೇಕತೆಯ ನಿಯಮವನ್ನು ಉಲ್ಲಂಘನೆಯಾಯಿತು. ಇದು ಪ್ರಸ್ತುತ ಸಂಘರ್ಷದ ಎಚ್ಚರಿಕೆಯನ್ನು ನೀಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಮಾನಗಳಿಗೆ ಯಾವುದೇ ಹಾನಿಯಿಲ್ಲ. ಈ ಕುರಿತಾಗಿ ತನಿಖೆ ಇನ್ನೂ ಜಾರಿಯಲ್ಲಿದೆ. ಸಿವಿಆರ್ ಮತ್ತು ಎಫ್‌ಡಿಆರ್, ಮ್ಯಾನುವಲ್ಸ್, ಫ್ಲೈಟ್ ಫೋಲ್ಡರ್ಸ್, ಎಂಇಟಿಎಆರ್ ಡಿಟೇಲ್ಸ್, ಸಿಬ್ಬಂದಿ ಮತ್ತು ಕಂಟ್ರೋಲರ್ ಹಾಗೂ ರೆಕಾರ್ಡಿಂಗ್ ಆಫ್ ರೇಡಾರ್ ಡೇಟಾ, ಎಟಿಸಿ ಟೇಪ್ ರೆಕಾರ್ಡಿಂಗ್‌ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Nepal Plane Crash | ಪತಿಯಂತೆಯೇ ಕೊನೆಯುಸಿರೆಳೆದ ಪತ್ನಿ! ನೇಪಾಳದ ವಿಮಾನ ದುರಂತದಲ್ಲಿ ಮೃತ ಕೋ-ಪೈಲಟ್‌ ಅಂಜು ಕಥೆ

Exit mobile version