Site icon Vistara News

MiG-29:‌ ಪಾಕ್-‌ ಚೀನಾ ಬೆದರಿಕೆಗೆ ಭಾರತದ ಉತ್ತರ; ಶ್ರೀನಗರದಲ್ಲಿ ಮಿಗ್‌- 29 ಸ್ಕ್ವಾಡ್ರನ್‌

mig 29 figter jet

ಹೊಸದಲ್ಲಿ: ಶತ್ರುವಿನ ಗಂಟಲಿನ ಬಳಿಯೇ ಈಟಿ ಇಟ್ಟಂತೆ, ಜಮ್ಮು- ಕಾಶ್ಮೀರದ (jammu kashmir) ಶ್ರೀನಗರದಲ್ಲಿ (Srinagar) ಮಿಗ್ -29 (MiG-29) ಯುದ್ಧ ವಿಮಾನಗಳ (fighter jets) ಉನ್ನತೀಕರಿಸಿದ ಸ್ಕ್ವಾಡ್ರನ್ ಅನ್ನು ಭಾರತ ಸ್ಥಾಪಿಸುತ್ತಿದೆ.

ಪಾಕಿಸ್ತಾನ ಮತ್ತು ಚೀನಾ ಎರಡು ಕಡೆಗಳಿಂದಲೂ ಸಂಭಾವ್ಯ ಬೆದರಿಕೆಗಳನ್ನು ಎದುರಿಸುವ ಕಾರ್ಯತಂತ್ರವಾಗಿ ಶ್ರೀನಗರ ವಾಯುನೆಲೆಯಲ್ಲಿ ಭಾರತ ಇದನ್ನು ಸ್ಥಾಪಿಸಿದೆ. ಹೊಸದಾಗಿ ಗೊತ್ತುಪಡಿಸಿದ ಈ ʼಡಿಫೆಂಡರ್ ಆಫ್ ದಿ ನಾರ್ತ್’ ಸ್ಕ್ವಾಡ್ರನ್, ಉತ್ತರದ ಬೆದರಿಕೆಗಳ ವಿರುದ್ಧ ಕಾವಲು ಕಾಯುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ಹಿಂದೆ ಈ ಸ್ಕ್ವಾಡ್ರನ್‌ ಅನ್ನು ʼಟ್ರೈಡೆಂಟ್ಸ್ʼ ಎಂದು ಕರೆಯಲಾಗುತ್ತಿತ್ತು.

ಕಾಶ್ಮೀರ ಕಣಿವೆಯ ಹೃದಯಭಾಗದಲ್ಲಿರುವ ಶ್ರೀನಗರ ಭೌಗೋಳಿಕ ಪ್ರಾಮುಖ್ಯತೆ ಈ ವಾಯುನೆಲೆಯನ್ನು ಯೋಜಿಸಲು ಅನುಕೂಲವಾಗಿದೆ. ಇಲ್ಲಿನ ಎತ್ತರ, ಒತ್ತಡದ ಅನುಪಾತ, ತ್ವರಿತ ಪ್ರತಿಕ್ರಿಯೆ ಸಮಯ, ಸುಧಾರಿತ ಏವಿಯಾನಿಕ್ಸ್‌ಗಳು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿರುವ ವಿಮಾನವನ್ನು ನಿಯೋಜಿಸಲು ಅನುಕೂಲವಾಗಿವೆ. ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ ಅವರು MiG-29 ಈ ಮಾನದಂಡಗಳನ್ನು ಎತ್ತಿ ತೋರಿಸಿದ್ದು, ಎರಡೂ ಕಡೆಗಳಿಂದ ಬರಬಹುದಾದ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ಇಲ್ಲಿ ಈ ಹಿಂದೆ ನಿಯೋಜಿಸಲಾದ MiG-21 ವಿಮಾನಗಳಿಗೆ ಹೋಲಿಸಿದರೆ MiG-29ಗಳು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. 2019ರಲ್ಲಿ ಬಾಲಾಕೋಟ್ ವಾಯುದಾಳಿಗಳ ವೇಳೆ ಎಫ್ -16 ಅನ್ನು ಹೊಡೆದುರುಳಿಸಿದ್ದು ಸೇರಿದಂತೆ ಮಿಗ್-21ಗಳು ಕಾಶ್ಮೀರ ಕಣಿವೆಯನ್ನು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಸಂರಕ್ಷಿಸಿವೆ. ನವೀಕೃತ ಮಿಗ್ -29ಗಳು ವಿಸ್ತಾರ ಸಾಮರ್ಥ್ಯಗಳನ್ನು ಹೊಂದಿವೆ. ಇವುಗಳಲ್ಲಿ ವರ್ಧಿತ ಏವಿಯಾನಿಕ್ಸ್, ದೀರ್ಘ-ಶ್ರೇಣಿಯ ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ನೆಗೆಯುವ ಕ್ಷಿಪಣಿಗಳು, ಪ್ರಬಲವಾದ ಶಸ್ತ್ರಾಸ್ತ್ರಗಳು ಸೇರಿವೆ.

MiG-29ಗಳು ವಾಯು ಚಕಮಕಿ ಸಮಯದಲ್ಲಿ ಜ್ಯಾಮಿಂಗ್ ಮೂಲಕ ಶತ್ರು ವಿಮಾನಕ್ಕೆ ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳ ರಕ್ಷಣಾತ್ಮಕ ಪರಾಕ್ರಮ ಹೆಚ್ಚಿದೆ. ಈ ವಿಮಾನಗಳು ರಾತ್ರಿ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತಿವೆ. ಗಾಳಿಯಲ್ಲೇ ಇಂಧನ ತುಂಬುವುದು ಸುಲಭ. ಜನವರಿಯಿಂದ ಮಿಗ್ -29ಗಳು ಕಾಶ್ಮೀರ ಕಣಿವೆ ಮತ್ತು ಲಡಾಖ್ ವಲಯದಲ್ಲಿ ಸಕ್ರಿಯವಾಗಿ ಗಸ್ತು ತಿರುಗುತ್ತಿವೆ. ಚೀನಾದಿಂದ ವಾಯುಪ್ರದೇಶ ಉಲ್ಲಂಘನೆಯ ಪ್ರಯತ್ನಗಳ ಸಂದರ್ಭದಲ್ಲಿ ಈ ಜೆಟ್‌ಗಳು ತ್ವರಿತವಾಗಿ ಪ್ರತಿಕ್ರಿಯಿಸಿವೆ. ಗಲ್ವಾನ್‌ ಘರ್ಷಣೆಯ ಬಳಿಕ ಚೀನಾದ ಬೆದರಿಕೆ ಎದುರಿಸಲು ಲಡಾಖ್ ಸೆಕ್ಟರ್‌ನಲ್ಲಿ ಸ್ಥಾಪಿಸಲಾದ ಮೊದಲ ವಿಮಾನವೆಂದರೆ MiG-29.

ಇದನ್ನೂ ಓದಿ: MiG-21 Jets: ಅಭಿನಂದನ್‌ ವರ್ಧಮಾನ್‌ ಸಾಹಸದ ಮಿಗ್‌ 21 ಜೆಟ್‌ಗಳ ಹಾರಾಟ ಸ್ಥಗಿತ, ಇಲ್ಲಿದೆ ಇವುಗಳ ಪತನ ಕಥನ

Exit mobile version