ಜೈಪುರ: ರಾಜಸ್ಥಾನದ ನೀಮ್ ಕಾ ಥಾನಾ ಜಿಲ್ಲೆಯ ಕೋಲಿಹಾನ್ ತಾಮ್ರದ ಗಣಿಯಲ್ಲಿ (copper mine) ಲಿಫ್ಟ್ ಕುಸಿದು (Mine Lift Collapse) ಪಾತಾಳದಲ್ಲಿ ಸಿಲುಕಿದ್ದ 15 ವಿಜಿಲೆನ್ಸ್ ಅಧಿಕಾರಿಗಳಲ್ಲಿ 14 ಮಂದಿಯನ್ನು ರಕ್ಷಿಸಲಾಗಿದ್ದು, ಒಬ್ಬ ಅಧಿಕಾರಿ ದಾರುಣವಾಗಿ ಮೃತಪಟ್ಟಿದ್ದಾರೆ. ಇವರು ಪಿಎಸ್‌ಯು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ (Hindustan copper Ltd) 14 ಅಧಿಕಾರಿಗಳು ಹಾಗೂ ವಿಜಿಲೆನ್ಸ್ ತಂಡದ ಸದಸ್ಯರಾಗಿದ್ದು, ಮಂಗಳವಾರ ರಾತ್ರಿ ಲಿಫ್ಟ್ ಕುಸಿದು ದುರಂತ ಸುಮಾರು 577 ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದರು.
ರಾಜಸ್ಥಾನದ ಜುಂಜೌನ್ ಜಿಲ್ಲೆಯ ಕೋಲಿಹಾನ್ ಗಣಿಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಬಳಸಲಾಗುವ ಲಂಬವಾದ ಶಾಫ್ಟ್ ಕುಸಿದಿತ್ತು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಶಾಫ್ಟ್ ಕುಸಿದಿದ್ದು, ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಘಟನೆ ವರದಿಯಾದ ಕೂಡಲೇ ಬಿಜೆಪಿ ಶಾಸಕ ಧರ್ಮಪಾಲ್ ಗುರ್ಜರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
#WATCH | Neem Ka Thana, Rajasthan: Visuals from Kolihan mine where an incident of lift collapse took place.
— ANI (@ANI) May 15, 2024
According to an SDRF jawan, One body has been taken out and 14 people were rescued from the site. pic.twitter.com/vATJUDH1l5
ಪ್ರಾಥಮಿಕ ಮಾಹಿತಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ವಿಜಿಲೆನ್ಸ್ ತಂಡವು ಪರಿಶೀಲನೆಗಾಗಿ ಗಣಿ ಒಳಗೆ ಹೋದಾಗ ಈ ಘಟನೆ ಸಂಭವಿಸಿದೆ. ಅವರು ಮೇಲಕ್ಕೆ ಬರಲು ಮುಂದಾದಾಗ, ಶಾಫ್ಟ್ ಅಥವಾ ʼಪಂಜರ’ದ ಹಗ್ಗ ಮುರಿದು ಸುಮಾರು 14 ಜನರು ಕೆಳಗೆ ಸಿಲುಕಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
#WATCH | Rajasthan: Neem Ka Thana's Kolihan mine lift collapse: Dharmendra, SDRF says "One body has been taken out and a total of 14 people have been rescued safely…" pic.twitter.com/XG1yVNXCCE
— ANI (@ANI) May 15, 2024
ಒಟ್ಟು 14 ಅಧಿಕಾರಿಗಳನ್ನು ಸರಕ್ಷಿತವಾಗಿ ಹೊರತೆಗೆಯಾಗಿತ್ತು. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತದಲ್ಲಿ ಹಿರಿಯ ಅಧಿಕಾರಿ ಉಪೇಂದ್ರ ಪಾಂಡೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಇನ್ನುಳಿದ ಅಧಿಕಾರಿಗಳ ಕೈ ಕಾಲುಗಳಿಗೆ ಗಂಭೀರ ಏಟುಗಳು ಬಿದ್ದಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯ ಪ್ರವೀಣ್ ಶರ್ಮಾ ಮಾಹಿತಿ ನೀಡಿದ್ದಾರೆ.
.