ನವದೆಹಲಿ: ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ (har ghar tiranga) ಅಭಿಯಾನದ ಭಾಗವಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (aviation minister Jyotiraditya Scindia) ಅವರು ಬುಧವಾರ ಗ್ವಾಲಿಯರ್‌ನ ಪ್ರಮುಖ ಸ್ಥಳಗಳಲ್ಲಿ ಡ್ರೋನ್‌ಗಳನ್ನು (Drone With National Flag) ಬಳಸಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಡ್ರೋನ್ 400 ಅಡಿ ಎತ್ತರದಲ್ಲಿ ಸುಮಾರು 15 ನಿಮಿಷಗಳ ಕಾಲ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರಧ್ವಜದೊಂದಿಗೆ ಹಾರಾಟ ನಡೆಸಿತು. ಈ ಕಾರ್ಯಕ್ರಮವನ್ನು ನಾಗರಿಕ ವಿಮಾನಯಾನ ಸಚಿವಾಲಯ (MoCA), ಭಾರತ್ ಡ್ರೋನ್ ಅಸೋಸಿಯೇಷನ್ ಮತ್ತು ಗರುಡಾ ಏರೋಸ್ಪೇಸ್ ಜಂಟಿಯಾಗಿ ಆಯೋಜಿಸಿದ್ದವು.
ಮೇಕ್ ಇನ್ ಇಂಡಿಯಾ ಉಪಕ್ರಮದಡಿ ಭಾರತದಲ್ಲಿ ಡ್ರೋನ್ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಉತ್ಪಾದನಾ ಸಂಬಂಧಿ ಉತ್ತೇಜನ (PLI) ಯೋಜನೆಯನ್ನು ಜಾರಿಗೊಳಿಸಿದೆ. ಸರ್ಕಾರವು ಇದಕ್ಕಾಗಿ ಸುಮಾರು 120 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Drone Delivery: ಡ್ರೋನ್ ಮೂಲಕವೇ ಮನೆ ಬಾಗಿಲಿಗೆ ಬರಲಿದೆ ಪಿಜ್ಜಾ; ಡೆಲಿವರಿ ಬಾಯ್ ಮಾಡಿದ ಚಮತ್ಕಾರ ನೋಡಿ
ಗ್ವಾಲಿಯರ್ ನಗರವು ಶತಮಾನಗಳಿಂದ ರಾಷ್ಟ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ. ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಡಬಲ್ ಎಂಜಿನ್ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ನಿನ್ನೆ (ಆಗಸ್ಟ್ 15), ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ (ದೆಹಲಿಯಲ್ಲಿ) ಭಾರತದ ಅಮೃತ್ ಕಾಲ್ ರೂಪರೇಷೆಯನ್ನು ಪ್ರಸ್ತುತಪಡಿಸಿದರು. ಗ್ವಾಲಿಯರ್ ಕೂಡ ಈ ಪ್ರಗತಿಯ ನಿರ್ಣಾಯಕ ಭಾಗವಾಗಲಿದೆ ಎಂದು ಸಿಂಧಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಷ್ಟ್ರಧ್ವಜ ಇರುವ ಡ್ರೋನ್ ಹಾರಿಸಿದ ಜ್ಯೋತಿರಾದಿತ್ಯ ಸಿಂಧಿಯಾ
आज #हर_घर_तिरंगा के तहत ग्वालियरवासियों ने अपने विकसित होते और बदलते ग्वालियर का भव्य स्वरूप देखा। ड्रोन के माध्यम से ग्वालियर के 9 विकास कार्यों को दिखाया जाना, निश्चित ही हम सभी के लिए एक अविस्मरणीय पल था।
— Jyotiraditya M. Scindia (@JM_Scindia) August 16, 2023
ये परियोजनाएं, ग्वालियर के लोगों के प्रति डबल इंजन सरकार की… pic.twitter.com/a9cFmcB45f
ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.