Site icon Vistara News

Jyotiraditya Scindia: ಹೊಟೇಲ್ ಸಿಬ್ಬಂದಿ ಜತೆ ಸಿಂಧಿಯಾ ಸಂವಾದ; ಇದು ರಾಹುಲ್ ಗಾಂಧಿ ಕಾಪಿ ಅಂದ್ರು ನೆಟ್ಟಿಗರು

Jyotiraditya Scindia

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader) ಅವರು ಟ್ರಕ್ ಚಾಲಕರಿಂದ ಹಿಡಿದು ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರ ತನಕ ನಾನಾ ಸ್ತರದ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಮಾಜಿ ಸಹವರ್ತಿ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ (Central Minister Jyotiraditya Scindia) ಅವರಿಗೆ ಇದು ಪ್ರೇರಣೆಯಾಗಿರುವಂತಿದೆ. ಯಾಕೆಂದರೆ, ಗುರುವಾರ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಗ್ವಾಲಿಯರ್‌ಗೆ (Gwalior) ಹೊರಟಿದ್ದರು. ಈ ವೇಳೆ, ದಾರಿ ಮಧ್ಯೆಯೇ ಹೊಟೇಲ್‌ಗೆ ಹೋದ ಅವರು, ಅಲ್ಲಿನ ಕಾರ್ಮಿಕರು ಮತ್ತು ಮಾಲೀಕರ ಜತೆಗೆ ಸಂವಾದ ನಡೆಸಿದರು. ಅಲ್ಲದೇ ಅವರ ಜತೆಗಿನ ವಿಡಿಯೋವನ್ನು ಟ್ವಿಟರ್‌ನಲ್ಲಿ (Video) ಷೇರ್ ಮಾಡಿದ್ದೇ ತಡ, ನೆಟ್ಟಿಗರು ಸಿಂಧಿಯಾ ಅವರ ಈ ನಡೆಯನ್ನು ರಾಹುಲ್ ಗಾಂಧಿ ಅವರ ಜತೆಗೆ ಹೋಲಿಸಲು ಆರಂಭಿಸಿದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಅವರು ರೆಸ್ಟೋರೆಂಟ್‌ನ ಹಿರಿಯ ಮಹಿಳೆಯಿಂದ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದು. ರುಚಿಯಾದ ತಿಂಡಿಯೊಂದಿಗೆ ಅಡುಗೆ ಮಾಡುವರನ್ನು ಭೇಟಿಯಾಗುವುದು ಕೂಡ ಮಹತ್ವದ್ದಾಗಿದೆ. ಇಂದು ಗ್ವಾಲಿಯರ್ ಭೇಟಿಯ ಸಂದರ್ಭದಲ್ಲಿ ರೆಸ್ಟೋರೆಂಟ್‌ನಲ್ಲಿ ತರುಣ ಸಿಬ್ಬಂದಿಯನ್ನು ಭೇಟಿ ಮಾಡುವ ಅವಕಾಶ ದೊರೆಯಿತು ಮತ್ತು ಈ ವೇಳೆ ಸ್ಥಳೀಯ ಸಮಸ್ಯೆಗಳು ಹಾಗೂ ತಿಂಡಿಯ ಬಗ್ಗೆ ಚರ್ಚೆ ನಡೆಸಿದವು ಎಂದು ಹಿಂದಿಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಟ್ವೀಟ್ ಮಾಡಿದ್ದರು.

ಸಿಂಧಿಯಾ ಅವರು ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಸಿಂಧಿಯಾ ಅವರ ನಡೆಯನ್ನು ರಾಹುಲ್ ಗಾಂಧಿ ಅವರೊಂದಿಗೆ ಹೋಲಿಸಲು ಆರಂಭಿಸಿದರು. ರಾಹುಲ್ ಗಾಂಧಿ ಅವರು ಪ್ಲೇ‌ಬುಕ್‌ನಿಂದ ಪ್ರೇರಣೆ ಪಡೆದಕೊಂಡು ಅವರಿಂದ ಕಲಿಯುತ್ತಿರುವಂತೆ ಕಾಣುತ್ತಿದೆ. ಅಮಾನ್ ಜೈಪಾಲ್ ಮಲಿಕ್ ಅವರು ರಾಹುಲ್ ಗಾಂಧಿ ಅವರಿಂದ ಕಲಿಯುತ್ತಿರುವಂತೆ ಕಾಣುತ್ತಿದೆ, ಒಳ್ಳೆಯದು (ಲರ್ನಿಂಗ್ ಫ್ರಮ್ ರಾಹುಲ್ ಗಾಂಧಿ. ಗುಡ್) ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರು, ಆಕ್ಚುವಲಿ ಅನ್‌ಲರ್ನಿಂಗ್ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Video: ಅಮೆರಿಕದಲ್ಲೂ ರಾಹುಲ್ ಗಾಂಧಿ ಟ್ರಕ್​ನಲ್ಲಿ ಪ್ರಯಾಣ; ಡ್ರೈವರ್​ ಜತೆ ಚರ್ಚೆ, ಮೂಸೇವಾಲಾ ಹಾಡು

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರು ನೆಚ್ಚಿನ ಸ್ನೇಹಿತರಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರು 2020ರಲ್ಲಿ ತಮ್ಮ ಬೆಂಬಲಿಗರ 22 ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಆ ಮೂಲಕ ಕಮಲನಾಥ್ ಅವರ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾವರನ್ನು ಕಮಲ ಪಕ್ಷವು ರಾಜ್ಯಸಭೆಗೆ ಆಯ್ಕೆ ಮಾಡಿ, ಸಚಿವರನ್ನಾಗಿ ನೇಮಿಸಿತ್ತು. 2021ರಿಂದಲೂ ಅವರ ನಾಗರಿಕ ವಿಮಾನಯನಾ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version