ನವದೆಹಲಿ: ವಿಐಪಿ ಸಂಸ್ಕೃತಿಯನ್ನು (VIP Culture) ತೊಡೆದು ಹಾಕಲು ಮುಂದಾಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Union Minister of Road Transport and Highways Nitin Gadkari) ಅವರು ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಶಬ್ದ ಮಾಲಿನ್ಯಕ್ಕೆ (Sound pollution) ಕಡಿವಾಣ ಹಾಕಲು ವಿಐಪಿ ವಾಹನಗಳ (VIP Vehicles) ಮೇಲೆ ಇರುವ ಸೈರೆನ್‌ಗೆ ಕೊಕ್ ನೀಡಲು ಮುಂದಾಗಿದ್ದಾರೆ. ವಿಐಪಿ ಕಾರುಗಳ ಮೇಲಿನ ಕೆಂಪು ದೀಪ(Red Light Beacon)ಕ್ಕೆ ಮುಕ್ತಿ ಹಾಡುವ ಭಾಗ್ಯ ನನ್ನದಾಗಿತ್ತು. ಈಗ ನಾನು ವಿಐಪಿ ಕಾರುಗಳ ಮೇಲಿನ ಸೈರೆನ್‌ಗೂ ಮಂಗಳ ಹಾಡಲು ಯೋಜನೆ ಮಾಡುತ್ತಿದ್ದೇನೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಸೈರೆನ್‌ಗೆ ಮಂಗಳಹಾಡುವ ಜತೆಗೆ ಕರ್ಕಶ ಹಾರ್ನ್‌ಗಳಿಗೂ ಮುಕ್ತಿ ಹಾಡಲಾಗುತ್ತಿದೆ. ಹಾರ್ನ್ ಮತ್ತು ಸೈರೆನ್‌ಗಳ ಬದಲಿಗೆ ಭಾರತೀಯ ಶಾಸ್ತ್ರೀಯ ಸಂಗಿತ ಉಪಕರಣಗಳ ಧ್ವನಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ. ನಾನು ಸೈರನ್ ಶಬ್ದವನ್ನು ಕೊಳಲು, ತಬಲಾ ಮತ್ತು ಶಂಖ ಸಂಗೀತಕ್ಕೆ ಬದಲಾಯಿಸುವ ನೀತಿಯನ್ನು ಮಾಡುತ್ತಿದ್ದೇನೆ. ಜನರು ಶಬ್ದ ಮಾಲಿನ್ಯದಿಂದ ಮುಕ್ತರಾಗಬೇಕೆಂದು ನಾನು ಬಯಸುತ್ತೇನೆ ಎಂದು ನಿತಿನ್ ಗಡ್ಕರಿ ಅವರು ಪುಣೆಯಲ್ಲಿ ಶನಿವಾರ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟಿಸಿ ಹೇಳಿದರು.
ಮಹಾರಾಷ್ಟ್ರದ ಪುಣೆಯ ಚಾಂದಿನಿ ಚೌಕ್‌ನಲ್ಲಿ ನಿರ್ಮಿಸಲಾದ ಬಹು ಹಂತದ ಮೇಲ್ಸೇತುವೆಯನ್ನು ಸಚಿವರು ಶನಿವಾರ ಉದ್ಘಾಟಿಸಿದರು. ಗಡ್ಕರಿ ಪ್ರಕಾರ, ಈ ಸಂಪೂರ್ಣ ಯೋಜನೆಯಲ್ಲಿ ಒಟ್ಟು 4 ಮೇಲ್ಸೇತುವೆಗಳು, 1 ಅಂಡರ್‌ಪಾಸ್ ಅಗಲೀಕರಣ ಮತ್ತು 2 ಹೊಸ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಚಾಂದಿನಿ ಚೌಕ್ ಫ್ಲೈಓವರ್ ಯೋಜನೆಯು ಪುಣೆ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಹೇಳಿದರು.
ವಾಯು ಮಾಲಿನ್ಯ ಎಂಬ ಸೈಲೆಂಟ್ ಕಿಲ್ಲರ್ ವರ್ಷಕ್ಕೆ 23 ಲಕ್ಷ ಭಾರತೀಯರು ಬಲಿ
ವಾಯು ಮಾಲಿನ್ಯ ದೇಶದಲ್ಲಿ silent killer ಆಗಿ ಕ್ರೌರ್ಯ ಮೆರೆಯುತ್ತಿದೆ. 2019ರಲ್ಲಿ ಭಾರತದಲ್ಲಿ 23 ಲಕ್ಷ ಮಂದಿ ವಾಯು ಮಾಲಿನ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ಇದಕ್ಕೆ ನಿದರ್ಶನ. ನಿಜವೆಂದರೆ ಇಡೀ ಜಗತ್ತಿನಲ್ಲಿ ಮಾಲಿನ್ಯದ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ 90 ಲಕ್ಷ. ಅಂದರೆ, ವಿಶ್ವಾದ್ಯಂತ ಈ ರೀತಿ ಮಾಲಿನ್ಯದಿಂದ 90 ಲಕ್ಷ ಮಂದಿ ಸಾವನ್ನಪ್ಪಿದ್ದು, ಭಾರತದಲ್ಲಿ ಇಂತಹ ಸಾವುಗಳ ಪ್ರಮಾಣ ಜಾಗತಿಕ ಅಂಕಿ-ಅಂಶದ ನಾಲ್ಕನೇ ಒಂದು ಭಾಗದಷ್ಟಿದೆ ಎಂದು ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್‌ನಲ್ಲಿ ಪ್ರಕಟವಾದ ಮಾಲಿನ್ಯ ಮತ್ತು ಆರೋಗ್ಯದ ಲ್ಯಾನ್ಸೆಟ್ ಆಯೋಗದ ವರದಿ ತಿಳಿಸಿದೆ. ವಾತಾವರಣದ ಗಾಳಿ ಮತ್ತು ವಿಷಕಾರಿ ರಾಸಾಯನಿಕ ಸೇರಿದಂತೆ ಆಧುನಿಕ ರೀತಿಯ ಮಾಲಿನ್ಯದಿಂದ ಉಂಟಾಗುವ ಆರ್ಥಿಕ ನಷ್ಟಗಳು ಕಡಿಮೆಯೆಂದರೂ ದೇಶದ ಜಿಡಿಪಿಯ ಶೇ.. 1ರಷ್ಟಿದೆ ಎಂದು ಅದು ಹೇಳಿದೆ.
2019ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ-ಸಂಬಂಧಿತ ಸಾವುಗಳು ಭಾರತದಲ್ಲಿ ಸಂಭವಿಸಿದೆ ಎಂದು ವರದಿ ಹೇಳುತ್ತದೆ. ಇದು ಚೀನಾದಲ್ಲಿ ಸುಮಾರು 22 ಲಕ್ಷ ಸಾವುಗಳು ಸಂಭವಿಸಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಸೂಚಿಸಿದ್ದ ಶೇ 93ರ ಪ್ರಮಾಣಕ್ಕಿಂತ ಅಧಿಕ ವಾಯುಮಾಲಿನ್ಯ ಭಾರತದಲ್ಲಿ ಉಂಟಾಗಿದೆ. ವಸತಿ ಮಾಲಿನ್ಯ ಮತ್ತು ಇತರ ಮಾಲಿನ್ಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಿಗಾವಣೆ ಮತ್ತು ಯೋಜನೆಗಾಗಿ ಭಾರತ ಸರಕಾರ ಗಣನೀಯ ಪ್ರಮಾಣದ ಹೂಡಿಕೆಗಳನ್ನು ಮಾಡಿದ್ದರೂ, ಮಾಲಿನ್ಯದಿಂದ ಆಗುವ ಸಾವಿನ ಸಂಖ್ಯೆಗಳನ್ನು ತಗ್ಗಿಸಲು ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ..
ಜಾಗತಿಕವಾಗಿ, 2015ರಂತೆಯೇ 2019ರಲ್ಲೂ ಮಾಲಿನ್ಯದಿಂದ 90 ಲಕ್ಷ ಸಾವುಗಳು ಸಂಭವಿಸಿವೆ. ಎಲ್ಲಾ ಬಗೆಯ ಸಾವುಗಳಿಗೆ ಕಾರಣವಾದ ಅಂಶಗಳಲ್ಲಿ ಶೇ. 75ರಷ್ಟು ಪಾಲು ವಾತಾವರಣದ ವಾಯು ಮಾಲಿನ್ಯದ್ದೇ ಆಗಿದೆ. ಚೀನಾದಲ್ಲಿ ಅತಿ ಹೆಚ್ಚು -ಅಂದರೆ- 18 ಲಕ್ಷ ಸಾವುಗಳು ಸಂಭವಿಸಿವೆ. ಜಾಗತಿಕವಾಗಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಸಾವುಗಳು ವಿಷಕಾರಿ ರಾಸಾಯನಿಕ ಮಾಲಿನ್ಯದಿಂದ (ಸೀಸವನ್ನು ಒಳಗೊಂಡಂತೆ) ಉಂಟಾಗಿವೆ. 2000ನೆ ಇಸವಿಯಿಂದೀಚೆಗೆ ಈ ಪ್ರಮಾಣ 66% ರಷ್ಟು ಹೆಚ್ಚಳವಾಗಿದೆ. ತೀವ್ರವಾದ ಬಡತನದೊಂದಿಗೆ ತಳುಕು ಹಾಕಿಕೊಂಡಿರುವ (ಒಳಾಂಗಣ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದಂತಹ) ಮಾಲಿನ್ಯದ ಮೂಲಗಳಿಂದ ಸಾವಿನ ಸಂಖ್ಯೆಯು ಕಡಿಮೆಯಾಗಿದೆ. ಆದರೆ ಕೈಗಾರಿಕಾ ಮಾಲಿನ್ಯಗಳಿಂದ (ವಾತಾವರಣದ ವಾಯು ಮಾಲಿನ್ಯ ಮತ್ತು ರಾಸಾಯನಿಕ ಮಾಲಿನ್ಯ) ಸಾವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಒಟ್ಟಾರೆಯಾಗಿ ಮಾಲಿನ್ಯದಿಂದ ಉಂಟಾಗುವ ಸಾವಿನ ಪ್ರಮಾಣ ಏರುಗತಿಯಲ್ಲೇ ಇದೆ ಎಂದು ಪರಿಗಣಿಸಲಾಗಿದೆ.
ಜಗತ್ತಿನಾದ್ಯಂತ ಎಲ್ಲ ಬಗೆಯ ರೋಗಗಳು, ಕಾಯಿಲೆಗಳು ಮತ್ತು ಅಕಾಲಿಕ ಮರಣಗಳಿಗೆ ಮಾಲಿನ್ಯವೇ ಅತಿದೊಡ್ಡ ಕಾರಣವಾಗಿ ನಿಲ್ಲುತ್ತದೆ. ವಿಶೇಷವಾಗಿ, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ಈ ಮಾಲಿನ್ಯವೆಂಬ ಪೆಡಂಭೂತ ಭಾರೀ ದುಷ್ಪರಿಣಾಮ ಬೀರುತ್ತಿದೆ. ಮಾಲಿನ್ಯ ಮತ್ತು ಆರೋಗ್ಯದ ಕುರಿತು ಲ್ಯಾನ್ಸೆಟ್ ಆಯೋಗದ 2017ರ ವರದಿಯ ಪರಿಷ್ಕೃತ ಆವೃತ್ತಿ ಈ ನೂತನ ವರದಿಯಲ್ಲಿದೆ. ಇದು ಮನುಕುಲ ಮತ್ತು ಭೂ ಗ್ರಹದ ಮೇಲೆ ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯದಿಂದ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಉಂಟಾಗುವ ವಿನಾಶಕಾರಿ ಪರಿಣಾಮವನ್ನು ವಿವರಿಸುತ್ತದೆ.
ಈ ಸುದ್ದಿಯನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್ಗಾಗಿ 30 ನಿಮಿಷ ನಿಲುಗಡೆಯಾದ 2 ರೈಲುಗಳು; ವಿಐಪಿ ಸಂಸ್ಕೃತಿಯ ಅತಿರೇಕ!
ಪರಿಷ್ಕೃತ ವರದಿಯಲ್ಲಿ, ಜಾಗತಿಕ ಲೆಕ್ಕಾಚಾರಗಳನ್ನು ಪುನರಾವರ್ತಿಸುವ ಬದಲು, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹೊಸ ಬಗೆಯ ವಿಂಗಡಣೆಗಳನ್ನು ಲ್ಯಾನ್ಸೆಟ್ ಆಯೋಗ ಮಾಡಿದೆ. ಅವುಗಳೆಂದರೆ:
ಜಾಗತಿಕವಾಗಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಚೀನಾ, ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾ ಮತ್ತು ಇಥಿಯೋಪಿಯಾ, ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕ, ಮತ್ತು ಸದಸ್ಯ ರಾಷ್ಟ್ರಗಳ ಪೈಕಿ ದೊಡ್ಡ ಆರ್ಥಿಕ ಘಟಕವಾಗಿರುವ ಐರೋಪ್ಯ ಒಕ್ಕೂಟ. (ಇವು ಸಾಮಾನ್ಯ ಮಾಲಿನ್ಯ ಮಾನದಂಡಗಳನ್ನು ಹೊಂದಿವೆ).
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.