Site icon Vistara News

NEET PG 2023 : ನೀಟ್​ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಆರೋಗ್ಯ ಸಚಿವಾಲಯ

neet

#image_title

ನವ ದೆಹಲಿ: ವಿದ್ಯಾರ್ಥಿಗಳ ಸಂಘದ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ನೀಟ್​ (NEET PG 2023 ) ದಿನಾಂಕವನ್ನು ಮರು ನಿಗದಿ ಮಾಡಿದೆ. ಮುಖ್ಯ ಪರೀಕ್ಷೆ ಮಾರ್ಚ್​ 5ರಂದೇ ನಡೆಯಲಿದ್ದರೂ, ಇಂಟರ್ನ್​ಶಿಪ್​ ಮುಕ್ತಾಯಕ್ಕೆ ನಿಗದಿ ಮಾಡಲಾಗಿದ್ದ ಕಟ್​ಆಫ್​ ಡೇಟ್​ ಆಗಸ್ಟ್​ 11ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಈ ಹಿಂದೆ ಮಾರ್ಚ್​ 5ರಂದು ಪರೀಕ್ಷೆ ನಿಗದಿ ಮಾಡಲಾಗಿತ್ತು. ಅಲ್ಲದೆ, ಇಂಟರ್ನ್​ಶಿಪ್​ ಮುಗಿಸುವುದಕ್ಕೆ ಮಾರ್ಚ್​​ 31 ಕೊನೇ ದಿನಾಂಕ ಎಂದು ಪ್ರಕಟಿಸಲಾಗಿತ್ತು. ಸಚಿವಾಲಯದ ಈ ತೀರ್ಮಾನವನ್ನು ರೆಸಿಡೆಂಟ್​ ಡಾಕ್ಟರ್ಸ್​ ಅಸೋಸಿಯೇಷನ್​​ (ಫೋರ್ಡಾ ) ವಿರೋಧಿಸಿತ್ತು.

ಇದನ್ನೂ ಓದಿ: Neet Exam 2022 | ನೀಟ್‌ ಪರೀಕ್ಷೆಗೆ ಕ್ಷಣಗಣನೆ; ರಾಜ್ಯದ 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ

ಡೆಲ್ಲಿ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ವಿದ್ಯಾರ್ಥಿಗಳಿಗೆ ಈ ನಿಗದಿತ ಅವಧಿಯಲ್ಲಿ ಇಂಟರ್ನ್​ಶಿಪ್​ ಮುಗಿಸುವುದಕ್ಕೆ ಸಾಧ್ಯವಿಲ್ಲ. ಈ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುತ್ತಾರೆ ಎಂಬುದಾಗಿ ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಪುರಸ್ಕರಿಸಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

Exit mobile version