Site icon Vistara News

physical abuse : ರಾಜಸ್ಥಾನದಲ್ಲಿ ಬಾಲಕಿ ಮೇಲೆ ಸಹೋದರನಿಂದಲೇ ಅತ್ಯಾಚಾರ

physical abuse

ನವದೆಹಲಿ: ರಾಜಸ್ಥಾನದ ಪಾಲಿಯಲ್ಲಿ ಸಹೋದರಿ ಮೇಲೆಯೇ ಸತತ ಮೂರು ವರ್ಷ ಅತ್ಯಾಚಾರ (physical abuse) ಮಾಡಿದ ಘಟನೆ ನಡೆದಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಪಾಲಿ ಜಿಲ್ಲೆಯ ಬಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಬಾಲಕಿ ಈ ಘಟನೆಯನ್ನು ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದಳು. ಆದರೆ ಆಕೆ ವಿಷಯವನ್ನು ನಿರ್ಲಕ್ಷಿಸಿದ್ದಳು. ಇದೀಗ ಬಾಲಕಿ ಪಾಲಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್ಪಿ) ಸಂಪರ್ಕಿಸಿ ವಿಷಯ ತಿಳಿಸಿದ ಬಳಿಕ ಪ್ರಕರಣ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ 5/6 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆಗಸ್ಟ್ 10 ರಂದು ಆರೋಪಿಯನ್ನು ಬಂಧಿಸಿ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

18 ವರ್ಷದ ಯುವತಿ ಆಗಸ್ಟ್ ಮೊದಲ ವಾರದಲ್ಲಿ ಎಸ್ಪಿಯನ್ನು ಸಂಪರ್ಕಿಸಿದ್ದಾಳೆ ಎಂದು ಬಾಲಿಯ ಸ್ಟೇಷನ್ ಹೌಸ್ ಅಧಿಕಾರಿ ವಿಕ್ರಮ್ ಸಿಂಗ್ ತಿಳಿಸಿದ್ದಾರೆ. 2020ರಲ್ಲಿ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ, ತನ್ನ ಸಹೋದರ ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಘಟನೆಯನ್ನು ಯಾರೊಂದಿಗಾದರೂ ಹಂಚಿಕೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಆಕೆ ಆರೋಪಿಸಿದ್ದಾಳೆ. ವಿಷಯವನ್ನು ತನ್ನ ತಾಯಿಯೊಂದಿಗೆ ತಿಳಿಸಿದ್ದರೂ ಸಾಮಾಜಿಕ ಅಪಮಾನಕ್ಕೆ ಹೆದರಿ ಯಾವುದೇ ಕ್ರಮ ತೆಗೆದುಕೊಳ್ಳುವ ಬದಲು ಸುಮ್ಮನಿರಿಸಿದ್ದರು. ಇದರ ಲಾಭ ಪಡೆದ ಸಹೋದರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಪೊಲೀಸರ ಪ್ರಕಾರ, ಬಾಲಕಿಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ. ಅವರ ಇಬ್ಬರು ಹಿರಿಯ ಸಹೋದರಿಯರು 2019 ರಲ್ಲಿ ವಿವಾಹವಾಗಿದ್ದರು.

ಇದನ್ನೂ ಓದಿ : Murder Attempt : JDS ಮುಖಂಡನ ಕೊಲೆಗೆ ಪ್ರಾಣ ಸ್ನೇಹಿತನಿಂದಲೇ ಸುಪಾರಿ! ಬೆಂಗಳೂರಿಂದ ಬಂದಿದ್ದರು KILLERS

ಅತ್ಯಾಚಾರ ಘಟನೆ ನಡೆದಾಗ ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಆಗಸ್ಟ್ 7 ರಂದು ಪಾಲಿ ಜಿಲ್ಲೆಯಿಂದ ಮತ್ತೊಂದು ಪ್ರಕರಣ ವರದಿಯಾಗಿದ್ದು, ಅಲ್ಲಿ 13 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ ಅತ್ಯಾಚಾರ ಎಸಗಿದ್ದ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಶನಿವಾರ ಪಾಲಿಯ ಆಸ್ಪತ್ರೆಗೆ ಕರೆತಂದ ನಂತರ ಮತ್ತು ಆಕೆಯ ಸೋನೋಗ್ರಫಿ ವರದಿಯು ಅವಳು ಗರ್ಭಿಣಿ ಎಂದು ದೃಢಪಡಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.

Exit mobile version