ನವದೆಹಲಿ: ಗೋದ್ರಾ ಹತ್ಯಾಕಾಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಿ ಬ್ರಿಟನ್‌ನ ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಬೆನ್ನಲ್ಲೇ, ಜಮ್ಮು-ಕಾಶ್ಮೀರದ ಕುರಿತು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಆಕ್ಷೇಪಾರ್ಹ ಲೇಖನ New York Times On Kashmir() ಪ್ರಕಟಿಸಿದೆ. ನ್ಯೂಯಾರ್ಕ್ ಟೈಮ್ಸ್ ಲೇಖನವನ್ನು ಕೇಂದ್ರ ಸರ್ಕಾರ ಖಂಡಿಸಿದ್ದು, “ಭಾರತದ ವಿರುದ್ಧ ಪತ್ರಿಕೆಯು ದುರುದ್ದೇಶಪೂರಕವಾಗಿ ಲೇಖನ ಪ್ರಕಟಿಸಿದೆ” ಎಂದಿದೆ.
“ಭಾರತದ ಕುರಿತು ವರದಿ ಪ್ರಕಟಿಸುವಾಗ ನ್ಯೂಯಾರ್ಕ್ ಟೈಮ್ಸ್ ತಟಸ್ಥ ನಿಲುವು ಪ್ರದರ್ಶಿಸುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ. ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕುರಿತು ಪತ್ರಿಕೆ ಪ್ರಕಟಿಸಿರುವ ಲೇಖನವು ಕಾಲ್ಪನಿಕವಾಗಿದೆ. ಭಾರತ ಹಾಗೂ ಭಾರತದ ಪ್ರಜಾಪ್ರಭುತ್ವದ ಕುರಿತು ದುರುದ್ದೇಶಪೂರಕ ವರದಿ ಪ್ರಕಟಿಸುವ ಮೂಲಕ ಪಿತೂರಿ ಮಾಡುತ್ತಿದೆ. ಆದರೆ, ನಮ್ಮ ದೇಶ, ದೇಶದ ಪ್ರಧಾನಿ ಬಗ್ಗೆ ವಿದೇಶಿ ಮಾಧ್ಯಮಗಳು ಹರಡುತ್ತಿರುವ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.
ಅನುರಾಗ್ ಠಾಕೂರ್ ಖಂಡನೆ
ಲೇಖನದಲ್ಲೇನಿದೆ?
ದಿ ಕಾಶ್ಮೀರ್ ಟೈಮ್ಸ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಸೀನ್ ಅವರು ಬರೆದಿರುವ ಲೇಖನವನ್ನು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ Op-ed (ಸಂಪಾದಕೀಯ ಪುಟದ ಎದುರಿನ ಪುಟ)ನಲ್ಲಿ ಪ್ರಕಟಿಸಲಾಗಿದೆ. “ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ಕೇಂದ್ರ ಸರ್ಕಾರ ಅಥವಾ ನರೇಂದ್ರ ಮೋದಿ ಅವರನ್ನು ಟೀಕಿಸುವ ಮಾಧ್ಯಮಗಳನ್ನು ಹತ್ತಿಕ್ಕಲಾಗುತ್ತಿದೆ. ಕಾಶ್ಮೀರದಲ್ಲೂ ಮಾಧ್ಯಮ ಸ್ವಾತಂತ್ರ್ಯ ಮಣ್ಣಾಗಿದೆ” ಎಂಬುದಾಗಿ ಭಸೀನ್ ಬರೆದಿದ್ದಾರೆ.
ಇದನ್ನೂ ಓದಿ: Bob Blackman: ಪ್ರಧಾನಿ ಮೋದಿ ಬಗೆಗಿನ ಬಿಬಿಸಿ ಸಾಕ್ಷ್ಯಚಿತ್ರವನ್ನು ಖಂಡಿಸಿದ ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್‌ಮನ್