Site icon Vistara News

Missiles Misfired: ಭಾರತೀಯ ಸೇನೆ ಫೈರಿಂಗ್ ಅಭ್ಯಾಸದ ವೇಳೆ ತಪ್ಪಾಗಿ ಹಾರಿದ 3 ಕ್ಷಿಪಣಿಗಳು; ದೊಡ್ಡಮಟ್ಟದ ಸ್ಫೋಟ

Missiles Misfired During army exercise

#image_title

ರಾಜಸ್ಥಾನದ ಜೈಸಲ್ಮೇರ್​​ನಲ್ಲಿ ಭಾರತೀಯ ಸೇನೆ ಫೈರಿಂಗ್​ ಅಭ್ಯಾಸದ ವೇಳೆ, ಮೂರು ಕ್ಷಿಪಣಿಗಳು ಆಕಸ್ಮಿಕವಾಗಿ ಹಾರಿವೆ (Missiles Misfired). ಜೈಸಲ್ಮೇರ್​​ನ ಪೋಖ್ರಾನ್​ ಬಯಲು ಪ್ರದೇಶದಲ್ಲಿ ಸೇನೆ ಎಂದಿನಂತೆ ಪ್ರಯೋಗಾತ್ಮಕ ಫೈರಿಂಗ್​​ನಲ್ಲಿ ತೊಡಗಿತ್ತು. ಆದರೆ ಮೂರು ಕ್ಷಿಪಣಿಗಳನ್ನು ಹಾರಿಸುವಾಗ ಎಡವಟ್ಟಾಗಿದೆ. ಇವು ಮೂರೂ ನೆಲದಿಂದ ವಾಯುಪ್ರದೇಶಕ್ಕೆ ಹಾರಬೇಕಾದ ಕ್ಷಿಪಣಿಗಳು ಆಗಿದ್ದವು. ಆದರೆ ತಾಂತ್ರಿಕ ಕಾರಣದಿಂದ ಸರಿಯಾಗಿ ಹಾರಲಿಲ್ಲ. ಗಮ್ಯ ತಲುಪಲಿಲ್ಲ. ಕ್ಷಿಪಣಿಯನ್ನು ಸೇನೆ ಪ್ರಯೋಗಕ್ಕಾಗಿ ಎಲ್ಲಿ ಹಾರಿಸಿತ್ತೋ, ಅಲ್ಲಿ ತಲುಪುವ ಬದಲು ಅವು ಮೂರು ಬೇರೆಬೇರೆ ಹಳ್ಳಿಗಳ ಹೊಲದಲ್ಲಿ ಹೋಗಿ ಬಿದ್ದಿವೆ. ಅಷ್ಟಲ್ಲದೆ, ದೊಡ್ಡದಾದ ಸ್ಫೋಟ ಉಂಟಾಗಿದೆ. ಇಲ್ಲಿಯವರೆಗೆ ಯಾರದ್ದೂ ಜೀವ ಹಾನಿಯಾದ, ಆಸ್ತಿಪಾಸ್ತಿ-ಬೆಳೆ ನಾಶವಾದ ವರದಿಯಾಗಿಲ್ಲ.

ಮೂರು ಕ್ಷಿಪಣಿಗಳು ಹಾರುತ್ತಿದ್ದಂತೆ ವಾಯು ಪ್ರದೇಶದಲ್ಲಿಯೇ ದೊಡ್ಡದಾಗಿ ಸ್ಫೋಟವಾಗಿವೆ. ಬಳಿಕ ಕೆಳಗೆ ಬಿದ್ದಿವೆ. ಹೀಗೆ ಬಿದ್ದಿರುವ ಕ್ಷಿಪಣಿಗಳಾಗಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಜಂಟಿಯಾಗಿ ಹುಡುಕಾಟ ನಡೆಸಿದ್ದು, ಸದ್ಯ ಎರಡು ಕ್ಷಿಪಣಿಗಳು ಅವಶೇಷವಾಗಿ ಸಿಕ್ಕಿವೆ. ಇನ್ನೊಂದು ಸಿಗುವುದು ಬಾಕಿ ಇದೆ ಎನ್ನಲಾಗಿದೆ. ಹಾಗೇ, ಕ್ಷಿಪಣಿ ತಪ್ಪಾಗಿ ಹಾರಿದ ಬಗ್ಗೆ ತನಿಖೆ ಕೈಗೊಳ್ಳುವಾಗಿ ಸೇನೆ ತಿಳಿಸಿದೆ.

ಇದನ್ನೂ ಓದಿ: BrahMos Missile Test: ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗ ಯಶಸ್ವಿ, ಆತ್ಮನಿರ್ಭರ ಭಾರತಕ್ಕೆ ಬಲ

ಕ್ಷಿಪಣಿ ವಾಯುಪ್ರದೇಶದಲ್ಲಿ ಸ್ಫೋಟವಾಗಿದ್ದರಿಂದ ದೊಡ್ಡಮಟ್ಟದ ಅವಘಡ ಆಗಲಿಲ್ಲ. ಆದರೆ ಅವು ಬಿದ್ದ ಸ್ಥಳದಲ್ಲಿ ದೊಡ್ಡ ಹೊಂಡವೇ ನಿರ್ಮಾಣವಾಗಿದೆ. ಮೂರೂ ಕ್ಷಿಪಣಿಗಳೂ ಫೈರಿಂಗ್​ ವಲಯದಿಂದ 10-25 ಕಿಮೀ ವ್ಯಾಪ್ತಿಯಲ್ಲೇ ಬಿದ್ದಿವೆ. ಒಂದು ಕ್ಷಿಪಣಿ ಅಜಾಸರ್​ ಎಂಬ ಗ್ರಾಮದ ಕಚ್ಚಬ್​ ಸಿಂಗ್​ ಪ್ರದೇಶದಲ್ಲಿ ಸಿಕ್ಕಿದ್ದರೆ, ಇನ್ನೊಂದು ಕ್ಷಿಪಣಿ ಅವಶೇಷಗಳು ಸತ್ಯಯ್ಯ ಗ್ರಾಮದ ಬಳಿ ಒಂದು ನಿರ್ಜನ ಪ್ರದೇಶದಲ್ಲಿ ಸಿಕ್ಕಿವೆ. ತಾಂತ್ರಿಕ ದೋಷ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ, ತನಿಖೆಯ ಬಳಿಕವಷ್ಟೇ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

Exit mobile version