ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಾಪತ್ತೆಯಾಗಿದ್ದ ಭಾರತೀಯ ಸೈನಿಕನನ್ನು (Army jawan) ಪತ್ತೆ ಹಚ್ಚಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು (Police) ಹೇಳಿದ್ದಾರೆ. ಯೋಧ ಜಾವೇದ್ ಅಹ್ಮದ್ ವಾನಿ ಎಂದು ಗುರುತಿಸಲಾಗಿರುವ ಯೋಧ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ (Kulgam district) ತನ್ನ ಊರಲ್ಲಿದ್ದಾಗ ಕಣ್ಮರೆಯಾಗಿದ್ದ. ಈಗ ಪತ್ತೆಯಾಗಿರುವ ವಾನಿ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಯೋಧನ ವೈದ್ಯಕೀಯ ತಪಾಸಣೆ ನಂತರ ಶೀಘ್ರವೇ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಜುಲೈ 29 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ತನ್ನ ಮನೆಯ ಸಮೀಪ 20 ರ ಹರೆಯದ ವಾನಿ ನಾಪತ್ತೆಯಾಗಿದ್ದರು. ಅವರ ಕುಟುಂಬ ಮತ್ತು ಪೊಲೀಸ್ ಅಧಿಕಾರಿಗಳ ಪ್ರಕಾರ, ಅವರು ತಮ್ಮ ಕಾರಿನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಖರೀದಿಸಲು ಕುಲ್ಗಾಮ್‌ನ ಆಸ್ತಲ್‌ನಲ್ಲಿರುವ ತಮ್ಮ ಮನೆಯಿಂದ ಹೋಗಿದ್ದರು. ಮರು ದಿನ ಅವರು ಸೇನೆಗೆ ಮರಳು ಲಡಾಕ್‌ಗೆ ಪ್ರಯಾಣ ಬೆಳೆಸಬೇಕಿತ್ತು.
ರಕ್ತದ ಕಲೆಗಳೊಂದಿಗೆ ಕಾರ್ ಸ್ವಲ್ಪದರಲ್ಲಿ ಪತ್ತೆಯಾಗಿತ್ತು ಎಂದು ವಾನಿ ಕುಟುಂಬಸ್ಥರು ತಿಳಿಸಿದ್ದರು. ರಾತ್ರಿ 7.30ಕ್ಕೆ ಮಾರುಕಟ್ಟೆಗೆ ವಾನಿ ಹೊರಟಿದ್ದರು. ಕೆಲವು ಸಮಯದ ಬಳಿಕ ನಾವು ಅವರು ತೆಗೆದುಕೊಂಡು ಹೋಗಿದ್ದ ಕಾರನ್ನು ಪತ್ತೆ ಹಚ್ಚಿದೆವು. ಅಲ್ಲಿ ರಕ್ತದ ಕಲೆಗಳಿದ್ದವು. ಅವರ ಧರಿಸುತ್ತಿದ್ದ ಸ್ಲಿಪರ್ ಮತ್ತು ಕ್ಯಾಪ್ ಕೂಡ ಅಲ್ಲೇ ಇತ್ತು ಎಂದು ನಾಪತ್ತೆಯಾಗಿದ್ದ ಯೋಧನ ಸಹೋದರ ಮುದಾಸಿರ್ ಅಹ್ಮದ್ ವಾನಿ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Soldier Missing: ಈದ್ ಹಿನ್ನೆಲೆ ರಜೆ ಪಡೆದು ಊರಿಗೆ ತೆರಳಿದ್ದ ಯೋಧ ನಾಪತ್ತೆ; ಕಾರಲ್ಲಿ ರಕ್ತದ ಕಲೆ ಪತ್ತೆ, ತೀವ್ರ ಶೋಧ
ಜಾವೇದ್, ಈದ್-ಉಲ್-ಅಝಾ ಹಬ್ಬಕ್ಕಾಗಿ ಮನೆಗೆ ಬಂದಿದ್ದರು. ಜೂನ್ 29 ರಿಂದ ರಜೆಯಲ್ಲಿದ್ದರು. ಆತನನ್ನು ಉಗ್ರಗಾಮಿಗಳು ಅಪಹರಿಸಿರಬಹುದು ಎಂದು ಕುಟುಂಬದವರು ಭಯಪಟ್ಟಿದ್ದರು. ಬಳಿಕ, ಭದ್ರತಾ ಪಡೆಗಳು ಕುಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಈ ಸಂಬಂಧ ಅನೇಕರನ್ನು ಪ್ರಶ್ನಿಸಲಾಗಿತ್ತು. ಅಲ್ಲದೇ, ಅವರ ಕರೆಗಳ ವಿವರಗಳನ್ನು ಪರಿಶೀಲಿಸಲಾಗಿತ್ತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.