ಬುರ್ಹಾನಪುರ್, ಮಧ್ಯಪ್ರದೇಶ: ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಕ್ರೈಸ್ತ ಮಿಷನರಿಗಳು ಇಲ್ಲಿನ ಜನರನ್ನು ಮತಾಂತರ ಮಾಡಿದವು. ಮತಾಂತರಕ್ಕೊಳಗಾದ ಜನರಿಗೆ ಸಮಾಜ ತಮ್ಮೊಂದಿಗೆ ಇಲ್ಲ ಎಂಬ ಭಾವವಿತ್ತು. ನಾವು ನಮ್ಮ ಜನರನ್ನೇ ನೋಡುವುದಿಲ್ಲ. ಅವರ ಹತ್ತಿರ ಹೋಗುವುದಿಲ್ಲ, ಅವರನ್ನು ಮಾತನಾಡಿಸುವುದಿಲ್ಲ. ಆದರೆ, ಸಾವಿರಾರು ಕಿಲೋ ಮೀಟರ್‌ಗಳಿಂದ ಬರುವ ಮಿಷನರಿಗಳು ನಮ್ಮ ಜನರ ಆಹಾರವನ್ನು ತಿಂದು, ಅವರ ಭಾಷೆಯಲ್ಲಿ ಮಾತನಾಡಿ, ಕೊನೆಗೆ ಅವರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಹೇಳಿದರು.
ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸುಮಾರು 100 ವರ್ಷಗಳಲ್ಲಿ ಬಂದ ಜನರು ಎಲ್ಲವನ್ನೂ ಬದಲಿಸುವ ಪ್ರಯತ್ನ ಮಾಡಿದರು. ಶತಮಾನಗಳಿಂದಲೂ ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ, ನಮ್ಮ ಬೇರುಗಳು ಅಷ್ಟು ಸದೃಢವಾಗಿವೆ. ಇದಕ್ಕಾಗಿ ನಾವು ನಮ್ಮ ಹಿರಿಯರಿಗೆ ಧನ್ಯವಾದ ಹೇಳಲೇಬೇಕು ಎಂದು ಭಾಗವತ್ ಹೇಳಿದರು.
ಅವರನ್ನು ಬೇರು ಸಮೇತ ಕಿತ್ತೊಗೆಯುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಸಮಾಜ ಆ ಮೋಸವನ್ನು ಅರ್ಥ ಮಾಡಿಕೊಳ್ಳಬೇಕು. ನಂಬಿಕೆಯನ್ನು ಗಟ್ಟಿಗೊಳಿಸಬೇಕು ಎಂದು ಭಾಗವತ್ ಅಭಿಪ್ರಾಯಪಟ್ಟರು.
ನಮ್ಮ ಧರ್ಮದ ನಂಬಿಕೆಯನ್ನು ಹಾಳು ಮಾಡುವ ದೃಷ್ಟಿಯಿಂದ ಕೆಲವು ವಂಚಕರು ಪ್ರಶ್ನೆಗಳು ಎತ್ತುತ್ತಾರೆ ಎಂದು ಹೇಳಿದ ಮೋಹನ್ ಭಾಗವತ್, ನಮ್ಮ ಸಮಾಜವು ಅಂಥವರನ್ನು ಹಿಂದೆಂದೂ ಎದುರಿಸಲು. ನಮ್ಮ ದೌರ್ಬಲ್ಯ ಅವರಿಗೆ ಆಹಾರವಾಗಬಾರದು. ಹಾಗಾಗಿ, ನಮ್ಮ ದೌರ್ಬಲ್ಯಗಳನ್ನು ನಾವು ತೊಡೆದು ಹಾಕಬೇಕು. ಇಷ್ಟಾಗಿಯೂ ನಮ್ಮ ಸಮಾಜ ಅಲುಗಾಡುವುದಿಲ್ಲ. ಆದರೆ ನಂಬಿಕೆ ಕಳೆದುಕೊಂಡಾಗ ಮತ್ತು ಸಮಾಜವು ತಮ್ಮೊಂದಿಗೆ ಇಲ್ಲ ಎಂದು ಭಾವಿಸಿದಾಗ ಜನರು ಬದಲಾಗುತ್ತಾರೆ ಎಂದು ಭಾಗವತ್ ಹೇಳಿದರು.