ನವೆಂಬರ್: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ (Mizoram Election Result) ಡಿಸೆಂಬರ್ 4, ಸೋಮವಾರ ಪ್ರಕಟವಾಗಲಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿತ್ತು. ವಾಸ್ತವದಲ್ಲಿ, ಛತ್ತೀಸ್‌ಗಢ, ತೆಲಂಗಾಣ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳ ರಾಜ್ಯಗಳ ಮತ ಎಣಿಕೆಯಂದೇ (Election Result 2023) ಮಿಜೋರಾಂ ಚುನಾವಣೆ ರಿಸಲ್ಟ್ ಕೂಡ ಪ್ರಕಟವಾಗಬೇಕಿತ್ತು. ಕ್ರೈಸ್ತರೇ ಹೆಚ್ಚಿರುವ ಮಿಜೋರಾಂನಲ್ಲಿ ಭಾನುವಾರ(ಡಿ.3) ಬದಲಿಗೆ ಸೋಮವಾರ ರಿಸಲ್ಟ್ ಪ್ರಕಟಿಸುವಂತೆ ವ್ಯಾಪಕ ಮನವಿಗಳು ಬಂದ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು (Election Commission) ಮತ ಎಣಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು(Assembly Election 2023).
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Date of counting for #MizoramElections2023 has been changed from Sunday to Monday
— Spokesperson ECI (@SpokespersonECI) December 1, 2023
Details here: https://t.co/XeEKklerRn
ಮಿಜೋರಾಂನಲ್ಲಿ ಮತ ಎಣಿಕೆಯ ದಿನದ ಬದಲಾವಣೆಗಾಗಿ ವಿವಿಧ ವಲಯಗಳಿಂದ ಸಾವಿರಾರು ವಿನಂತಿಗಳನ್ನು ಆಯೋಗವು ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಕ್ರೈಸ್ತರೇ ಹೆಚ್ಚಿರುವ ಮಿಜೋರಾಮ್‌ನಲ್ಲಿ ಭಾನುವಾರ ಅವರಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ ದಿನವಾಗಿದೆ. ಮತ ಎಣಿಕೆಯು ಭಾನುವಾರಕ್ಕೆ ಘೋಷಣೆಯಾದ್ದರಿಂದ ಮುಂದೂಡುವಂತೆ ಮಿಜೋರಾಮ್ ಜನರು ಮನವಿ ಮಾಡಿಕೊಂಡಿದ್ದರು. ಜನರ ಮನವಿಗಳನ್ನು ಪರಿಗಣಿಸಿದ ಆಯೋಗವು ಮಿಜೋರಾಂನ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಎಣಿಕೆಯ ದಿನಾಂಕವನ್ನು ಡಿಸೆಂಬರ್ 3ರಿಂದ ಡಿ. 4ಕ್ಕೆ ಪರಿಷ್ಕರಿಸಲು ನಿರ್ಧರಿಸಿದೆ ಕೇಂದ್ರ ಚುನಾವಣಾ ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿತ್ತು.
ಇನ್ನುಳಿದಂತೆ, ಈ ಹಿಂದೆ ಘೋಷಣೆ ಮಾಡಿದಂತೆಯೇ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯ ವಿಧಾಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಡಿಸೆಂಬರ್ 4, ಭಾನುವಾರವೇ ನಡೆದಿದೆ. ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿದೆ.
Mizoram Exit Poll: ಎಂಎನ್‌ಎಫ್ ಕಡೆಗೆ ಒಲವು, ಆದರೂ ಅತಂತ್ರ ವಿಧಾನಸಭೆ ನಿರೀಕ್ಷೆ
ಈಶಾನ್ಯ ರಾಜ್ಯ ಮಿಜೋರಾಮ್‌ನಲ್ಲಿ (Mizoram Exit Poll) ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ (Congress Party) ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಮತದಾರರು ಆಡಳಿತಾರೂಢ ಎಂಎನ್‌ಪಿ ಪರವಾಗಿ ತಮ್ಮ ಒಲವು ತೋರಿಸಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಇಷ್ಟಾಗಿಯೂ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನು ಊಹಿಸಿವೆ. ಅಂತಿಮವಾಗಿ ಯಾರ ಪಾಲಿಗೆ ಜಯ ದಕ್ಕಲಿದೆ ಎಂಬುದು ಡಿಸೆಂಬರ್ 4ರಂದು ಗೊತ್ತಾಗಲಿದೆ(Exit Polls Result 2023).
40 ಸದಸ್ಯರ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ಶಾಂತಿಯುತವಾಗಿ ನಡೆದಿತ್ತು. ಶೇಕಡಾ 80 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಈ ಬಾರಿ ಮಿಜೋರಾಂನಲ್ಲಿ ಶೇ.81.25ರಷ್ಟು ಮಹಿಳಾ ಮತದಾರರು ಹಾಗೂ ಶೇ.80.04ರಷ್ಟು ಪುರುಷ ಮತದಾರರು ಮತ ಚಲಾಯಿಸಿದ್ದಾರೆ. ರಾಜ್ಯದ ಒಟ್ಟು 8.52 ಲಕ್ಷ ಮತದಾರರಲ್ಲಿ ಶೇಕಡಾ 174 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ರಾಜ್ಯದ ಎಲ್ಲಾ 11 ಜಿಲ್ಲೆಗಳ ಪೈಕಿ, ಸೆರ್ಚಿಪ್ ಜಿಲ್ಲೆಯಲ್ಲಿ ಅತಿ ಹೆಚ್ಚು 84.78% ಮತದಾನ ದಾಖಲಾಗಿದ್ದು, ಮಾಮಿತ್ ಜಿಲ್ಲೆಯಲ್ಲಿ 84.65%, ಹನ್ಹಥಿಯಾಲ್ ಜಿಲ್ಲೆಯಲ್ಲಿ 84.19% ಮತ್ತು ಲುಂಗ್ಲೈ ಜಿಲ್ಲೆಯಲ್ಲಿ 83.68% ಮತದಾನವಾಗಿದೆ.
18 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದಕ್ಕೆ ಹೋಲಿಸಿದರೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕ್ರಮವಾಗಿ 23 ಮತ್ತು 4 ಸ್ಥಾನಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿವೆ. 2018 ರ ನವೆಂಬರ್ನಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು, ಜಡ್ಪಿಎಂ 8 ಸ್ಥಾನಗಳನ್ನು, ಕಾಂಗ್ರೆಸ್ 5 ಮತ್ತು ಬಿಜೆಪಿ 1 ಸ್ಥಾನಗಳನ್ನು ಗೆದ್ದಿದೆ. 40 ಸದಸ್ಯರ ಮಿಜೋರಾಂ ವಿಧಾನಸಭೆಯ ಫಲಿತಾಂಶಗಳನ್ನು ಡಿಸೆಂಬರ್ 3 ರಂದು ಪ್ರಕಟವಾಗಲಿದೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ