Site icon Vistara News

Rivaba Jadeja : ಹೆಚ್ಚು ಮಾತಾಡಿದ್ರೆ ಹುಷಾರ್​! ಬಿಜೆಪಿ ಎಂಪಿಯ ಜತೆ ವಾಗ್ವಾದ ನಡೆಸಿದ ಜಡೇಜಾ ಪತ್ನಿ ರಿವಾಬಾ

Rivaba Jadeja

ಅಹಮದಾಬಾದ್​: ಗುಜರಾತ್​ನ ಜಾಮ್​​ನಗರ್ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ರಿವಾಬಾ ಜಡೇಜಾ ಮತ್ತು ಜಾಮ್ನಗರ್ ಲೋಕಸಭಾ ಕ್ಷೇತ್ರದ ಸಂಸದೆ ಪೂನಮ್​ ಬೆನ್​ ಮಾದಮ್ ಗುರುವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜಗಳವಾಡಿದ ಪ್ರಸಂಗ ನಡೆದಿದೆ. ವೀರ ಯೋಧರಿಗೆ ಗೌರವ ಸಲ್ಲಿಸುವಾಗ ‘ಚಪ್ಪಲಿ ಹಾಕಿಕೊಂಡಿದ್ದರು’ ಎಂಬ ವಿಚಾರಕ್ಕೆ ಆರಂಭಗೊಂಡ ಜಗಳ ಬಳಿಕ ತಾರಕಕ್ಕೇರಿತ್ತು. ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿಯೂ ಆಗಿರುವ ರಿವಾಬಾ ಅವರು ಜಾಮ್​ನಗರ ಮೇಯರ್ ಬಿನಾಬೆನ್ ಕೊಠಾರಿ ಅವರಿಗೆ ‘ಮಿತಿಯೊಳಗೆ ಇರಿ’ ಎಂದು ಹೇಳುವ ಮಟ್ಟಕ್ಕೂ ಜಗಳ ತಾರಕಕ್ಕೇರಿತ್ತು.

ಜಗಳದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಮೂವರು ಬಿಜೆಪಿ ಸಹೋದ್ಯೋಗಿಗಳು ಹುತಾತ್ಮರಿಗೆ ಗೌರವ ಸಲ್ಲಿಸುವ ವೇಳೆ ಚಪ್ಪಲಿ ಧರಿಸಿದ್ದರು ಎಂಬುದಾಗಿ ರಿವಾಬಾ ಜಡೇಜಾ ಬಳಿಕ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದ ಫೋಟೋ ಸೆಷನ್ ಸಮಯದಲ್ಲಿಯೂ ಅವರು ಪರಸ್ಪರ ಜಗಳವಾಡುತ್ತಿರುವುದು ಕಂಡು ಬಂತು.

ಶಾಸಕ ರಿವಾಬಾ ಜಡೇಜಾ ಈ ಕುರಿತು ಹೇಳಿಕೆ ಕೊಟ್ಟಿದ್ದಾರೆ. ನಾನು ಹುತಾತ್ಮರಿಗೆ ಗೌರವ ಸಲ್ಲಿಸುವ ವೇಳೆ ಚಪ್ಪಲಿ ತೆಗೆದಿದ್ದಕ್ಕೆ ‘ಓವರ್ ಸ್ಮಾರ್ಟ್’ ಎಂದು ಕರೆದರು. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಸಹ ಇಂತಹ ಕಾರ್ಯಕ್ರಮಗಳಲ್ಲಿ ಚಪ್ಪಲಿಗಳನ್ನು ತೆಗೆಯುವುದಿಲ್ಲ. ಆದರೆ ಕೆಲವು ಅಜ್ಞಾನಿಗಳು ಅತಿ ಬುದ್ಧಿವಂತಿಕೆ ತೋರುತ್ತಾರೆ ಎಂದು ಅವರು (ಸಂಸದರು) ದೊಡ್ಡ ಧ್ವನಿಯಲ್ಲಿ ಹೇಳಿದರು. ಅವರ ಹೇಳಿಕೆ ನನಗೆ ಇಷ್ಟವಾಗಲಿಲ್ಲ, ಆದ್ದರಿಂದ ನಾನು ಸ್ವಾಭಿಮಾನದಿಂದ ಮಾತನಾಡಿದ್ದೇನೆ ಎಂದು ಅವರು ನಂತರ ಹೇಳಿದ್ದಾರೆ.

ಸಮಾರಂಭದಲ್ಲಿ ಪೂನಂ ಮೇಡಂ ಅವರು ಪಾದರಕ್ಷೆಗಳನ್ನು ಧರಿಸಿ ಗೌರವ ಸಲ್ಲಿಸಿದರು. ನನ್ನ ಸರದಿ ಬಂದಾಗ, ನಾನು ನನ್ನ ಪಾದರಕ್ಷೆಗಳನ್ನು ತೆಗೆದುಹಾಕಿ ಹುತಾತ್ಮರಿಗೆ ಗೌರವ ನೀಡಲು ನಿರ್ಧರಿಸಿದೆ. ನನ್ನ ನಾಯಕತ್ವವನ್ನು ಅನುಸರಿಸಿ, ಇತರ ಕಾರ್ಪೊರೇಟರ್ಗಳು ಮತ್ತು ಪಕ್ಷದ ಸದಸ್ಯರು ಸಹ ತಮ್ಮ ಪಾದರಕ್ಷೆಗಳನ್ನು ತೆಗೆದು ಗೌರವ ಸಲ್ಲಿಸಿದರು ಎಂದು ರಿವಾಬಾ ಜಡೇಜಾ ಹೇಳಿದರು.

ರಿವಾಬಾ ಜಡೇಜಾ 2019ರಲ್ಲಿ ಬಿಜೆಪಿಗೆ ಸೇರಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾದರು. ಪೂನಂಬೆನ್ 2014 ರಿಂದ ಜಾಮ್ನಗರ ಕ್ಷೇತ್ರದ ಸಂಸದರಾಗಿದ್ದಾರೆ.

ಸಂಸದರ ಪ್ರತಿಕ್ರಿಯೆ ಏನು?

ಘಟನೆಯ ಬಗ್ಗೆ ಸಂಸದೆ ಪೂನಂಬೆನ್​ ಮಾದಮ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮೇಯರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಆದೆರ, ರಿವಾಬ ಜಡೇಜಾ ಅವರು ನನ್ನ ಹೇಳಿಕೆಯು ಅವರಿಗೆ ಉದ್ದೇಶಿಸಿತ್ತು ಎಂದು ಭಾವಿಸಿದ್ದಾರೆ ಎಂದರು.

ರಿವಾಬಾ ಮತ್ತು ಮೇಯರ್ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದಾಗ ನಾನು ಮಧ್ಯಪ್ರವೇಶಿಸಿ ಅವರನ್ನು ತಡೆಯಲು ಪ್ರಯತ್ನಿಸಿದೆ. ಮೇಯರ್​ಗೆ ದೂರ ನಿಲ್ಲಿ ಎಂದು ರಿವಾಬಾ ಸಲಹೆ ಬೈದಿದ್ದನ್ನು ನೋಡಿ ಅವರಿಗೆ ಆ ರೀತಿ ಹೇಳದಂತೆ ನಾನು ಸಲಹೆ ಕೊಟ್ಟೆ. ಆದರೆ ರಿವಾಬಾ ಅವರು ಕ್ರೋಧಗೊಂಡರು. ಅವರದ್ದು ತಪ್ಪು ತಿಳುವಳಿಕೆ ಇರಬಹುದು, ಬಹುಶಃ ಅವರು ಕೆಟ್ಟ ದಿನವನ್ನು ಹೊಂದಿರಬಹುದು ಎಂದು ಮಾದಮ್ ಹೇಳಿದ್ದಾರೆ.

ಮೇಯರ್ ಬೀನಾ ಕೊಠಾರಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದು ಬಿಜೆಪಿಯ ಆಂತರಿಕ ವಿಷಯ ಮತ್ತು ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Exit mobile version