Site icon Vistara News

Christmas Party | ಉತ್ತರಾಖಂಡದಲ್ಲಿ ಕ್ರಿಸ್‌ಮಸ್‌ ಪಾರ್ಟಿ ಹೆಸರಲ್ಲಿ ಮತಾಂತರ? ಗ್ರಾಮದ ಜನ ದಾಳಿ ಮಾಡಿದ್ದೇಕೆ?

Christmas Party

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಕ್ರಿಸ್‌ಮಸ್‌ ಆಚರಣೆ (Christmas Party) ಹೆಸರಿನಲ್ಲಿ ಮತಾಂತರ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಪಾರ್ಟಿ ಮಾಡುತ್ತಿರುವವರ ಮೇಲೆ ಗ್ರಾಮದ ಜನರು ದಾಳಿ ನಡೆಸಿದ್ದಾರೆ. ಉತ್ತರಕಾಶಿ ಜಿಲ್ಲೆಯ ಪುಲೋರಾ ಗ್ರಾಮದಲ್ಲಿ ಹಿಂದುಗಳು ಹಾಗೂ ಕ್ರೈಸ್ತರ ಮಧ್ಯೆ ಸಂಘರ್ಷ ನಡೆದಿದೆ.

ಪುಲೋರಾ ಗ್ರಾಮದಲ್ಲಿರುವ ಹೋಪ್‌ ಆ್ಯಂಡ್‌ ಲೈಫ್‌ ಸೆಂಟರ್‌ನಲ್ಲಿ ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಶನಿವಾರ ಆಚರಣೆ, ಪಾರ್ಟಿ ಮಾಡುವ ವೇಳೆ ಹಿಂದು ಸಂಘಟನೆಗಳ ಸದಸ್ಯರು ಸೇರಿ 30 ಜನ ದಾಳಿ ನಡೆಸಿದ್ದಾರೆ. ಪಾರ್ಟಿ ಹೆಸರಿನಲ್ಲಿ ಸಾಮೂಹಿಕವಾಗಿ ಮತಾಂತರ ಮಾಡಲಾಗುತ್ತಿದೆ ಎಂಬ ವದಂತಿ ಸುದ್ದಿ ತಿಳಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಇದೇ ವೇಳೆ ಎರಡೂ ಧರ್ಮೀಯರ ಮಧ್ಯೆ ಸಂಘರ್ಷ ನಡೆದಿದೆ.

ಯಾವಾಗ ಗಲಾಟೆ ಜೋರಾಯಿತೋ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ಯಾಸ್ಟರ್‌ ಲಜಾರಸ್‌ ಕರ್ನೆಲಿಯುಸ್‌ ಎಂಬುವರು ಹಾಗೂ ಅವರ ಪತ್ನಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಗ್ರಾಮಸ್ಥರು ಸೇರಿ ರಾಜಿಯಾದ ಕಾರಣ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Forced Conversions | ದೇಶದ ಭದ್ರತೆಗೆ ಬಲವಂತದ ಮತಾಂತರ ಅಪಾಯ ಎಂದ ಅಮಿತ್‌ ಶಾ, ಶೀಘ್ರವೇ ಮತಾಂತರ ನಿಷೇಧ?

Exit mobile version