ಭುವನೇಶ್ವರ್: ಪೊಲೀಸರು ಗಾಂಜಾ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ಶನಿವಾರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಥಳಿಸಿದ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದಿದೆ. ಪೆಡ್ಲರ್ ಒಬ್ಬರಿಗೆ ನೀಡಲೆಂದು ಪೊಲೀಸ್ ವಾಹನದಲ್ಲೇ ಗಾಂಜಾವನ್ನು ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಗ್ರಾಮಸ್ಥರು ತಡೆದಿದ್ದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭನೆ ನಡೆಸುವ ವೇಳೆ ಈ ಘಟನೆ ನಡೆದಿದೆ.
ಪೊಲೀಸ್ ವ್ಯಾನ್ ಅನ್ನು ಗಾಂಜಾ ಕಳ್ಳಸಾಗಣೆಗೆ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಫಿರಿಂಗಿಯಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಪನ್ ನಹಕ್, ಗೃಹರಕ್ಷಕರಾದ ಪ್ರಶಾಂತ್ ಪಾತ್ರಾ ಮತ್ತು ರಬಿ ದಿಗಲ್ ಮತ್ತು ಇತರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು . ಫಿರಿಂಗಿಯಾ ಬ್ಲಾಕ್ನಲ್ಲಿ ರಸ್ತೆ ತಡೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ತುಂಬಿದ ಪೊಲೀಸ್ ವ್ಯಾನ್ ಅನ್ನು ಫಿರಿಂಗಿಯಾ ಸರಪಂಚ್ ಜಲಂಧರ್ ಕನ್ಹಾರ್, ಮಾಜಿ ಸರಪಂಚ್ ಮತ್ತು ಸ್ಥಳೀಯರು ಬುಧಕಂಬ ಗ್ರಾಮಕ್ಕೆ ತೆರಳುತ್ತಿದ್ದಾಗ ತಡೆದಿದ್ದರು ಎಂಬುದಾಗಿ ವರದಿಯಾಗಿದೆ
“ಇನ್ಸ್ಪೆಕ್ಟರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ದಾಂಧಲೆ ನಡೆಸಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದ ಉಪ ವಿಭಾಗೀಯ ಪೊಲೀಸ್ ಅಧಿಕಾರಿಯನ್ನು ಜನಸಮೂಹ ಥಳಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ದಕ್ಷಿಣ ವಲಯ ಐಜಿಪಿ ಸತ್ಯಬ್ರತಾ ಭೋಯ್ ತಿಳಿಸಿದ್ದಾರೆ.
ಈ ವರ್ಷ ಪೊಲೀಸರು ಕಂಧಮಾಲ್ನಲ್ಲಿ 30 ಟನ್ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಪೊಲೀಸರು ಗಾಂಜಾ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ವಶಪಡಿಸಿಕೊಳ್ಳುವುದಕ್ಕೆ ಸ್ಥಳೀಯರ ವಿರೋಧವೇ ಎಂಬುದರ ಬಗ್ಗೆ ತನಿಖೆ ನಡೆಸತ್ತೇವೆ ಎಂಬುದಾಗಿಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Haryana Violence : ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ವಿಡಿಯೋ ಶೇರ್ ಮಾಡಿದ ವ್ಯಕ್ತಿ ಬಂಧನ
ಪೊಲೀಸರು ಗಾಂಜಾ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ಸ್ಥಳೀಯ ಸರಪಂಚ್ ಜಲಂಧರ್ ಕನ್ಹಾರ್ ಆರೋಪಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದಾಗ ನಾವು ಅವರನ್ನು ಬಂಧಿಸಿದ್ದೇವೆ. ನಮ್ಮ ಬಳಿ ವೀಡಿಯೊಗಳಿವೆ. ಅಗತ್ಯವಿದ್ದಾಗ ನಾವು ಅದನ್ನು ಒದಗಿಸುತ್ತೇವೆ. ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಕನ್ಹಾರ್ ಹೇಳಿದ್ದಾರೆ.
ಜೂನ್ 2022 ಮತ್ತು ಜೂನ್ 2023 ರ ನಡುವೆ, ಒಡಿಶಾ ಪೊಲೀಸರು ದಾಖಲೆಯ 220 ಟನ್ ಗಾಂಜಾವನ್ನು ನಾಶಪಡಿಸಿದ್ದಾರೆ.