ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಾದ ಬಳಿಕ ಮೈತ್ರಿಕೂಟದ ಪಕ್ಷಗಳ ಸಂಸದರು ಸಚಿವರಾಗಿ (Modi 3.0 Cabinet) ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರವಾದ ಕಾರಣ ಸಹಜವಾಗಿಯೇ ಈ ಬಾರಿ ಹೊಸ ಮುಖಗಳಿಗೆ ಸಂಪುಟಕ್ಕೆ ಸೇರಿಸಿಕೊಳ್ಳಲು ಆದ್ಯತೆ ನೀಡಿದೆ. ಅದರಲ್ಲೂ, ಕೇರಳದಲ್ಲಿ ಬಿಜೆಪಿಯ ಖಾತೆ ತೆರೆದ ಸುರೇಶ್ ಗೋಪಿ, ಬಿಹಾರದ ಧೀಮಂತ ನಾಯಕ, ಭಾರತರತ್ನ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಸೇರಿ ಹಲವು ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ.
ಕರ್ಪೂರಿ ಠಾಕೂರ್ ಪುತ್ರಗೆ ಮಣೆ
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಅವರಿಗೆ ರಾಜ್ಯ ಖಾತೆಯ ಉಸ್ತುವಾರಿ ನೀಡಲಾಗಿದೆ. ಜೆಡಿಯು ಸಂಸದ, ನಿತೀಶ್ ಕುಮಾರ್ ಅವರ ನಿಕಟವರ್ತಿಯಾಗಿರುವ ಇವರಿಗೆ ನರೇಂದ್ರ ಮೋದಿ ಅವರು ಮಣೆ ಹಾಕಿದ್ದಾರೆ. ಕರ್ಪೂರಿ ಠಾಕೂರ್ ಅವರಿಗೆ ಪ್ರಸಕ್ತ ವರ್ಷದಲ್ಲಿಯೇ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಭಾರತರತ್ನ ಘೋಷಿಸಿತ್ತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೇಂದ್ರ ಸಂಪುಟ ದರ್ಜೆ ಸ್ಥಾನ ನೀಡಲಾಗಿದ್ದು, ಇವರು ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎನ್ನಲಾಗುತ್ತದೆ. ಇನ್ನು, ಮಧ್ಯಪ್ರದೇಶ ಸಿಎಂ ಸ್ಥಾನ ತೊರೆದ ಶಿವರಾಜ್ ಸಿಂಗ್ ಚೌಹಾಣ್, ಹರಿಯಾಣ ಮಾಜಿ ಸಿಎಂ ಮನೋಹರ ಲಾಲ್ ಖಟ್ಟರ್, ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ. ಕೇರಳ ತ್ರಿಶ್ಶೂರ್ ಸಂಸದ ಸುರೇಶ್ ಗೋಪಿ, ಕರ್ನಾಟಕದ ವಿ.ಸೋಮಣ್ಣ, ತೆಲಂಗಾಣದ ಬಂಡಿ ಸಂಜಯ್ ಕುಮಾರ್ ಸೇರಿ ಹಲವು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಮೋದಿ ಸಂಪುಟ ಸೇರಿದ ಹೊಸಮುಖಗಳು
ಕ್ಯಾಬಿನೆಟ್ ದರ್ಜೆಯ ಸಚಿವರು
- ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)
- ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )
- ಮನೋಹರ ಲಾಲ್ ಖಟ್ಟರ್ (ಬಿಜೆಪಿ- ಹರಿಯಾಣ)
- ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್- ಕರ್ನಾಟಕ)
- ಜಿತನ್ ರಾಮ್ ಮಾಂಝಿ (ಎಚ್ಎಎಂ- ಬಿಹಾರ)
- ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್-ಜೆಡಿಯು-ಬಿಹಾರ)
- ರಾಮ್ ಮೋಹನ್ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)
- ಜುವೆಲ್ ಒರಾಮ್ (ಬಿಜೆಪಿ- ಒಡಿಶಾ) (ಇವರು ವಾಜಪೇಯಿ ಸರ್ಕಾರದಲ್ಲೂ ಕೇಂದ್ರ ಸಚಿವರಾಗಿದ್ದರು)
- ಚಿರಾಗ್ ಪಾಸ್ವಾನ್ (ಎಲ್‌ಜೆಪಿ-ಬಿಹಾರ)
- ಸಿ.ಆರ್.ಪಾಟೀಲ್ (ಬಿಜೆಪಿ-ಗುಜರಾತ್)
ರಾಜ್ಯ/ ಸ್ವತಂತ್ರ ಖಾತೆ
- ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ (ಶಿವಸೇನೆ ಏಕನಾಥ್ ಶಿಂಧೆ ಬಣದ ಸಂಸದ-ಮಹಾರಾಷ್ಟ್ರ)
- ಜಯಂತ್ ಚೌಧರಿ (ಆರ್ಎಲ್ಡಿ-ಉತ್ತರ ಪ್ರದೇಶ)
ರಾಜ್ಯ ಖಾತೆ ಸಚಿವರು
- ಜಿತಿನ್ ಪ್ರಸಾದ್ (ಬಿಜೆಪಿ-ಉತ್ತರ ಪ್ರದೇಶ)
- ರಾಮನಾಥ್ ಠಾಕೂರ್ (ಜೆಡಿಯು-ಬಿಹಾರ)
- ವಿ. ಸೋಮಣ್ಣ (ಬಿಜೆಪಿ-ಕರ್ನಾಟಕ)
- ಪೆಮ್ಮಸಾನಿ ಚಂದ್ರಶೇಖರ್ (ಟಿಡಿಪಿ-ಆಂಧ್ರಪ್ರದೇಶ)
- ಎಸ್ಪಿ ಸಿಂಗ್ ಬಘೇಲ್ (ಬಿಜೆಪಿ-ಉತ್ತರ ಪ್ರದೇಶ)
- ಕೀರ್ತಿ ವರ್ಧನ್ ಸಿಂಗ್ (ಬಿಜೆಪಿ-ಉತ್ತರ ಪ್ರದೇಶ)
- ಬಂಡಿ ಸಂಜಯ್ ಕುಮಾರ್ (ಬಿಜೆಪಿ-ತೆಲಂಗಾಣ)
- ಕಮಲೇಶ್ ಪಾಸ್ವಾನ್ (ಬಿಜೆಪಿ-ಉತ್ತರ ಪ್ರದೇಶ)
- ಭಾಗೀರಥ್ ಚೌಧರಿ (ಬಿಜೆಪಿ-ರಾಜಸ್ಥಾನ)
- ಸತೀಶ್ ಚಂದ್ರ ದುಬೆ (ಬಿಜೆಪಿ-ಬಿಹಾರ)
- ಸಂಜಯ್ ಸೇಠ್ (ಬಿಜೆಪಿ-ಜಾರ್ಖಂಡ್)
- ರವನೀತ್ ಸಿಂಗ್ ಬಿಟ್ಟು (ಬಿಜೆಪಿ-ಪಂಜಾಬ್)
- ದುರ್ಗಾದಾಸ್ ಉಯಿಕೆ (ಬಿಜೆಪಿ- ಮಧ್ಯಪ್ರದೇಶ)
- ರಕ್ಷಾ ನಿಖಿಲ್ ಖಡ್ಸೆ (ಬಿಜೆಪಿ-ಮಹಾರಾಷ್ಟ್ರ)
- ಸುಕಾಂತ ಮಜುಂದಾರ್ (ಬಿಜೆಪಿ-ಪಶ್ಚಿಮ ಬಂಗಾಳ)
- ತೋಖನ್ ಸಾಹು (ಬಿಜೆಪಿ-ಛತ್ತೀಸ್ಗಢ)
- ಡಾ.ರಾಜ್ಭೂಷಣ್ ಚೌಧರಿ (ಬಿಜೆಪಿ-ಬಿಹಾರ)
- ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)
- ಮುರಳೀಧರ್ ಮೊಹೊಲ್ (ಬಿಜೆಪಿ-ಮಹಾರಾಷ್ಟ್ರ)
- ನಿಮುಬೆನ್ ಬಾಂಭಣಿಯಾ (ಬಿಜೆಪಿ-ಗುಜರಾತ್)
- ಜಾರ್ಜ್ ಕುರಿಯನ್ (ಬಿಜೆಪಿ-ಕೇರಳ)
ಇದನ್ನೂ ಓದಿ: Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!