Site icon Vistara News

Video | ವಿಶೇಷವಾಗಿ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ; ಮನೆಗೆ ಬಂದ ಮುದ್ದು ಮಕ್ಕಳು ಯಾರು?

PM Modi Rakhi Festival

ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸಿದರು (Modi celebrates Raksha Bandhan). ತಮ್ಮ ನಿವಾಸದಲ್ಲಿ ಕೆಲಸ ಮಾಡುವವರ ಪುಟ್ಟ ಮಕ್ಕಳೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ತಮ್ಮ ನಿವಾಸದಲ್ಲಿ ಕಸಗುಡಿಸುವವರು, ಪ್ಯೂನ್​ಗಳು (ಜವಾನರು), ಉದ್ಯಾನದಲ್ಲಿ ಕೆಲಸ ಮಾಡುವವರ, ಚಾಲಕರ ಮಕ್ಕಳನ್ನೆಲ್ಲ ಮನೆಗೇ ಕರೆಸಿ, ಅವರ ಬಳಿ ಕೈಯಿಗೆ ರಾಖಿ ಕಟ್ಟಿಸಿಕೊಂಡಿದ್ದಾರೆ. ಹಾಗೇ, ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ರಕ್ಷಾ ಬಂಧನದಿಂದ ತುಂಬಿ ತುಳುಕುವ ವಿಡಿಯೋ ವೈರಲ್ ಆಗಿದೆ. ಹಾಗೇ, ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ.

ದ್ರೌಪದಿ ಮುರ್ಮುರಿಂದ ಶುಭ ಹಾರೈಕೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿ ದೇಶದ ಜನರಿಗೆ ರಕ್ಷಾ ಬಂಧನದ ಶುಭ ಕೋರಿದ್ದಾರೆ. ರಕ್ಷಾ ಬಂಧನ ಎಂಬುದು ಪ್ರೀತಿ ಮತ್ತು ನಂಬಿಕೆಯ ಸಂಕೇತ. ಸೋದರ ಮತ್ತು ಸೋದರಿಯ ನಡುವಿನ ಬಿಡಿಸಲಾಗದ ನಂಟನ್ನು ಇದು ತೋರಿಸುತ್ತದೆ. ಇಡೀ ದೇಶದ ಜನರಿಗೆ ರಕ್ಷಾ ಬಂಧನದ ಶುಭಾಶಯಗಳು. ಈ ಹಬ್ಬ ಸಾಮರಸ್ಯ ಹುಟ್ಟುಹಾಕಲಿ. ಮಹಿಳೆಯರ ಮೇಲಿನ ಗೌರವನ್ನು ಇಮ್ಮಡಿಗೊಳಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಕ್ಷಾ ಬಂಧನ ವಿಶೇಷ; ಮಹಿಳೆಯರಿಗೆ ಬಂಪರ್​ ಉಡುಗೊರೆ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್​

Exit mobile version