Site icon Vistara News

Morbi Bridge Collapse | ಎಲ್ಲ ಕಾರ್ಯಕ್ರಮ ರದ್ದುಗೊಳಿಸಲೇ ಎನಿಸಿತ್ತು, ಸೇತುವೆ ಕುಸಿತ ಕುರಿತು ಭಾವುಕರಾದ ಮೋದಿ

Modi Emotional

ಗಾಂಧಿನಗರ: ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದಿರುವುದು (Morbi Bridge Collapse) ದೇಶಾದ್ಯಂತ ಸುದ್ದಿಯಾಗಿದೆ. ಅದರಲ್ಲೂ, ಮಹಿಳೆಯರು, ಮಕ್ಕಳು ಸೇರಿ 140 ಜನ ಮೃತಪಟ್ಟಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಇದರ ಬೆನ್ನಲ್ಲೇ ಗುಜರಾತ್‌ನ ಬನಾಸ್ಕಾಂತದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸಿದ ಮೋದಿ, ಸೇತುವೆ ದುರಂತ ನೆನೆದು ಭಾವುಕರಾಗಿದ್ದಾರೆ.

“ಸೇತುವೆ ಕುಸಿತದ ಸುದ್ದಿ ಕೇಳುತ್ತಲೇ ಭಾರಿ ಖೇದವಾಯಿತು. ನಾಗರಿಕರ ಸಾವು ನನಗೆ ಅಪಾರ ಖೇದವನ್ನುಂಟು ಮಾಡಿದೆ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕೋ, ಬೇಡವೋ ಎಂಬ ಗೊಂದಲ ಮೂಡಿತು. ಅಷ್ಟರಮಟ್ಟಿಗೆ ಘಟನೆಯು ನನ್ನನ್ನು ವಿಚಲಿತನನ್ನಾಗಿ ಮಾಡಿದೆ” ಎಂದು ಹೇಳಿದರು. ಇದೇ ವೇಳೆ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಭಾನುವಾರ ಸಂಜೆ ಮೊರ್ಬಿಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಕುಸಿದಿದ್ದು, ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ನೂರಾರು ಜನರನ್ನು ರಕ್ಷಿಸಲಾಗಿದೆ. ಆದರೆ, ದುರಂತದಲ್ಲಿ 140 ಜನ ಮೃತಪಟ್ಟಿದ್ದಾರೆ. ಇದೇ ಕಾರಣಕ್ಕಾಗಿ ಮೋದಿ ಅವರು ಸೋಮವಾರ ಅಹಮದಾಬಾದ್‌ನಲ್ಲಿ ನಡೆಸಬೇಕಿದ್ದ ರ‍್ಯಾಲಿಯನ್ನು ರದ್ದುಗೊಳಿಸಿದ್ದರು.

ಇದನ್ನೂ ಓದಿ | Morbi Bridge Collapse | ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಫಿಟ್ನೆಸ್‌ ಸರ್ಟಿಫಿಕೇಟ್ ಇರಲಿಲ್ಲವೇ?

Exit mobile version