Site icon Vistara News

BJP National Executive Meeting | ಕಾರ್ಯಕಾರಿಣಿ ಮುನ್ನ ದಿಲ್ಲಿಯಲ್ಲಿ ಮೋದಿಯಿಂದ ರೋಡ್ ಶೋ!

Narendra Modi

ನವದೆಹಲಿ: ಸೋಮವಾರದಿಂದ (ಜನವರಿ 16) ದೆಹಲಿಯಲ್ಲಿ ಎರಡು ದಿನ ಬಹು ನಿರೀಕ್ಷಿತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (BJP National Executive Meeting) ನಡೆಯಲಿದ್ದು, ಹಲವು ವಿಷಯಗಳು ಚರ್ಚೆಗೆ ಬರಲಿವೆ. ಸೋಮವಾರ ಸಂಜೆ 4 ಗಂಟೆಗೆ ಆರಂಭವಾಗುವ ಕಾರ್ಯಕಾರಿಣಿಯು, ಮಂಗಳವಾರ ಸಂಜೆ ಮುಗಿಯಲಿದೆ. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಾಹ್ನ ರೋಡ್ ಶೋ ನಡೆಸಲಿದ್ದಾರೆ.

ಮೋದಿ ಅವರ ರೋಡ್ ಶೋ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಟ್ರಾಫಿಕ್ ಸಮಸ್ಯೆ ಈಗಾಗಲೇ ಶುರುವಾಗಿದೆ. ಮಧ್ಯಾಹ್ನ 2.30ರಿಂದ ಸಂಜೆ ಗಂಟೆವರೆಗೆ ಕನೌಟ್ ಪ್ಲೇಸ್, ಜಂತರ್ ಮಂತರ್ ಮತ್ತ ಸಂಸದ್ ಮಾರ್ಗ್‌ಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಜನರಿಗೆ ಬದಲಿ ಮಾರ್ಗಗಳಿಗೆ ಹೋಗುವಂತೆ ತಿಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎನ್‌ಡಿಎಂಸಿ ಕನ್ವೆನ್ಶನ್‌ ಸೆಂಟರ್‌ನಲ್ಲಿ ಸಭೆ ನಡೆಯಲಿದ್ದು, ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ಇದಾದ ಬಳಿಕವೇ ಸಭೆ ಆರಂಭವಾಗಲಿದ್ದು, ನಿರ್ಧಾರಗಳು ಹಾಗೂ ನಿರ್ಣಯಗಳ ದೃಷ್ಟಿಯಿಂದ ಮಂಗಳವಾರದ ಸಭೆಯು ಪ್ರಮುಖವಾಗಿದೆ. ಸೋಮವಾರದ ಸಭೆಯಲ್ಲಿ ಬಿ.ಎಸ್.‌ಯಡಿಯೂರಪ್ಪ ಹಾಗೂ ಮಂಗಳವಾರದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರದ ಅವಧಿಯು ಇದೇ ತಿಂಗಳು ಮುಗಿಯಲಿದೆ. ಅವರ ಅಧಿಕಾರದ ಅವಧಿಯನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಮುಂದುವರಿಸಬೇಕೋ ಅಥವಾ ಬೇರೆಯವರನ್ನು ನೇಮಿಸಬೇಕೋ ಎಂಬುದು ಕಾರ್ಯಕಾರಿಣಿಯ ಪ್ರಮುಖ ವಿಷಯವಾಗಿದೆ. ಹಾಗೆಯೇ, 2024ರ ಲೋಕಸಭೆ ಚುನಾವಣೆ, ಕೇಂದ್ರ ಸಂಪುಟ ಪುನರ್‌ರಚನೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಕುರಿತು ಕೇಂದ್ರ ನಾಯಕರ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ | National Youth Festival | ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

Exit mobile version