1. ಆರು ತಿಂಗಳಲ್ಲಿ ಜನಕಲ್ಯಾಣ ಯೋಜನೆ ಜಾರಿ ಮಾಡಿ! ಅಧಿಕಾರಿಗಳಿಗೆ ಮೋದಿ ಟಾರ್ಗೆಟ್
ನವದೆಹಲಿ: ಕೇಂದ್ರ ಸರ್ಕಾರದ (Central Government) ಎಲ್ಲ ಜನಕಲ್ಯಾಣ ಯೋಜನೆಗಳನ್ನು (Welfare Schemes) 6 ತಿಂಗಳೊಳಗೆ ಅನುಷ್ಠಾನವನ್ನು ಪೂರ್ಣಗೊಳಿಸುವ ಗುರಿಯನ್ನು ನೌಕರರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನೀಡಿದ್ದಾರೆ. ಬೃಹತ್ ಪ್ರಮಾಣದಲ್ಲಿ ಅಭಿಯಾನವನ್ನು ಆರಂಭಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರವು ದೇಶದ 2.7 ಲಕ್ಷ ಪಂಚಾಯತ್‌ಗಳಲ್ಲಿ ಫಲಾನುಭವಿಗಳನ್ನು ತಲುಪಲು ವಿಕಸಿತ ಭಾರತ್ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲಿದೆ(Vikisit Bharat Sankalpa Yatra). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
2. ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡಕ್ಕೆ 4 ವಿಕೆಟ್ ವಿಜಯ, ವಿಶ್ವ ಕಪ್ನಲ್ಲಿ ಸತತ ಐದನೇ ಜಯ
ಧರ್ಮಶಾಲಾ: ಮೊಹಮ್ಮದ್ ಶಮಿಯ (54 ರನ್ಗಳಿಗೆ 5 ) ಮಾರಕ ಬೌಲಿಂಗ್ ಸಾಧನೆ ಹಾಗೂ ವಿರಾಟ್ ಕೊಹ್ಲಿಯ ಅಮೋಘ ಅರ್ಧ ಶತಕ (95 ರನ್) ನೆರವಿನಿಂದ ಮಿಂಚಿದ ಭಾರತ ತಂಡ ನ್ಯೂಜಿಲ್ಯಾಂಡ್ (Ind vs NZ) ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ 4 ವಿಕೆಟ್ಗಳ ವಿಜಯ ದಾಖಲಿಸಿದೆ. ಇದು ಭಾರತ ತಂಡಕ್ಕೆ ವಿಶ್ವ ಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 20 ವರ್ಷಗಳ ಬಳಿಕ ಲಭಿಸಿದ ಗೆಲುವಾಗಿದೆ. 2003ರಲ್ಲಿ ಐಸಿಸಿ ವಿಶ್ವ ಕಪ್ನಲ್ಲಿ ಭಾರತ ತಂಡ ಕೊನೇ ಬಾರಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿತ್ತು. ಅದೇ ರೀತಿ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಅಜೇಯ ಓಟ ಮುಂದುವರಿಸಿದ್ದು, ಐದನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಭಾರತದ ಖಾತೆಯಲ್ಲೀಗ 10 ಅಂಕಗಳಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
3. ಗಡಿಯಲ್ಲಿ ಚೀನಾದಿಂದ ಸೇನೆ ನಿಯೋಜನೆ, ಏರ್‌ಪೋರ್ಟ್, ಹೆಲಿಪ್ಯಾಡ್!
ನವದೆಹಲಿ: ಭಾರತದ (India) ಜತೆಗಿನ ಸಂಘರ್ಷದ ಮಧ್ಯೆಯೇ ಚೀನಾ (China) 2022ರಲ್ಲಿ ವಾಸ್ತವ ಗಡಿ ರೇಖೆ(Line of Actual Control – LAC) ಬಳಿ ತನ್ನ ಸೇನೆಯನ್ನು ಹೆಚ್ಚಿಸಿದ್ದು, ಮಾತ್ರವಲ್ಲದೇ ಸಾಕಷ್ಟು ಮೂಲಸೌಕರ್ಯ (Infrastructure) ಅಭಿವೃದ್ಧಿಯನ್ನು ಕೈಗೊಂಡಿತ್ತು ಎಂದು ಅಮೆರಿಕದ ಪೆಂಟಗನ್ (Pentagon Report) ತನ್ನ ವರದಿಯಲ್ಲಿ ತಿಳಿಸಿದೆ. ಭೂಗತ ಸಂಗ್ರಹ ಸೌಲಭ್ಯಗಳು, ಹೊಸ ರಸ್ತೆಗಳು, ಬಹು ಉದ್ದೇಶ ವಿಮಾನ ನಿಲ್ದಾಣ ಮತ್ತು ಸಾಕಷ್ಟು ಹೆಲಿಪ್ಯಾಡ್‌ಗಳನ್ನು ವಾಸ್ತವ ಗಡಿ ರೇಖೆಯಲ್ಲಿ ಬೀಜಿಂಗ್ (Beijing) ತನ್ನ ಸೇನಾ ಬಲ ಹೆಚ್ಚಿಸುವ ಭಾಗವಾಗಿ ಕೈಗೊಂಡಿದೆ ಎಂದು ಮಿಲಿಟರಿ ಆ್ಯಂಡ್ ಸೆಕ್ಯುರಿಟಿ ಡೆವಲಪ್‌ಮೆಂಟ್ಸ್ ಇನ್‌ವಾಲ್ವಿಂಗ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ -2023ರ ವರದಿಯಲ್ಲಿ ವಿವರವಾಗಿ ಮಾಹಿತಿ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
4. ದಯವೇ ಧರ್ಮದ ಮೂಲವಯ್ಯ; ಪ್ಯಾಲೆಸ್ತೀನ್‌ಗೆ ಭಾರತ 38 ಟನ್ ಅಗತ್ಯ ವಸ್ತುಗಳ ನೆರವು
ಲಖನೌ: ಗಾಜಾ ನಗರದಲ್ಲಿರುವ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ ಬಳಿಕ ಇಸ್ರೇಲ್ ಪ್ರತಿದಾಳಿ ಆರಂಭಿಸಿದೆ. ಇದರಿಂದಾಗಿ ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಂಘರ್ಷ (Israel Palestine War) ಉಲ್ಬಣಗೊಂಡಿದ್ದು, ಎರಡೂ ದೇಶಗಳ ನಾಗರಿಕರು ಮಾತ್ರ ಪರಿತಪಿಸುತ್ತಿದ್ದಾರೆ. ದಾಳಿ-ಪ್ರತಿದಾಳಿಯಿಂದ ಇದುವರೆಗೆ ಉಭಯ ದೇಶಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ, ಪ್ಯಾಲೆಸ್ತೀನ್‌ನ ಗಾಜಾ ನಗರವಂತೂ ಅಕ್ಷರಶಃ ಮಸಣದಂತಾಗಿದೆ. ಹಾಗಾಗಿ, ಭಾರತ ಸರ್ಕಾರವು ಪ್ಯಾಲೆಸ್ತೀನ್‌ಗೆ ಸುಮಾರು 38 ಟನ್ ಅಗತ್ಯ ವಸ್ತುಗಳನ್ನು (Humanitarian aid) ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ಇಸ್ರೇಲ್ ದಾಳಿಗೆ ಗಾಜಾ ಮಸೀದಿಗಳು ಉಡೀಸ್, ಉಗ್ರರು ಮಟಾಷ್!
India Canada Row: ಟ್ರುಡೋ ಕುತಂತ್ರ ಬೆನ್ನಲ್ಲೇ ಭಾರತ ಮುಖ್ಯ ಎಂದ ಕೆನಡಾ ಪ್ರತಿಪಕ್ಷ ನಾಯಕ
5. ಮತ್ತೊಂದು ಬಿಜೆಪಿ ಟಿಕೆಟ್ ಮೋಸ; 2.55 ಕೋಟಿ ರೂ. ವಂಚನೆ ಸಂಬಂಧ FIR ದಾಖಲು!
ವಿಜಯನಗರ: ಹಿಂದು ಕಾರ್ಯಕರ್ತೆ ಕುಂದಾಪುರದ ಚೈತ್ರಾಳ ಮೋಸದ ಕೇಸ್ ರೀತಿಯೇ ಈಗ ಬಿಜೆಪಿ ಟಿಕೆಟ್ ವಂಚನೆಯ (BJP Ticket Fraud) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಎಫ್‌ಐಆರ್ ದಾಖಲು (FIR registered) ಮಾಡಿಕೊಳ್ಳಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಕೊಟ್ಟೂರು ನಿವಾಸಿ, ನಿವೃತ್ತ ಎಂಜಿನಿಯರ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
6. ಜನ ಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ನೋಡುತ್ತಿದ್ದ! ಸಿಎಂ – ಎಚ್‌ಡಿಕೆ ವಾರ್
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ (Karnataka Politics) ಸರ್ಕಾರ ಮತ್ತು ಪ್ರತಿಪಕ್ಷಗಳ ವಾರ್ ಶುರುವಾಗಿದೆ. ಒಬ್ಬರಿಗೊಬ್ಬರು ಆರೋಪ – ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಕಾಲೆಳೆದಿದ್ದರು. ಈಗ ಅದಕ್ಕೆ ಪ್ರತಿಯಾಗಿ ಎಚ್‌ಡಿಕೆ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ರೋಮ್ ಚಕ್ರವರ್ತಿ ನೀರೋಗೆ (Roman Emperor Nero) ಹೋಲಿಕೆ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
7. ತೆಲಂಗಾಣ ಚುನಾವಣೆ: ಪ್ರವಾದಿ ಕುರಿತು ವಿವಾದಿತ ಹೇಳಿಕೆ ನೀಡಿದ್ದ ರಾಜಾ ಸಿಂಗ್‌ಗೆ ಬಿಜೆಪಿ ಟಿಕೆಟ್
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ (Telangana Assembly Election) ಮುನ್ನಡೆ ಸಾಧಿಸಲು ಹತ್ತಾರು ರಣತಂತ್ರ ಹೆಣೆಯುತ್ತಿರುವ ಬಿಜೆಪಿಯು 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ (ಅಕ್ಟೋಬರ್ 22) ಬಿಡುಗಡೆಗೊಳಿಸಿದೆ. ಅದರಲ್ಲೂ, ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧಿತರಾಗಿದ್ದ ಟಿ. ರಾಜಾ ಸಿಂಗ್ (T Raja Singh) ಅವರಿಗೂ ಬಿಜೆಪಿ ಟಿಕೆಟ್ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. Sree Narayana Guru: ಶ್ರೀ ನಾರಾಯಣ ಗುರು ಬೋಧನೆಗಳ ಡಿಜಿಟಲೀಕರಣ!
ನವದೆಹಲಿ: ಶ್ರೀ ನಾರಾಯಣಗುರು (Sree Narayana Guru) ಅವರ ಕಾರ್ಯಗಳನ್ನು ಡಿಜಿಟಲ್‌ನಲ್ಲಿ (Digital Store) ಸೆರೆ ಹಿಡಿಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬಾಂಬೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(IIT Bombay) ಮತ್ತು ಚೆಂಬುರ್ ಶ್ರೀ ನಾರಾಯಣ ಗುರು ಕಾಲೇಜ್ ಆಫ್ ಕಾಮರ್ಸ್ (Sree Narayana Guru College of Commerce) ಜಂಟಿಯಾಗಿ, ಭಾರತೀಯ ತತ್ವಜ್ಞಾನಿ (Indian Philosopher) ಮತ್ತು ವಿಚಾರವಾದಿ ಶ್ರೀ ನಾರಾಯಣ ಗುರು ಅವರ ಕುರಿತಾದ ಈವರೊಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
9. ನವರಾತ್ರಿ ಹಿನ್ನೆಲೆ ಗರ್ಬಾ ನೃತ್ಯ; 24 ಗಂಟೆಯಲ್ಲಿ ಹೃದಯಾಘಾತಕ್ಕೆ 10 ಜನ ಬಲಿ
ಗಾಂಧಿನಗರ: ದೇಶಾದ್ಯಂತ ಸಂಭ್ರಮದಿಂದ ನವರಾತ್ರಿ ಆಚರಣೆ (Navaratri Celebration) ಮಾಡಲಾಗುತ್ತಿದೆ. ವಿಜಯದಶಮಿಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ಅದರಲ್ಲೂ, ಗುಜರಾತ್‌ನಲ್ಲಿ (Gujarat) ಅದ್ಧೂರಿಯಾಗಿ ನವರಾತ್ರಿ ಆಚರಣೆ ಮಾಡಲಾಗುತ್ತಿದೆ. ಆದರೆ, ನವರಾತ್ರಿ ಹಿನ್ನೆಲೆಯಲ್ಲಿ ಗುಜರಾತ್‌ನಾದ್ಯಂತ ಆಚರಿಸುವ ಗರ್ಬಾ ಸಾಂಪ್ರದಾಯಿಕ ನೃತ್ಯದ (Garba Events) ವೇಳೆ ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ 10 ಜನ ಮೃತಪಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
10. ಚೆಂದ ಚೆಂದದ ನರ್ಸ್‌ಗಳು ಅಜ್ಜ ಅಂದ್ರೆ ತ್ರಾಸ್ ಆಕೇತಿ ಅಂದ್ರು ರಾಜು ಕಾಗೆ!
ಬೆಳಗಾವಿ: ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ (MLA Raju Kage) ಅವರು ಈಗ ವಿವಾದಿತ ಹೇಳಿಕೆಯೊಂದನ್ನು ನೀಡಿ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ಅಥಣಿ ತಾಲೂಕಿನ ಪಿ.ಕೆ. ನಾಗನೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ (Dasara Programme) ನರ್ಸ್‌ಗಳ ಬಗ್ಗೆ ಆಡಿರುವ ಮಾತುಗಳ ವಿಡಿಯೊ ಈಗ ವೈರಲ್ (Video Viral) ಆಗಿದೆ. ಶಾಸಕರ ಮಾತಿಗೆ ವೇದಿಕೆ ಎದುರಿನಿಂದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳನ್ನು ಹೊಡೆದರಾದರೂ ಈ ಮಾತಿನ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳು ಬರುತ್ತಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ