ಪುಣೆ, ಮಹಾರಾಷ್ಟ್ರ: ಸಾಲ (Loan) ವಾಪಸ್ ನೀಡಲು ವಿಫಲನಾದ ವ್ಯಕ್ತಿಯ ಹೆಂಡತಿಯ (Rape on Wife) ಮೇಲೆ ಪುಣೆಯ (Pune) 47 ವರ್ಷದ ಲೇವಾದೇವಿದಾರನೊಬ್ಬ(Moneylender) ಅತ್ಯಾಚಾರ ನಡೆಸಿದ್ದಾನೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ(Maharashtra Police). ಕಳೆದ ಫೆಬ್ರವರಿ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಈಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಳಿ, ಸಂತ್ರಸ್ತೆಯ ಗಂಡ ಸಾಲ ಮಾಡಿದ್ದ. ಆದರೆ, ಆ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿರಲಿಲ್ಲ. ಅದಕ್ಕೆ ಪ್ರತಿಯಾಗಿ ಆರೋಪಿ, ಸಾಲಗಾರನ ಎದುರಲ್ಲೇ ಆತನ ಹೆಂಡತಿಯ ಮೇಲೆ ಅತ್ಯಾಚಾರ (Physical Abuse) ಎಸಗಿದ್ದ.
ಆರೋಪಿಯು ಮಹಿಳೆಯ ಪತಿಗೆ ಚಾಕು ತೋರಿಸಿ ಬೆದರಿಸಿ ನಂತರ ಆತನ ಸಮ್ಮುಖದಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪುಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇಷ್ಟು ಮಾತ್ರಲ್ಲದೇ, ಆರೋಪಿಯು ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದಾನೆ ಮತ್ತು ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ, ಬಂಧಿಸಲಾಗಿದೆ. ಅಲ್ಲದೇ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Physical Abuse: ಚಲಿಸುತ್ತಿರುವ ಆಟೋದಲ್ಲಿ ಯುವತಿ ಮೇಲೆ ಅತ್ಯಾಚಾರ
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರದಲ್ಲಿ ಮತ್ತೊಂದು ಬೆಚ್ಚಿ ಬೀಳುವ ಘಟನೆ ನಡೆದಿದೆ. 24 ವರ್ಷದ ಆಟೋ ಡ್ರೈವರ್‌ನೊಬ್ಬ 20 ವರ್ಷದ ಯುವತಿಯ ಮೇಲೆ ಚಲಿಸುತ್ತಿರುವ ಆಟೋದಲ್ಲೇ ಅತ್ಯಾಚಾರ (Physical Abuse) ಮಾಡಿ, ಆಕೆಗೆ ಕೊಲೆ ಬೆದರಿಕೆ ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ.
ಮುಂಬೈನ ಗೋರೆಗಾಂವ್ ಆರೆ ಕಾಲೋನಿಯ ಸಮೀಪ ಯುವತಿಯನ್ನು ಆರೋಪಿ ಅತ್ಯಾಚಾರ ಮಾಡಿದ್ದಾನೆ. ಆರೋಪಿ ಚಾಲಕನನ್ನು ಇಂದ್ರಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರು ಆರೋಪಿ ಚಾಲಕನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: 10 ಸಾವಿರ ಮಹಿಳೆಯರ ಜತೆ ಲೈಂಗಿಕ ಸಂಪರ್ಕ, ಅತ್ಯಾಚಾರ ಕೇಸಲ್ಲಿ ಸಿಕ್ಕಿಬಿದ್ದ ಫುಟ್ಬಾಲ್ ಆಟಗಾರನ ಹೇಳಿಕೆ!
ಈ ಸಂಬಂಧ ಸಂತ್ರಸ್ತೆ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ಆರೋಪಿ ಇಂದ್ರಜೀತ್ ಸಿಂಗ್‌ನ ಆಟೋರಿಕ್ಷಾದಲ್ಲಿ ಹೋಗುತ್ತಿರುವಾಗ ಈ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಮುಂಬೈ ಪೊಲೀಸರು ಆರೋಪಿ ಆಟೋ ರಿಕ್ಷಾ ಚಾಲಕ ಇಂದ್ರಜೀತ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.