ನವದೆಹಲಿ: ವಾಡಿಕೆಯ ಪ್ರಕಾರ ಇಷ್ಟೊತ್ತಿಗೆ ಮುಂಗಾರು ಶುರುವಾಗಬೇಕಿತ್ತು. ಆದರೆ, ಈ ವರ್ಷ ತುಸು ವಿಳಂಬವಾಗಿದೆ(Monsoon delayed in Kerala). ಆಗ್ನೇಯ ಮಾನ್ಸೂನ್ ಕೇರಳಕ್ಕೆ ಅಪ್ಪಳಿಸುವುದು ಇನ್ನೂ ಮೂರ್ನಾಲ್ಕು ದಿನ ತಡವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department – IMD) ಹೇಳಿದೆ. ಅಂದರೆ, ಜೂನ್ 7ಕ್ಕೆ ಕೇರಳದಲ್ಲಿ ಮಳೆ ಶುರುವಾಗಲಿದೆ. ಇದಕ್ಕೂ ಮೊದಲು ಹವಾಮಾನ ಇಲಾಖೆಯು ಜೂನ್ 4ಕ್ಕೆ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಅಂದಾಜಿಸಿತ್ತು. ಆದರೆ, ಈಗ ಇನ್ನೂ ಮೂರ್ನಾಲ್ಕು ದಿನಗಳು ತಡವಾಗಲಿದೆ ಎಂದು ಊಹೆ ಮಾಡಿದೆ.
ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹವಾಮಾನ ಇಲಾಖೆಯು, ದಕ್ಷಿಣ ಅರೇಬಿಯನ್ ಸಮುದ್ರದ ಮೇಲೆ ಪಶ್ಚಿಮ ಮಾರುತಗಳ ಹೆಚ್ಚಳದೊಂದಿಗೆ, ಪರಿಸ್ಥಿತಿಗಳು ಅನುಕೂಲಕರವಾಗುತ್ತಿವೆ. ಅಲ್ಲದೆ, ಪಶ್ಚಿಮ ಮಾರುತಗಳ ಆಳವು ಕ್ರಮೇಣ ಹೆಚ್ಚುತ್ತಿದೆ. ಜೂನ್ 4 ರಂದು ಸಮುದ್ರ ಮಟ್ಟದಿಂದ 2.1 ಕಿ.ಮೀ ಮಾರುತಗಳು ಒಂದು ಹಂತವನ್ನು ತಲುಪಿವೆ ಎಂದು ಹೇಳಿದೆ.
ಆಗ್ನೇಯ ಅರೇಬಿಯನ್ ಸಮುದ್ರದ ಮೇಲೂ ಮೋಡದ ಪ್ರಮಾಣ ಹೆಚ್ಚುತ್ತಿದೆ. ಮುಂದಿನ 3-4 ದಿನಗಳಲ್ಲಿ ಕೇರಳದ ಮೇಲೆ ಮುಂಗಾರು ಆರಂಭಕ್ಕೆ ಈ ಅನುಕೂಲಕರ ಪರಿಸ್ಥಿತಿಗಳು ಮತ್ತಷ್ಟು ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹವಾಮಾನ ಸಂಸ್ಥೆ ಹೇಳಿದೆ. ಸದ್ಯ ಇಡೀ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಏನಾದರೂ ಬದಲಾವಣೆಗಳು ಕಂಡು ಬಂದರೆ ತಿಳಿಸಲಾಗುವುದು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Rain tourism | ಮಹಾರಾಷ್ಟ್ರದ ಈ ಕೋಟೆಗಳನ್ನು ನೀವು ಮಳೆಗಾಲದಲ್ಲೇ ನೋಡಬೇಕು!
ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಾರುತಗಳು ಸರಿಯಾದ ಸಮಯಕ್ಕೆ ಅಪ್ಪಳಿಸಿಲ್ಲ. 2022ರಲ್ಲಿ ಮೇ 29ಕ್ಕೆ ಕೇರಳದಲ್ಲಿ ಮಳೆಗಾಲ ಶುರುವಾದರೆ, 2021ರಲ್ಲಿ ಜೂನ್ 3 ಮತ್ತು 2020ರಲ್ಲಿ ಜೂನ್ 1 ಕ್ಕೆ ಮಾನ್ಸೂನ್ ಶುರುವಾಗಿತ್ತು. ಪ್ರಸಕ್ತ ಸಾಲಿನಲ್ಲಿ ದೇಶದ ಇತರ ಭಾಗಗಳಲ್ಲಿ ಯಾವಾಗ ಮುಂಗಾರು ಮಳೆ ಶುರುವಾಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿಲ್ಲ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.