Site icon Vistara News

Monsoon session 2023: ಜುಲೈ 20ರಿಂದ ಸಂಸತ್ ಅಧಿವೇಶನ; ಸಿದ್ಧತೆ ಆರಂಭಿಸಿದ ಸರ್ಕಾರ, ಸಚಿವ ಜೋಶಿ ಭರ್ಜರಿ ಸಭೆ

Prahlad Joshi

ಬೆಂಗಳೂರು, ಕರ್ನಾಟಕ: ಈ ಬಾರಿಯ ಸಂಸತ್ ಅಧಿವೇಶನವವು ಜುಲೈ 20ರಿಂದ (Monsoon session 2023) ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಮಂಗಳವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Minister Pralhad Joshi) ಅವರು ವಿವಿಧ ಸಚಿವಾಲಯಗಳ ಹಾಗೂ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ (Minister arjun ram meghwal) ಮತ್ತು ವಿ.ಮುರಳೀಧರನ್ (minister v muraleedharan) ಅವರು ಹಾಜರಿದ್ದರು(Parliament Monsoon session). ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮಾಡಿ, ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಜುಲೈ 20ರಿಂದ ಆರಂಭವಾಗಲಿರುವ ಸಂಸತ್ ಮುಂಗಾರು ಅಧಿವೇಶನವು ಆಗಸ್ಟ್​ 11ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿ ಖಚಿತಪಡಿಸಿದ್ದರು. 2023ನೇ ಸಾಲಿನ ಮುಂಗಾರು ಅಧಿವೇಶನ ಜುಲೈ 20ರಿಂದ ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ಎಲ್ಲ ಪಕ್ಷಗಳೂ ಉಪಯೋಗಕರವಾದ ಚರ್ಚೆ ನಡೆಸಬೇಕು. ಶಾಸಕಾಂಗಕ್ಕೆ ಸಂಬಂಧಪಟ್ಟ ಮತ್ತು ಇತರ ವಿಷಯಗಳ ಕುರಿತು, ದೇಶದ ಜನರಿಗೆ ಅನುಕೂಲವಾಗುವಂತೆ ಚರ್ಚೆ ನಡೆಸಬೇಕು ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Monsoon Session: ಹೊಸ ಸಂಸತ್‌ ಭವನದಲ್ಲಿ ಮೊದಲ ಬಾರಿಗೆ ಜುಲೈನಲ್ಲಿ ಮಳೆಗಾಲದ ಅಧಿವೇಶನ

ಹಾಗೇ, ಇನ್ನೊಂದು ಟ್ವೀಟ್ ಮಾಡಿದ ಪ್ರಹ್ಲಾದ್​ ಜೋಶಿ, ‘ಈ ಸಲ 23 ದಿನ ಅಧಿವೇಶನ ನಡೆಯಲಿದೆ. ಆದರೆ ಬೈಠೆಕ್​ಗೆ ಅಂದರೆ ಚರ್ಚೆಗೆ ಸಿಗುವುದು 17ದಿನಗಳು. ಅವಧಿಯನ್ನು ಎಲ್ಲ ಪಕ್ಷಗಳೂ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ. ಈ ಸಲ ಮುಂಗಾರು ಅಧಿವೇಶನ ನೂತನ ಸಂಸತ್ ಭವನದಲ್ಲಿ ನಡೆಯುವುದು ವಿಶೇಷವಾಗಿದೆ. ಅಂದರೆ ಜುಲೈ 20ರಂದು ಸಂಸತ್​ ಮುಂಗಾರು ಅಧಿವೇಶನ ಹಳೇ ಕಟ್ಟಡದಲ್ಲಿಯೇ ಪ್ರಾರಂಭವಾಗಿ, ಬಳಿಕ ಹೊಸ ಕಟ್ಟಡಕ್ಕೆ ವರ್ಗಾವಣೆಗೊಳ್ಳಲಿದೆ ಎಂದೂ ಹೇಳಲಾಗಿದೆ. ಲೋಕಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವುದರಿಂದ ಈ ಸಲದ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಹಲವು ಮಹತ್ವದ ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ಸಜ್ಜಾಗುತ್ತಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version