ಮೋರ್ಬಿ: 135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ಕುಸಿತವು (Morbi Bridge Collapse) ದೇವರ ಇಚ್ಛೆ ಎಂದು, ದುರ್ಘಟನೆ ಸಂಬಂಧಿತ ಬಂಧಿತರಾದವರ ಪೈಕಿ ಒಬ್ಬ ಆರೋಪಿ ಹೇಳಿದ್ದಾರೆ. ಒರೆವಾ ಕಂಪನಿಯ ಮ್ಯಾನೇಜರ್ ದೀಪರ್ ಪಾರೇಖ್ ಅವರಿಗೆ 150 ವರ್ಷಗಳ ಹಳೆಯ ಈ ಸೇತುವೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊರಿಸಲಾಗಿತ್ತು. ಸೇತುವೆ ಕುಸಿತದ ಹಿನ್ನೆಲೆಯಲ್ಲಿ ಬಂಧಿತರಾದ 9 ಜನರ ಪೈಕಿ ಇವರೂ ಒಬ್ಬರಾಗಿದ್ದು, ಬ್ರಿಡ್ಜ್ ಕುಸಿತುವ ದೇವರ ಇಚ್ಛೆ ಎಂದಿದ್ದಾರೆ.
ಸೇತುವೆ ಕುಸಿತವು ದೇವರ ಇಚ್ಛೆಯಾಗಿದ್ದು, ಅಂಥ ದುರ್ಘಟನೆ ಸಂಭವಿಸಿದೆ ಎಂದು ದೀಪಕ್ ಪಾರೇಖ್ ಅವರು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂ ಜೆ ಖಾನ್ ಅವರ ಮುಂದೆ ಹೇಳಿದ್ದಾರೆ. ಆದರೆ, ಮೋರ್ಬಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ಎ ಝಾಲಾ ಅವರು ಕೋರ್ಟ್‌ಗೆ ಹೇಳಿಕೆ ನೀಡಿ, ಬ್ರಿಡ್ಜ್‌ನ ಕೇಬಲ್ ತುಕ್ಕು ಹಿಡಿದಿತ್ತು. ಬ್ರಿಡ್ಜ್ ಜೀರ್ಣೋದ್ಧಾರ ಮಾಡಿದ ಕಂಪನಿಯು ಈ ಕೇಬಲ್‌ಗಳನ್ನು ಬದಲಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಬ್ರಿಡ್ಜ್ ನಿರ್ವಹಣೆ ಮತ್ತು ದುರಸ್ತಿಯ ಭಾಗವಾಗಿ ಸೇತುವೆಯ ವೇದಿಕೆಯನ್ನು ಮಾತ್ರ ಬದಲಿಸಲಾಗಿತ್ತು. ಆದರೆ, ಬ್ರಿಡ್ಜ್ ಆಧಾರವಾಗಿರುವ ಕೇಬಲ್‌ಗಳಿಗೆ ಯಾವುದೇ ಆಯಿಲಿಂಗ್ ಆಗಲೀ ಅಥವಾ ಗ್ರೀಸಿಂಗ್ ಆಗಲಿ ಮಾಡಿರಲಿಲ್ಲ. ಯಾವ ಕೇಬಲ್ ಕಿತ್ತು ಹೋಗಿದೆಯೋ ಆ ಕೇಬಲ್ ತುಕ್ಕು ಹಿಡಿದಿತ್ತು. ಒಂದು ವೇಳೆ, ಈ ಕೇಬಲ್ ಏನಾದೂರ ರಿಪೇರಿ ಮಾಡಿದ್ದರೆ ಬಹುಶಃ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮತ್ತೊಂದೆಡೆ, ಬ್ರಿಡ್ಜ್ ಗುತ್ತಿಗೆ ರಿಪೇರಿ ಗುತ್ತಿಗೆಯನ್ನು ಪಡೆದುಕೊಂಡಿದ್ದ ಗುತ್ತಿಗೆದಾರ ಈ ಕೆಲಸ ಮಾಡಲು ಅರ್ಹನೇ ಆಗಿರಲಿಲ್ಲ. ಈ ಗುತ್ತಿಗೆದಾರನಿಗೆ ಸಾರ್ವಜನಿಕ ಮೂಲಸೌಕರ್ಯಗಳನ್ನು ನಿರ್ವಹಣೆ ಮಾಡುವ ಯಾವುದೇ ಅರ್ಹತೆ ಈ ಪೂರ್ವದಲ್ಲೂ ಇರಲಿಲ್ಲ. ಹಾಗಿದ್ದೂ, ಬ್ರಿಡ್ಜ್ ರಿಪೇರಿ ಕೆಲಸವನ್ನು ಇದೇ ಗುತ್ತಿಗೆದಾರರಿಗೆ 2007 ಮತ್ತು 2022ರಲ್ಲಿ ನೀಡಲಾಗಿತ್ತು ಎಂದು ಕೋರ್ಟ್‌ಗೆ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಇದನ್ನೂ ಓದಿ | Morbi Bridge Collapse | ಮೋರ್ಬಿ ಬ್ರಿಡ್ಜ್ ಕುಸಿತ ದೇವರ ಸಂದೇಶವಲ್ಲವೇ? ಮೋದಿಗೆ ಸಿದ್ದು ಪ್ರಶ್ನೆ!