ಗಾಂಧಿನಗರ: ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಂತ (Morbi Bridge Collapse) ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಮಕ್ಕಳು, ಮಹಿಳೆಯರು ಸೇರಿ 140ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಿಂದಲೂ ಘಟನೆಯ ಪ್ರತಿಯೊಂದು ಮಾಹಿತಿ ಪಡೆಯುತ್ತಿದ್ದಾರೆ. ಇದೇ ದಿಸೆಯಲ್ಲಿ ಸೋಮವಾರ ಸಂಜೆ ಗುಜರಾತ್‌ನ ಗಾಂಧಿನಗರದಲ್ಲಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಗುಜರಾತ್‌ನ ಹಿರಿಯ ಅಧಿಕಾರಿಗಳ ಜತೆ ಮೋದಿ ಸಭೆ ನಡೆಸಿದ್ದು, ದುರಂತದ ಪ್ರತಿಯೊಂದು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ರಕ್ಷಣಾ ಕಾರ್ಯಾಚರಣೆ, ಪರಿಹಾರ ಒದಗಿಸುವುದರಲ್ಲಿ ಯಾವುದೇ ವ್ಯತ್ಯಯವಾಗಬಾರದು. ಇದಕ್ಕಾಗಿ ಸಕಲ ರೀತಿಯ ನೆರವು ಒದಗಿಸಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಬನಾಸ್ಕಾಂತದಲ್ಲಿ ನಡೆದ ರ‍್ಯಾಲಿ ವೇಳೆ ದುರಂತವನ್ನು ನೆನೆದಿದ್ದ ಮೋದಿ, ಕೆಲ ಕ್ಷಣ ಭಾವುಕರಾಗಿದ್ದರು. ಅಲ್ಲದೆ, ಮಂಗಳವಾರ (ನವೆಂಬರ್ 1) ಅವರು ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಲಿದ್ದಾರೆ.
ಇದನ್ನೂ ಓದಿ | Morbi Bridge Collapse | ಎಲ್ಲ ಕಾರ್ಯಕ್ರಮ ರದ್ದುಗೊಳಿಸಲೇ ಎನಿಸಿತ್ತು, ಸೇತುವೆ ಕುಸಿತ ಕುರಿತು ಭಾವುಕರಾದ ಮೋದಿ