Site icon Vistara News

Morbi Bridge Collapse: ಮೊರ್ಬಿ ಸೇತುವೆ ಕುಸಿತ ಬಳಿಕ ಕಣ್ಮರೆಯಾಗಿದ್ದ ಒರೇವ ಗ್ರೂಪ್‌ ಪ್ರಮೋಟರ್‌ ಜಯಸುಖ್‌ ಕೋರ್ಟ್‌ಗೆ ಶರಣು

Jaysukh Patel

#image_title

ಗಾಂಧಿನಗರ: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು (Morbi Bridge Collapse) 135 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಒರೇವ ಗ್ರೂಪ್‌ ಪ್ರಮೋಟರ್‌ ಜಯಸುಖ್‌ ಪಟೇಲ್‌ ಅವರು ಕೊನೆಗೂ ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಮೊರ್ಬಿ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದೆ.

ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಡೆಪ್ಯುಟಿ ಎಸ್‌ಪಿ ಪಿ.ಎಸ್‌.ಜಾಲಾ ಅವರು ಜನವರಿ 27ರಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣದಲ್ಲಿ ಜಯಸುಖ್‌ ಪಟೇಲ್‌ ಅವರು 10ನೇ ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ಆದಾಗ್ಯೂ, ಆರೋಪಿಯು ಬಂಧನದ ಭೀತಿಯಿಂದಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಈಗ ಕೋರ್ಟ್‌ಗೆ ಶರಣಾಗಿದ್ದಾರೆ.

ನೂರಾರು ವರ್ಷದ ಹಳೆಯ ಸೇತುವೆಯ ಪುನರ್‌ ನಿರ್ಮಾಣದ ಜವಾಬ್ದಾರಿಯನ್ನು ಒರೇವ ಗ್ರೂಪ್‌ಗೆ ವಹಿಸಲಾಗಿತ್ತು. ಆದರೆ, ಕೋಟ್ಯಂತರ ರೂ. ವ್ಯಯಿಸಿ, ನವೀಕರಿಸಿದ ಸೇತುವೆಯು ಉದ್ಘಾಟನೆಗೆ ಮೊದಲೇ ಕುಸಿದು ನೂರಾರು ಜನರನ್ನು ಬಲಿ ಪಡೆದ ಕಾರಣ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಪ್ರಕರಣದ ಉನ್ನತ ತನಿಖೆಗೂ ಆದೇಶಿಸಲಾಗಿತ್ತು.

ಇದನ್ನೂ ಓದಿ: Morbi Bridge Collapse | ತುಕ್ಕು ಹಿಡಿದ ಕೇಬಲ್ ಕಟ್ ಆಗಿ ಸೇತುವೆ ಕುಸಿದಿದ್ದರೆ, ಇದು ದೇವರ ಇಚ್ಛೆಯಂತೆ!

Exit mobile version