Site icon Vistara News

Morbi Bridge Collapse | ಇಂದು ಪ್ರಧಾನಿ ಭೇಟಿ, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸುಪ್ರೀಂಗೆ ಪಿಐಎಲ್

PM Narendra Modi

ನವದೆಹಲಿ: ಮೋರ್ಬಿ ಸೇತುವೆ ದುರಂತದಲ್ಲಿ (Morbi Bridge Collapse) ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿ, ಸಾಂತ್ವನ ಹೇಳಲಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಉನ್ನತಾಧಿಕಾರಿಗಳ ಮೀಟಿಂಗ್ ಕೂಡ ಅವರು ಮಾಡಿದ್ದರು. ಏತನ್ಮಧ್ಯೆ, ಮೋರ್ಬಿ ಬ್ರಿಡ್ಜ್ ಕುಸಿತವನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಕೂಡ ದಾಖಲಾಗಿದ್ದು, ನವೆಂಬರ್ 14ರಂದು ಕೋರ್ಟ್ ವಿಚಾರಣೆ ನಡೆಸಲಿದೆ.

ಭಾನುವಾರ ಸಂಭವಿಸಿದ ಈ ಮೋರ್ಬಿ ಬ್ರಿಡ್ಜ್ ದುರಂತದಲ್ಲಿ ಸುಮಾರು 140 ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ 47 ಮಕ್ಕಳಿದ್ದಾರೆ. ಮಹಿಳೆಯರು ಮತ್ತು ವಯಸ್ಸಾದವರು ಹೆಚ್ಚಿದ್ದಾರೆಂದು ತಿಳಿದು ಬಂದಿದೆ.

ಕುಸಿತ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲು ಆಗ್ರಹಿಸಿ ದಾಖಲಾಗಿರುವ ಪಿಐಎಲ್‌ನಲ್ಲಿ, ಹಳೆಯ ಮತ್ತು ಅಪಾಯಕಾರಿ ಸೇತುವೆಗಳ ಕುರಿತು ಸಮೀಕ್ಷೆ ನಡೆಸುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಬೇಕೆಂದು ಕೇಳಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಈ ಪಿಐಎಲ್ ವಿಚಾರಣೆ ನಡೆಯನ್ನು ನವೆಂಬರ್ 14ರಂದು ನಡೆಸಲಿದೆ.

ಇದೇ ವೇಳೆ, ಈ ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ, ಸೇತುವೆ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿದ್ದ ಒರೆವಾ ಕಂಪನಿಯ ವ್ಯವಸ್ಥಾಪಕರು, ಸೆಕ್ಯುರಿಟಿ ಗಾರ್ಡ್‌ಗಳು, ಗುತ್ತಿಗೆದಾರರು ಇದ್ದಾರೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಮೋರ್ಬಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ | Morbi Bridge Collapse | ಮೋರ್ಬಿ ಬ್ರಿಡ್ಜ್ ಕುಸಿತ ದೇವರ ಸಂದೇಶವಲ್ಲವೇ? ಮೋದಿಗೆ ಸಿದ್ದು ಪ್ರಶ್ನೆ!

Exit mobile version