ನವದೆಹಲಿ: 19ನೇ ಶತಮಾನದ ಎಂಜಿನಿಯರಿಂಗ್ ಅದ್ಭುತ ಎಂದೇ ಬಣ್ಣಿತವಾಗಿದ್ದ ಮೋರ್ಬಿ ಬ್ರಿಡ್ಜ್ (Morbi Bridge) ಫಿಟ್ನೆಸ್ ಸರ್ಟಿಫಿಕೇಟ್ ಪಡೆದುಕೊಂಡಿರಲಿಲ್ಲವೇ? ದುರಂತದ ಬಳಿಕ ಹೊರ ಬರುತ್ತಿರುವ ಮಾಹಿತಿಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತಿವೆ. ಸ್ಥಳೀಯ ಆಡಳಿತವು ಫಿಟ್ನೆಸ್ ಸರ್ಟಿಫಿಕೇಟೇ ನೀಡಿರಲಿಲ್ಲ! . ಈ ಅಂಶವೇ ಬ್ರಿಡ್ಜ್ ಕುಸಿತಕ್ಕೆ ಕಾರಣವಾಯಿತೇ? ಈ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಖಚಿತವಾಗಲಿದೆ.
ಶಿಥಿಲಾವಸ್ಥೆಯಲ್ಲಿದ್ದ ಬ್ರಿಡ್ಜ್ ಅನ್ನು ಜನರಿಗೆ ಮುಕ್ತಗೊಳಿಸಿದ್ದೇಕೆ ಎಂಬ ಮೂಲ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಜೀರ್ಣೋದ್ಧಾರಕ್ಕೆ ಸಾರ್ವಜನಿಕರಿಗೆ ಮುಚ್ಚಲಾಗಿದ್ದಈ ಸೇತುವೆಯನ್ನು ಅಕ್ಟೋಬರ್ 26ರಂದು ಮುಕ್ತಗೊಳಿಸಲಾಗಿತ್ತು. ಅಕ್ಟೋಬರ್ 29ರಂದು ಅಂದರೆ ಭಾನುವಾರ ಮಾತ್ರವೇ ಸಾಮರ್ಥ್ಯಕ್ಕೂ ಮೀರಿ ಜನರನ್ನು ಬ್ರಿಡ್ಜ್ ಮೇಲೆ ಹೋಗಲು ಬಿಟ್ಟಿದ್ದು ದುರಂತಕ್ಕೆ ಕಾರಣವಾಯಿತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಈ ಸೇತುವೆಯನ್ನು ಜೀರ್ಣೋದ್ಧಾರ ಮಾಡಿದ್ದ ಖಾಸಗಿ ಕಂಪನಿಯು ಮುನ್ಸಿಪಾಲ್ಟಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯದೇ ಸಂಬಂಧಿಸಿದ ಆಡಳಿತಕ್ಕೆ ಹಸ್ತಾಂತರ ಮಾಡಿತ್ತು. 15 ವರ್ಷಗಳ ನಿರ್ವಹಣೆಗಾಗಿ ಈ ಸೇತುವೆಯನ್ನು ಒರೆವಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಏತನ್ಮಧ್ಯೆ, ಒರೆವಾ ಗ್ರೂಪ್ ಕಂಪನಿಯು ಈ ಬಗ್ಗೆ ಹೇಳಿಕೆ ನೀಡಿದ್ದು, ಸಾಮರ್ಥ್ಯವನ್ನು ಮೀರಿ ಜನರನ್ನು ಸೇತುವೆ ಮೇಲೆ ಹೋಗಲು ಅನುಮತಿ ನೀಡಿದ್ದು ದುರ್ಘಟನೆಗೆ ಕಾರಣ ಎಂದು ಹೇಳಿದೆ.
ಇದನ್ನೂ ಓದಿ | Morbi Bridge Collapse | ಪ್ರತ್ಯಕ್ಷದರ್ಶಿಗಳ ಕಣ್ಣಲ್ಲಿ ಮೋರ್ಬಿ ಸೇತುವೆ ದುರಂತದ ಕ್ಷಣಗಳು