ಇಂದೋರ್, ಮಧ್ಯಪ್ರದೇಶ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮಾಜಿ ಮುಖ್ಯಸ್ಥ ಎಂ ಎಸ್ ಗೋಲ್ವಾಲ್ಕರ್ (MS Golwalkar) ಅವರ ವಿರುದ್ಧ ಅವಮಾನಕಾರಿ ಟ್ವೀಟ್ ಮಾಡಿದ ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (Digvijaya Singh) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರ ರಾತ್ರಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸ್ಥಳೀಯ ವಕೀಲ ಮತ್ತು ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಜೋಶಿ ಅವರು ಕೇಸ್ ದಾಖಲಿಸಿದ್ದಾರೆ ಎಂದು ತುಕೋಗಂಜ್ ಪೊಲೀಸ್ ಸ್ಟೇಷನ್ ಅಧಿಕಾರಿ ತಿಳಿಸಿದ್ದಾರೆ.
ದಲಿತರು, ಹಿಂದುಳಿದ ವರ್ಗಗಳು, ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಸಂಘರ್ಷವನ್ನು ಸೃಷ್ಟಿಸುವ ಮೂಲಕ ಜನರನ್ನು ಪ್ರಚೋದಿಸಲು ಗುರೂಜಿ ಅವರ ಹೆಸರು ಮತ್ತು ಚಿತ್ರವನ್ನು ಹೊಂದಿರುವ ವಿವಾದಾತ್ಮಕ ಪೋಸ್ಟರ್ ಅನ್ನು ದಿಗ್ವಿಜಯ್ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಷೇರ್ ಮಾಡಿಕೊಂಡಿದ್ದಾರೆಂದು ಜೋಶಿ ಅವರು ದಾಖಲಿಸಿರುವ ಎಫ್ಐಆರ್‌ನಲ್ಲಿ ದೂರಿದ್ದಾರೆ.
गुरु गोलवलकर जी के दलितों पिछड़ों और मुसलमानों के लिए व राष्ट्रीय जल जंगल व ज़मीन पर अधिकार पर क्या विचार थे अवश्य जानिए। @INCIndia @INCMP pic.twitter.com/dIYLrGUHQ3
— digvijaya singh (@digvijaya_28) July 7, 2023
ಈ ಸುದ್ದಿಯನ್ನೂ ಓದಿ: ಈ ಹಿಂದೆ ಜಗಳಾಡಿ, ಮಾನನಷ್ಟ ಕೇಸ್ ಹಾಕಿದ್ದ ದಿಗ್ವಿಜಯ್ ಸಿಂಗ್ ಜತೆ ವೇದಿಕೆ ಹಂಚಿಕೊಂಡ ನಿತಿನ್ ಗಡ್ಕರಿ!
ದಿಗ್ವಿಜಯ್ ಸಿಂಗ್ ಅವರು ಟ್ವೀಟ್ ವಿವಾದಕ್ಕೀಡಾಗುತ್ತಿದ್ದಂತೆ ಅವರು ಮತ್ತೊಂದು ಟ್ವೀಟ್ ಮಾಡಿ, ಅಮಿತ್ ಶಾ, ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ನಿಮ್ಮನ್ನು ನಿಂದಿಸುತ್ತಿದ್ದವರ ಗುಂಪನ್ನೇ ನೀವು ಸಾಕುತ್ತಿದ್ದೀರಿ. ಅವರೀಗ ನಿಮ್ಮನ್ನು ಹಾಡಿ ಹೊಗಳುತ್ತಿದ್ದಾರೆ. ನೀವು ಅಧಿಕಾರ ಕಳೆದುಕೊಂಡ ಮರುಕ್ಷಣವೇ ನಿಮ್ಮನ್ನು ಬಿಟ್ಟು ಬಿಡುತ್ತಾರೆ. ನಿಮ್ಮ ಕೆಟ್ಟ ಸಮಯದಲ್ಲಿ ನಿಮಗೆ ಬೆಂಬಲ ನೀಡಿದವರೆಲ್ಲರೂ ಮನೆಯಲ್ಲಿ ಕುಳಿತಿದ್ದಾರೆ. ನೀವಿಬ್ಬರೂ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.
ನಾನು ನಿಮ್ಮ ಟೀಕೆಕಾರ ಮತ್ತು ಹಾಗೆಯೇ ಇರುತ್ತೇನೆ. ಯಾಕೆಂದರೆ, ನಾನು ಮೂಲಭೂತವಾಗಿ ವಿರೋಧಿಸುವ ನಿಮ್ಮ ಸಿದ್ಧಾಂತದೊಂದಿಗೆ ನೀವು ಎಂದಿಗೂ ರಾಜಿ ಮಾಡಿಕೊಂಡಿಲ್ಲ, ಹಾಗಾಗಿ ನಾನು ನಿಮ್ಮ ಫ್ಯಾನ್. ಆ ದೇವರು ನಿಮ್ಮ ಒಳ್ಳೆಯ ಬುದ್ಧಿ ಕೊಡಲಿ ಎಂದು ದಿಗ್ವಿಜಯ್ ಸಿಂಗ್ ಅವರು ಟ್ವೀಟ್ ಮಾಡಿ ಆರೆಸ್ಸೆಸ್ ಮತ್ತು ಬಿಜೆಪಿಗೆ ಟ್ಯಾಗ್ ಮಾಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.