Site icon Vistara News

MPhil Degree: ವಿದ್ಯಾರ್ಥಿಗಳೇ… ಎಂಫಿಲ್‌ಗೆ ಯುಜಿಸಿ ಮಾನ್ಯತೆ ಇಲ್ಲ, ಅಡ್ಮಿಶನ್ ಮಾಡಬೇಡಿ!

Mphil is not recognised degree by ugs, dont get admission

ನವದೆಹಲಿ: ಮಾಸ್ಟರ್ ಆಫ್ ಫಿಲಾಸಫಿ(Master of Philosophy – MPhil) ಮಾನ್ಯತೆಯನ್ನು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು (University Grants Commission – UGC) ಹಿಂದಕ್ಕೆ ಪಡೆದುಕೊಂಡಿದ್ದು, ಈ ಕುರಿತು ವಿದ್ಯಾರ್ಥಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಎಂಫಿಲ್‌ ಪ್ರವೇಶ ಪಡೆಯಬಾರದು ಎಂದು ಸೂಚಿಸಿದೆ. ಮಾನ್ಯತೆಯನ್ನು ರದ್ದುಗೊಳಿಸಿದ ಬಳಿಕವೂ ಕೆಲವು ವಿಶ್ವವಿದ್ಯಾಲಯಗಳು ಎಂಫಿಲ್‌ಗೆ ಪ್ರವೇಶಾತಿಯನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಯುಜಿಸಿ ಎಚ್ಚರಿಕೆಯನ್ನು ನೀಡಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಈ ಹಿಂದೆಯೇ ಎಂಫಿಲ್ ಪದವಿಯನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು. ಅಲ್ಲದೇ, ಎಂಫಿಲ್ ಕೋರ್ಸ್‌ಗಳನ್ನು ಆಫರ್ ಮಾಡದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಾಕೀತು ಮಾಡಿತ್ತು. ಅದರ ಹೊರತಾಗಿಯೂ ಕೆಲವು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಎಂಫಿಲ್‌ಗೆ ಪ್ರವೇಶಾತಿಯನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 2023-24ರ ಶೈಕ್ಷಣಿಕ ವರ್ಷದ ಎಂಫಿಲ್ ಕೋರ್ಸ್ ಪ್ರವೇಶಾತಿಗಳನ್ನು ಸ್ಥಗಿತಗೊಳಿಸುವಂತೆ ಯುಜಿಸಿ ಸೂಚಿಸಿದೆ.

ಅಧಿಕೃತ ಅಧಿಸೂಚನೆಯಲ್ಲಿ ವಿಶ್ವವಿದ್ಯಾಲಯ ಧನ ಸಾಹಾಯ ಆಯೋಗ, ಕೆಲವು ವಿಶ್ವವಿದ್ಯಾಲಯಗಳು ಎಂಫಿಲ್ (ಮಾಸ್ಟರ್ ಆಫ್ ಫಿಲಾಸಫಿ) ಕಾರ್ಯಕ್ರಮಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವುದು ಯುಜಿಸಿಯ ಗಮನಕ್ಕೆ ಬಂದಿದೆ. ಹಾಗಾಗಿ, ಈ ಕುರಿತು ತಮ್ಮ ಗಮನಕ್ಕೆ ತರುತ್ತಿರುವುದು ಏನೆಂದರೆ, ಪಿಎಫಿ ಡಿಗ್ರಿ ಮಾನ್ಯತೆ ಪಡೆದ ಪದವಿಯಲ್ಲ ಎಂದು ತಿಳಿಸಿದೆ.

ಅಧಿಸೂಚನೆಯು ಯುಜಿಸಿಯ ನಿಯಮಾವಳಿ ಸಂಖ್ಯೆ 14 (ಪಿಎಚ್‌ಡಿ ಪದವಿ ಪ್ರಶಸ್ತಿಗಾಗಿ ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಗಳು 2022 ಕುರಿತು ಮಾಹಿತಿ ನೀಡಿದ್ದು, ಈ ನಿಯಮ ಅನ್ವಯ ಉನ್ನತ ಶಿಕ್ಷಣ ಸಂಸ್ಥೆಗಳು ಎಂಫಿಲ್ ಕಾರ್ಯಕ್ರಮಗಳನ್ನು ನೀಡುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗುತ್ತದೆ ಎಂದು ತಿಳಿಸಿದೆ.

ಮುಂಬರುವ ಶೈಕ್ಷಣಿಕ ವರ್ಷಕ್ಕಾಗಿ ಎಂಫಿಲ್ ಪ್ರವೇಶಾತಿ ಮಾಡಿಕೊಂಡಿದ್ದರೆ ಈ ಕೂಡಲೇ ಆ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಎಂಫಿಲ್ ಪ್ರವೇಶಾತಿ ಪಡೆದುಕೊಳ್ಳದಂತೆ ಸೂಚಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: UGC’s Draft: ಕಾಲೇಜು ವಿದ್ಯಾರ್ಥಿಗಳಿಗೆ ರಾಮಾಯಣ, ಮಹಾಭಾರತದ ಪಾಠ; ಯುಜಿಸಿ ಚಿಂತನೆ

Exit mobile version